ಸುದ್ದಿಗಳು

ಏಪ್ರಿಲ್ 12 ರಂದು ಮೋದಿ ಬಯೋಪಿಕ್!!

ಮುಂಬೈ,ಮಾ.15: ರಾಷ್ಟ್ರೀಯ ಪ್ರಶಸ್ತಿ ವಿಜೇತ ಓಮುಂಗ್ ಕುಮಾರ್ ಬಿ ನಿರ್ದೇಶನದ “ಪಿಎಂ ನರೇಂದ್ರ ಮೋದಿ” ಏಪ್ರಿಲ್ 12 ರಂದು ಬಿಡುಗಡೆಗೊಳ್ಳಲಿದೆ.

ಏಪ್ರಿಲ್ 12 ರಂದು ಬಿಡುಗಡೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಪ್ರಯಾಣದ ಆರಂಭದಿಂದ ಹಿಡಿದು ಗುಜರಾತ್ ಮುಖ್ಯಮಂತ್ರಿಯಾಗಿ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತ್ತು ಅಂತಿಮವಾಗಿ ಪ್ರಧಾನಿಯಾಗಿದ್ದು ಹೇಗೆ , ಎಂಬುದನ್ನು ಈ ಬಯೋಪಿಕ್ ನಲ್ಲಿ ಹೇಳಲಾಗಿದೆ… ಅಹಮದಾಬಾದ್, ಕಚ್-ಭುಜ್ ಮತ್ತು ಉತ್ತರಖಂಡದಲ್ಲಿ ಚಿತ್ರೀಕರಣದ ನಂತರ ಈ ಚಿತ್ರವು ಮುಂಬೈಯಲ್ಲಿ ತನ್ನ ಕೊನೆಯ ಲೆಗ್ ಅನ್ನು ಪೂರ್ಣಗೊಳಿಸಿದ್ದಾರೆ..

ವಿವೇಕ್ ಒಬೆರಾಯ್ಪಿಎಂ ನರೇಂದ್ರ ಮೋದಿ

“ಇದು ವಿಶೇಷ ಸಿನಿಮಾ ಮತ್ತು ಹೇಳಬೇಕಾದ ಕಥೆಯನ್ನು ಹೊಂದಿದೆ, ಈ ಕಥೆಯು ಪ್ರೇಕ್ಷಕರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.ಎಸ್ ಸಿಂಗ್, ಆನಂದ್ ಪಂಡಿತ್ ಮತ್ತು ಸುರೇಶ್ ಒಬೆರಾಯ್ ನಿರ್ಮಿಸಿದ ಈ ಚಿತ್ರವು ನಟ ವಿವೇಕ್ ಒಬೆರಾಯ್ “ಪಿಎಂ ನರೇಂದ್ರ ಮೋದಿ” ಅವರ ಪಾತ್ರದಲ್ಲಿ ಕಾಣಿಸಲಿದ್ದಾರೆ.

Tags