ಸುದ್ದಿಗಳು

‘ಆ್ಯಪಲ್ ಕೇಕ್’ ನ ವೆರೈಟಿ ಹಾಡುಗಳನ್ನು ಕೇಳಿ ಆನಂದಿಸಿ

ಮ್ಯೂಸಿಕ್ ಬಜಾರ್ ಸಂಸ್ಥೆಯಿಂದ ಧ್ವನಿಸುರುಳಿ ಬಿಡುಗಡೆ

ಬೆಂಗಳೂರು, ಅ.03: ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಹಾಗೂ ಟ್ರೈಲರ್ ಮೂಲಕ ಗಮನ ಸೆಳೆದಿದ್ದ ‘ಆ್ಯಪಲ್ ಕೇಕ್’ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದ್ದು, ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿವೆ. ರಂಜಿತ್ ಕುಮಾರ್ ಗೌಡ ನಿರ್ದೇಶನ ಮಾಡಿರುವ ಈ ಚಿತ್ರವು ಸದ್ಯದಲ್ಲಿಯೇ ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ.

 

ಮೂರು ಭಾಷೆಯಲ್ಲಿ

ಬೇಕರಿಯಲ್ಲಿ ಅಳಿದುಳಿದ ಪದಾರ್ಥಗಳನ್ನು ಸೇರಿಸಿ ‘ಆ್ಯಪಲ್ ಕೇಕ್’ ತಯಾರಿಸುತ್ತಾರೆ. ಹಾಗೆಯೇ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ತಿರಸ್ಕಾರಗೊಂಡ ಒಂದಷ್ಟು ಜನರು ಒಂದೆಡೆ ಸೇರಿ ಮಾಡುವ ಸಾಧನೆಯ ಕತೆಯನ್ನು ಈ ಚಿತ್ರದ ಮೂಲಕ ತೋರಿಸಲಾಗುತ್ತಿದೆ. ಹಾಗೆಯೇ ಈ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿದೆ.

ಧ್ವನಿಸುರುಳಿ ಬಿಡುಗಡೆ

ಇತ್ತಿಚೆಗಷ್ಟೇ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆದಿದ್ದು, ಚಿತ್ರದ ಹಾಡುಗಳನ್ನು ಮ್ಯೂಸಿಕ್ ಬಜಾರ್ ಸಂಸ್ಥೆಯು, ತನ್ನ ಯೂಟ್ಯೂಬ್ ವಾಹಿನಿಯಿಂದ ಬಿಡುಗಡೆಗೊಳಿಸಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ.

 

ತಾರಾಬಳಗ

ಈ ಚಿತ್ರದಲ್ಲಿ ಅರವಿಂದ ಕುಮಾರ್ ಗೌಡ, ರಂಜಿತ್ ಕುಮಾರ್, ಶುಭ ರಕ್ಷ, ಚೈತ್ರ ಶೆಟ್ಟಿ, ಕೃಷ್ಣಹನಗಿ, ರಂಗಸ್ವಾಮಿ, ಹರಿಚಂದ್ರ, ವಿಶಾಲ್ ಗೌಡ, ಕೀರ್ತಿ ಚಂದ್ರಶೇಖರ್ ಸೇರಿದಂತೆ ಅನೇಕರ ತಾರಾಬಳಗ ಚಿತ್ರಕ್ಕಿದೆ.ಈ ಚಿತ್ರಕ್ಕೆ ಡಾ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಆಚಾರ್ಯ ಹಾಡುಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ , ವೇದಿಕ್ ವೀರ ಸಂಕಲನ, ಜಾಗ್ವಾರ್ ಸಣ್ಣಪ್ಪ ಸಾಹಸವಿದೆ.

ಯು/ಎ ಪ್ರಮಾಣ ಪತ್ರ

ಈ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ನವ್ಹೆಂಬರ್ ನಲ್ಲಿ ಈ ಚಿತ್ರವು ತೆರೆ ಕಾಣಲಿದ್ದು, ಮಾಸ್ಟರ್ ಮೈಂಡ್ ಇಂಕ್ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ಅರವಿಂದ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Tags