ಸುದ್ದಿಗಳು

‘ಜಾತ್ರೆ’ ಸಿನಿಮಾದಲ್ಲಿ ಅಪೇಕ್ಷಾ ಪುರೋಹಿತ್

ಬೆಂಗಳೂರು, ಜ.18:

ನಟಿ ಹಾಗೂ ಭರವಸೆಯ ನಿರ್ದೇಶಕರ ಪತ್ನಿ ಅಪೇಕ್ಷಾ ಪುರೋಹಿತ್ ಕಿರುತೆರೆಯ ಮೂಲಕ ಹೆಸರು ಮಾಡಿ ಹಿರಿತೆರೆಗೂ ಕಾಲಿಟ್ಟು ಅಲ್ಲಿಯೂ ಸ್ಥಾನ ಕಾಯ್ದುಕೊಂಡವರು‌. ಈಗಾಗಲೇ ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದ ಈ ನಟಿ ಇದೀಗ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.

‘ಕಾಫೀತೋಟ’ ಚಿತ್ರದ ನಂತರ ‘ಜಾತ್ರೆ’

ಹೌದು, ‘ಜಾತ್ರೆ’ ಸಿನಿಮಾ ಮೂಲಕ ಮತ್ತೆ ಅಪೇಕ್ಷಾ ಪ್ರೇಕ್ಷಕರಿಗೆ ಮನೋರಂಜಿಸಲು ರೆಡಿಯಾಗಿದ್ದಾರೆ. ಈ ಮೂಲಕ ಮತ್ತೆ ಸಿನಿಮಾಗೆ ಬರಲು ರೆಡಿಯಾಗಿದ್ದಾರೆ ಈ ನಟಿ. ರವಿ ತೇಜ ನಿರ್ದೇಶನ ಮಾಡುತ್ತಿರುವ ಸಿನಿಮಾವೇ ‘ಜಾತ್ರೆ’. ಈ ಸಿನಿಮಾಗೆ ಅಪೇಕ್ಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕುಂದಾಪುರ ಹಳ್ಳಿಯೊಂದರ ಹುಡುಗಿ ಪಾತ್ರ ನಿರ್ವಹಿಸುತ್ತಿದ್ದಾರೆ ಅಪೇಕ್ಷಾ. ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಅಮಿತ್ ಪೂಜಾರಿ.  ಮಣಿಕಾಂತ್ ಕದ್ರಿ ರಾಗ ಸಂಯೋಜನೆ ಮಾಡಿದ್ದಾರೆ.

ಏಪ್ರಿಲ್ ನಲ್ಲಿ ತೆರೆಗೆ

ಈ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣುವ ಹಂತದಲ್ಲಿದೆ. ಇನ್ನು, ‘ಭಾಗ್ಯಲಕ್ಷ್ಮಿ’ ಮತ್ತು ‘ತ್ರಿವೇಣಿ ಸಂಗಮ’ ಧಾರವಾಹಿಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು ಅಪೇಕ್ಷಾ. ಅದಾದ ನಂತರ ‘ಕಿನಾರೆ’,  ಮತ್ತು ‘ಕಾಫಿ ತೋಟ’ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು’ ಕಾಫಿ ತೋಟ’  ನಂತರ ಈ ನಟಿ ‘ಜಾತ್ರೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

#sandalwood #kannadamovies #apekshapurohit #koffeethotakannadamovie #balkaninews

Tags