ಸುದ್ದಿಗಳು

ತೂಕ ಇಳಿಸಿಕೊಳ್ಳಲು ಅನುಷ್ಕಾ ಮಾಡಿದ್ದೇನು..?

‘ಸೈಜ್ ಝೀರೋ’ ಚಿತ್ರಕ್ಕೋಸ್ಕರ ತೂಕ ಹೆಚ್ಚಿಸಿಕೊಂಡ ಅನುಷ್ಕಾ

ಹೈದರಾಬಾದ್,ಅ.11: ‘ಬಾಹುಬಲಿ- ೨’ ಮೂಲಕ ಸಾಕಷ್ಟು ಹೆಸರು ಗಳಿಸಿದ ನಟಿ ಅನುಷ್ಕಾ ಸದ್ಯ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಹೌದು, ನಟಿ ಅನುಷ್ಕಾ ಅಂದ ತಕ್ಷಣ ಥಟ್ ಅಂತಾ ನೆನಪಾಗೋದು ‘ಬಾಹುಬಲಿ ೨’ ನಲ್ಲಿ ನಟಿಸಿದ ಅನುಷ್ಕಾರ ಪಾತ್ರ. ಈ ಸಿನಿಮಾದ ಮೂಲಕ ಮತ್ತಷ್ಟು ಹೆಸರು ಮಾಡಿದ ನಟಿ ಅನುಷ್ಕಾ. ಈಗಾಗಲೇ ಬಹಳಷ್ಟು ಸಿನಿಮಾಗಳ ಮೂಲಕ ಹೆಸರು ಮಾಡಿರುವ ಈ ನಟಿ ಸದ್ಯ ವಿದೇಶಕ್ಕೆ ಹಾರಿದ್ದಾರೆ. ಅದಕ್ಕೆ ಕಾರಣ ಅವರ ತೂಕ.

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಅನುಷ್ಕಾ

ಹೌದು, ನಟಿ ಮಣಿಯರಿಗೆ ಕೆಲವೊಮ್ಮೆ ತೂಕವೂ ಬೇಕು, ಇನ್ನು ಕೆಲವೊಮ್ಮೆ ಸಣ್ಣವೂ ಮುಖ್ಯ. ಯಾಕಂದರೆ ಕೆಲವೊಂದು ಸಿನಿಮಾಗಳಲ್ಲಿ ನಟಿಯರು ಹಾಗಿರಬೇಕಾಗುತ್ತದೆ. ಇದೀಗ ಸೌತ್ ಸಿನಿ ದುನಿಯಾದ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ, ಪಾಡೂ ಈಗ ಹೀಗೆ ಆಗಿದೆ. ‘ಸೈಜ್ ಝೀರೋ’ ಚಿತ್ರಕ್ಕೋಸ್ಕರ ತೂಕ ಹೆಚ್ಚಿಸಿಕೊಂಡ ಅನುಷ್ಕಾ, ಇದೀಗ ಏನೇನೋ ಸರ್ಕಸ್ ಮಾಡಿ, ಸಣ್ಣಗಾಗೋಕೆ ಸಾಧ್ಯವಾಗದೇ ಈಗ ಫಾರಿನ್​ ಫ್ಲೈಟ್ ಹತ್ತಿದ್ದಾಳಂತೆ.

Image result for anushka shetty

ತೂಕ ಇಳಿಸಿಕೊಳ್ಳಲು ವಿದೇಶಕ್ಕೆ ಪ್ರಯಾಣ

‘ಸೈಜ್ ಝೀರೋ’ ಸಿನಿಮಾಗಾಗಿ ಅನುಷ್ಕಾ ತಮ್ಮ ತೂಕ ಹೆಚ್ಚಿಸಿಕೊಂಡಿದ್ದರು. ಈ ಸಿನಿಮಾದ ಮುಖ್ಯ ಅಂಶ, ದಪ್ಪಗಿರುವವರ ಕಷ್ಟ ಏನು ಅನ್ನೋದನ್ನು ತೋರಿಸುವ ಉದ್ದೇಶ. ಇದೀಗ ಈ ಸಿನಿಮಾಗಾಗಿ ದಪ್ಪ ಆಗಿದ್ದ ಈ ನಟಿ ಸದ್ಯ ತೂಕ ಇಳಿಸಿಕೊಳ್ಳಲು ಬಹಳಷ್ಟು ಹರಸಾಹಸ ಪಡುತ್ತಿದ್ದಾರೆ. ಯೋಗ, ವ್ಯಾಯಾಮದಿಂದಲೇ ತಮ್ಮ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಇದೀಗ ಅದು ಸಾಧ್ಯವಾಗದೇ ಇದ್ದದ್ದಕ್ಕೆ ವಿದೇಶಕ್ಕೆ ಹಾರಿದ್ದಾರೆ.

೨೦ ದಿನಗಳ ಕಾಲ ವಿದೇಶದಲ್ಲಿ

ಅನುಷ್ಕಾ ಮೊದಲಿನಂತೆ ಬಳಕುವ ಬಳ್ಳಿಯಾಗೋಕೆ ಏನೇ ಮಾಡಿದರೂ ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಆಸ್ಟ್ರಿಯಾದಲ್ಲಿ ಡೆಟಾಕ್ಸ್ ಮತ್ತು ಸ್ಪಾ ಮೊರೆ ಹೋಗ್ತಿದ್ದಾರೆ. 20 ದಿನಗಳ ಕಾಲ ಆಸ್ಟ್ರಿಯಾದಲ್ಲಿ ಸ್ಪಾ ಕ್ಲಿನಿಕ್​ನಲ್ಲಿ ಉಳಿದುಕೊಳ್ಳಲಿರೋ ಅನುಷ್ಕಾ ತೂಕ ಇಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ.

 

Tags