ಸುದ್ದಿಗಳು

ಕರಾಟೆಕಿಂಗ್ ಶಂಕರ್ ನಾಗ್ ರಿಂದ ಸ್ಪೂರ್ತಿಗೊಂಡ ಅನುಶ್ರೀ

ಸಮಯ ಪರಿಪಾಲನೆ ಮಾಡುವುದಕ್ಕೆ ನಟ-ನಿರ್ದೇಶಕ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ : ಅನುಶ್ರೀ

ಬೆಂಗಳೂರು, ಸ.14: ಪ್ರತಿಯೊಬ್ಬರಿಗೂ ಒಬ್ಬೊಬ್ಬರು ಸ್ಪೂರ್ತಿಯಾಗಿರುತ್ತಾರೆ. ಅದನ್ನು ಅವರು ಹೇಳಿಕೊಂಡಿರುತ್ತಾರೆ. “ನನಗೆ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಸ್ಪೂರ್ತಿ. ಅವರ ಸಮಯ ಪಾಲನೆಯ ಬಗ್ಗೆ ಕೇಳಿದ್ದೇನೆ. ಅವರಿಂದ ನಾನು ಸಾಕಷ್ಟು ಕಲಿತ್ತಿದ್ದೀನಿ’ ಎಂದು ನಿರೂಪಕಿ –ನಟಿ ಅನುಶ್ರೀ ಹೇಳಿದ್ದಾರೆ.

ನಟ ಶಂಕರ್ ನಾಗ್

ಇವತ್ತು ನಮ್ಮೊಟ್ಟಿಗಿಲ್ಲದ ಮಹಾನ್ ಚೇತನ್ ರಾಗಿರುವ ನಟ ಶಂಕರ್ ನಾಗ್. ಇವರ ಬಗ್ಗೆ ತಿಳಿದುಕೊಳ್ಳಲು ಅನುಶ್ರೀ ಗೆ ಒಂದು ಕಾರಣವಿದೆ. ಈ ಹಿಂದೆ ನಟ -ನಿರ್ದೇಶಕ ರವಿಚಂದ್ರನ್ ಒಮ್ಮೆ ಸಂದರ್ಶನವೊಂದರಲ್ಲಿ ಶಂಕರ್ ನಾಗ್ ಅವರ ಬಗ್ಗೆ ಮಾತನಾಡುತ್ತಾ, ಅವರ ಸಮಯಪಾಲನೆ ಬಗ್ಗೆ ಹೇಳಿದ್ದರಂತೆ. ಇದನ್ನು ತಿಳಿದುಕೊಂಡ ಅನುಶ್ರೀಗೆ ಸಮಯದ ಬಗ್ಗೆ ಅರಿವಾಗಿದೆ. ಅಂದಿನಿಂದ ಇಲ್ಲಿಯವರೆಗೂ ಅವರು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾರಂಭಿಸಿದರಂತೆ.

ಖಾಸಗಿ ವಾಹಿನಿಯಲ್ಲಿ ಸಂದರ್ಶನ

ದಿ. ನಟ ಶಂಕರ್ ನಾಗ್ ಅವರ ಬಗ್ಗೆ ಸ್ವತಃ ಅನುಶ್ರೀ ಅವರೇ ಖಾಸಗಿ ವಾಹಿನಿ ಪಬ್ಲಿಕ್ ಟಿ.ವಿಯೊಂದರ ಸಂದರ್ಶನದಲ್ಲಿ ಭಾಗವಹಿಸಿ ಸಮಯದ ಪರಿಪಾಲನೆಯ ಬಗ್ಗೆ ಹೇಳಿಕೊಂಡಿದ್ದಾರೆ.

“ಅಂದಿನ ಕಾಲದಲ್ಲಿ ರಾಜ್ಕುಮಾರ್, ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಎಲ್ಲರೂ ನನ್ನ ಫೇವರೇಟ್. ಅವರಲ್ಲಿ ಯಾರು ಇಷ್ಟ ಹೇಳೋದಕ್ಕೆ ಆಗಲ್ಲ. ಅಂದಿನ ಕಾಲದ ನಟರಲ್ಲಿ ಇವರಿಷ್ಟ, ಇವರು ಅಲ್ಲ ಅಂತಾ ಡಿವೈಡ್ ಮಾಡೋದಕ್ಕೆ ಸಾಧ್ಯನೇ ಇಲ್ಲ” ಅಂತ ಹೇಳಿದ್ದಾರೆ.

ಸಿನಿಮಾಗಳಲ್ಲಿ ಅಭಿನಯ

ಈಗಾಗಲೇ ಅನುಶ್ರೀಯವರು ‘ರಿಂಗ್ ಮಾಸ್ಟರ್’,’ಬೆಂಕಿಪಟ್ಣ’,’ಉಪ್ಪು ಉಳಿ ಖಾರ’ ಈ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ನಿರೂಪಕಿಯಾಗಿಯೇ ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ.

Tags

Related Articles