ಸುದ್ದಿಗಳು

ಚಿತ್ರರಂಗದಲ್ಲಿನ ತನ್ನ 14 ವರ್ಷದ ಪಯಣವನ್ನು ನೆನೆದ ಸ್ವೀಟಿ ಶೆಟ್ಟಿ

ಚಿತ್ರರಂಗ ನನ್ನ ಆಕಸ್ಮಿಕ ಪಯಣ ಅಂದ್ರು ಅನುಷ್ಕಾ ಶೆಟ್ಟಿ

ಹೈದ್ರಾಬಾದ್, ಮಾ.16:

‘ಅರುಂಧತಿ’ ಚಿತ್ರದಲ್ಲಿನ ಅಬ್ಬರ, ನೈಜತೆಯನ್ನು ಆವರಿಸಿಕೊಂಡಂತಿದ್ದ ನಟನೆ ನೋಡಿದ ಅದೆಷ್ಟೋ ಮಂದಿ ಹಿರೋಯಿನ್ ಕುರಿತಂತೆ ಗೂಗಲ್ ಸರ್ಚ್ ನಲ್ಲಿ ತೊಡಗಿದ್ದರಂತೆ. ಅಂದಹಾಗೆ ನಟಿ ಅನುಷ್ಕಾ ಶೆಟ್ಟಿ 2005ರಲ್ಲಿ ತೆರೆಕಂಡ ‘ಸೂಪರ್’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರೂ, ಆಕೆ ದೇಶದ ಗಮನ ಸೆಳೆದಿದ್ದು ‘ಅರುಂಧತಿ’ ಚಿತ್ರದ ಮೂಲಕ.

ಬಳಿಕ ನಟಿಸಿದ ‘ಬಾಹುಬಲಿ’ ಚಿತ್ರ ಆಕೆಯನ್ನು ಅಂತರಾಷ್ಟ್ರೀಯ ಮಟ್ಟದವರೆಗೂ ಕೊಂಡೊಯ್ಯುವಂತೆ ಮಾಡಿತು. ‘ವಿಕ್ರಮಾರ್ಕುಡು’, ‘ಡಾನ್’, ‘ಅರುಂಧತಿ’, ‘ಬಿಲ್ಲಾ’, ‘ಬಾಹುಬಲಿ’, ‘ಭಾಗಮತಿ’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಉಳಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕವಂತೆ. ತಾನು ಚಿತ್ರರಂಗಕ್ಕೆ ಬರುತ್ತೇನೆ. ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂಬುದನ್ನು ಸ್ವತಃ ಆಕೆ ಕಲ್ಪನೆಯೂ ಮಾಡಿರಲಿಲ್ಲವಂತೆ. ಈ ಕುರಿತಂತೆ ಸ್ವತಃ ಸ್ವೀಟಿ ಶೆಟ್ಟಿ ಹೇಳಿಕೊಂಡಿದ್ದು, ತಮ್ಮ ಸಿನಿ ಜೀವನದ ಕುರಿತಂತೆ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಚಿತ್ರರಂಗಕ್ಕೆ ಬಂದು 14 ವರ್ಷ ಪೂರೈಸಿದ ಅನುಷ್ಕಾ

ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 14 ವರ್ಷಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಂದರ ಹಿಂದೊಂದರಂತೆ ಯಶಸ್ಸಿನ ಮೆಟ್ಟಿಲು ಹತ್ತಿರುವ ಅನುಷ್ಕಾ ಶೆಟ್ಟಿಗೆ, 2005ರಲ್ಲಿ ತೆರೆ ಕಂಡ ‘ಸೂಪರ್’ ಚಿತ್ರದಲ್ಲಿ ಆಕಸ್ಮಿಕವಾಗಿ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತಂತೆ. “ನಾನು ಬಣ್ಣದ ಜಗತ್ತಿಗೆ ಬರಬೇಕು ಎಂದು ಬಯಸಿರಲಿಲ್ಲ. ಅದೊಂದು ಅಚಾನಕ್ ಪಯಣ. ಪುರಿ ಜಗನ್ನಾಥ್ ಸಿನಿಮಾ ‘ಸೂಪರ್’ ಗಾಗಿ ಹಿರೋಯಿನ್ ಹುಡುಕುತ್ತಿದ್ದಾಗ ಅವರ ಗೆಳೆಯರೊಬ್ಬರು ನನ್ನ ಬಗ್ಗೆ ಹೇಳಿದ್ದರು.

ಹೀಗಾಗಿ ಪುರಿ ಜಗನ್ನಾಥ್ ಅವರ ಬೇಡಿಕೆ ಮೇರೆಗೆ ಹೈದ್ರಾಬಾದ್ ಗೆ ಬಂದೆ. ಬಂದಾಗಲು ನನಗೆ ಅವಕಾಶ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ.  ಇದೀಗ ಬಣ್ಣದ ಜಗತ್ತಿಗೆ ಬಂದು 14 ವರ್ಷಗಳಾಗುತ್ತಿದೆ. ನನಗಾಗಿ ಶ್ರಮಿಸಿದ, ಸಮಯ ಮೀಸಲಿಟ್ಟ ನಿರ್ದೇಶಕರು, ನಿರ್ಮಾಪಕರು ನನ್ನ ಬದುಕು ಬದಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ” ಎಂದಿದ್ದಾರೆ ಅನುಷ್ಕಾ.

ಅಂದಹಾಗೆ ಅನುಷ್ಕಾ ಬಾಹುಬಲಿ ಚಿತ್ರದ ನಂತರ ಭಾಗಮತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಬಳಿಕ ಯಾವುದೇ ಚಿತ್ರದಲ್ಲಿ ನಟಿಸದೇ ವಿಶ್ರಾಂತಿ ಮೊರೆಹೋಗಿದ್ದಾರೆ.  ಸದ್ಯಕ್ಕೆ ಅವರು ಇನ್ನೂ ಹೆಸರಿಡದ ಮಾಧವನ್ ಹಿರೋ ಆಗಿ ಅಭಿನಯಿಸುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರ ಜೊತೆಗೆ ಇನ್ನಿತರ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಅದ್ದೂರಿಯಾಗಿ ನಡೆಯಿತು ರಿಷಬ್ ಶೆಟ್ಟಿ ಪತ್ನಿಯ ಸೀಮಂತ ಕಾರ್ಯ…!

#anushkashetty #balkaninews #tollywood #telugumovies #anushkashettymovies #anushkashettyinstagram

Tags

Related Articles