ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ಶೂಟಿಂಗ್ ಸೆಟ್ ನಲ್ಲಿ ಆಕಳಿಸುತ್ತಿರುವ ಅನುಷ್ಕಾ ವಿಡಿಯೋ ವೈರಲ್

ನಟನೆ ಎಂದು ಬಂದಾಗ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಬಗ್ಗೆ ಹೇಳಬೇಕಿಲ್ಲ. ಮೋಸ್ಟ್ ಟ್ಯಾಲೆಂಟೆಡ್ ನಟಿ.ಅಷ್ಟೇ ಅಲ್ಲದೆ  ಅನುಷ್ಕಾ ಶರ್ಮಾ  ಚಿತ್ರತಂಗದಲ್ಲಿ ಬುದ್ಧಿ ಮತ್ತು ಹಾಸ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈಗ ಇತ್ತೀಚಿನ ಜಾಹಿರಾತು ಶೂಟಿಂಗ್ ವಿಡಿಯೋವನ್ನು ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಈ ವೀಡಿಯೊದಲ್ಲಿ, ಅನುಷ್ಕಾ ಸೆಟ್‌ ನಲ್ಲಿ ಆಕಳಿಸುತ್ತಿರುವುದು ಕಂಡುಬರುತ್ತದೆ. “ಇಲ್ಲ! ನಾನು ಕೆಲಸ ಮಾಡುವಾಗ  ಆಕಳಿಸುತ್ತಿರಲಿಲ್ಲ. ನಿಸ್ಸಂಶಯವಾಗಿ ಅಲ್ಲ” ಎಂದು ವೀಡಿಯೋ ತುಣುಕಿಗೆ ಶೀರ್ಷಿಕೆ ನೀಡಿದ್ರು ಅನುಷ್ಕಾ.

ವೀಡಿಯೊ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ಸ್ ಮಾಡಿದ್ರು. ” ಈ ಹೇರ್ ಸ್ಟೈಲ್ ನಿಮಗೆ ತುಂಬಾ ಸರಿಹೊಂದುತ್ತದೆ, ” ಎಂದು ಅವರ ಫಾಲೋವರ್ಸ್ ಒಬ್ಬರು ಬರೆದಿದ್ದಾರೆ. ” ತುಂಬಾ ಮುದ್ದಾದ, ” ಮತ್ತು ” ಮೋಹಕವಾದ ” ಮುಂತಾದ ಕಾಮೆಂಟ್ ಗಳಿಂದ ತುಂಬಿಹೋಗಿದೆ

ಅನುಷ್ಕಾ ಇನ್ನೂ ಯಾವುದೇ ಪ್ರಾಜೆಕ್ಟ್ ಗೆ ಸಹಿ ಹಾಕಿಲ್ಲ. ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ ಜೊತೆಯಾಗಿ ನಟಿಸಿರುವ ಆನಂದ್ ಎಲ್ ರಾಯ್ ಅವರ  ಜೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ವಿಶ್

#anushkasharma #anushkasharmayawning #bollywood

Tags