ಜೀವನ ಶೈಲಿಫ್ಯಾಷನ್ಸುದ್ದಿಗಳು

ಮುದ ನೀಡುವ ಅಕ್ವೇರಿಯಂ

ಮನೆಯೊಳಗೆ ಒಂದು ಅಕ್ವೇರಿಯಂ ಇಟ್ಟು, ಅದರೊಳಗೆ ಸುಂದರವಾದ ಮೀನುಗಳು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾಯಾಗಿ ಓಡಾಡುವುದನ್ನೇ ನೋಡುವುದೇ ಸಂತಸ. ಮೀನುಗಳ ಆಟವನ್ನು ನೋಡುತ್ತಾ ಮನಸ್ಸಿನ ಬೇಸರ ಕಳೆಯಬಹುದು. ಮೀನು ಸಾಕುವುದು ಕೆಲವರಿಗೆ ಹವ್ಯಾಸವಾದರೆ, ಇನ್ನು ಕೆಲವರಿಗೆ ಅದು ಉದ್ಯೋಗ.

Image result for aquarium

ಗಾಜಿನ ಅಕ್ವೇರಿಯಂನಲ್ಲಿ ಬಣ್ಣಬಣ್ಣದ ಮೀನುಗಳು ಓಡಾಡುತ್ತಿದ್ದರೆ ಮನಸ್ಸಿಗೆ ಆರಾಮವೆನಿಸುವುದು ಸುಳ್ಳಲ್ಲ. ಜೊತೆಗೆ ಮನಸ್ಸಿಗೆ ಹಿತವನ್ನು ನೋಡುವ ಜೊತೆಗೆ ಈ ಅಕ್ವೇರಿಯಂ ಮನೆಯ ಅಂದವನ್ನು ಇಮ್ಮಡಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಕ್ವೇರಿಯಂಗೆ ತುಂಬಾ ಹಳೆಯದಾದ ಇತಿಹಾಸವಿದೆ. ರೋಮನ್ನರ ಕಾಲದಿಂದಲೂ ಅಕ್ವೇರಿಯಂ ಬಳಕೆ ಇರುವುದು ಇತಿಹಾಸದ ಪುಟಗಳನ್ನು ನೋಡಿದಾಗ ತಿಳಿಯುತ್ತದೆ. 19 ನೇ ಶತಮಾನದಲ್ಲಿ ಚೀನಿಯರು ಚಿಕ್ಕ ತೊಟ್ಟಿಯನ್ನು ಮೀನುಗಳ ಸಾಕುವುದಕ್ಕೆ ಬಳಸುತ್ತಿದ್ದರು. ಕಾಲಕ್ಕೆ ತಕ್ಕಂತೆ ಅದರಲ್ಲೂ ಬದಲಾವಣೆ ಕಂಡಿತು. ಕ್ರಮೇಣ ಬಣ್ಣ ಬಣ್ಣ ಮೀನುಗಳು ತುಂಬಿದ ಅಕ್ವೇರಿಯಂಗಳು ಮನೆಯೊಳಗೆ ಕಾಣಿಸತೊಡಗಿದವು.

Image result for aquarium

ಕೇವಲ ಅಲಂಕಾರಿಕ ವಸ್ತುವಾಗಿರದ ಅಕ್ವೇರಿಯಂ ಮನದ ಬೇಸರ ಕಡಿಮೆ ಮಾಡುತ್ತದೆ. ಜೊತೆಗೆ ಸದಾ ಕಾಲ ಮನಸ್ಸನ್ನು ಉಲ್ಲಾಸದಿಂದ ಇರುವಂತೆ ಮಾಡುವ ಶಕ್ತಿ ಅಕ್ವೇರಿಯಂ ಗಿದೆ. ಜೊತೆಗೆ ಅಕ್ವೇರಿಯಂ ವೀಕ್ಷಣೆಯಿಂದ ಕ್ರಿಯಾಶೀಲತೆ ವೃದ್ಧಿಯಾಗುತ್ತದೆ . ಮತ್ತು ಮನಸ್ಸಿನಲ್ಲಿ ಯಾವಾಗಲೂ ಪ್ರಶಾಂತವಾದ ಭಾವನೆ ಮತ್ತು ಚುರುಕುತನ ಹೆಚ್ಚಾಗುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

Image result for aquarium

ಮನಸ್ಸಿಗೆ ಉಲ್ಲಾಸ ನೀಡುವ ಈ ಅಕ್ವೇರಿಯಂಗಳನ್ನು ಇಡಲು ನಿರ್ದಿಷ್ಟವಾದ ಜಾಗ ಬೇಕು ಎಂದೇನಿಲ್ಲ. ಊಟದ ಕೋಣೆ, ರೆಸ್ಟ್ ರೂಂ, ಬೆಡ್ ರೂಂ, ಮನೆಯ ಹಜಾರ ಹೀಗೆ ಎಲ್ಲಿ ಬೇಕಾದರೂ ಇಡಬಹುದು. ಮನೆಯ ವಿನ್ಯಾಸಕ್ಕೆ ಸರಿಯಾಗಿ ಹೊಂದುವಂತಹ ಅಕ್ವೇರಿಯಂ ತೆಗೆದುಕೊಂಡರಾಯಿತು. ಇನ್ನು ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ದೊಡ್ಡದಾದ ಅಕ್ವೇರಿಯಂಗಳನ್ನು ಇಟ್ಟಿರುವುದನ್ನು ನೋಡಿರಬಹುದು. ಇದರಿಂದ ಮನಸ್ಸು ಒಂದು ಕ್ಷಣ ನಿರಾಳವಾಗುತ್ತದೆ.

Image result for aquarium

ಅಕ್ವೇರಿಯಂಗಳಲ್ಲಿ ಹಲವು ವಿಧ. ಬೌಲ್, ಬಾಕ್ಸ್, ಕಾರ್ನರ್ ಪೀಸ್, ರೂಂ ಡಿವೈಡರ್, ಬೇಸಿನ್ ಅಕ್ವೇರಿಯಂ, ವಾಲ್ ಅಕ್ವೇರಿಯಂ, ಟೇಬಲ್ ಅಕ್ವೇರಿಯಂ ಹೀಗೆ ಹಲವಾರು ರೀತಿ. ಆಯಾಯ ಅಕ್ವೇರಿಯಂಗಳಿಗೆ ಸರಿ ಹೊಂದುವಂತಹ ಮೀನುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ದೊಡ್ಡ ಜಾತಿಯ ಮೀನುಗಳಾದ ಕೋಹಿಕಾರ್ಪ್, ಶಾರ್ಕ್, ಗೋಲ್ಡ್ ಫಿಶ್, ಅರೋನಾ ಸೇರಿದಂತೆ ಇನ್ನಿತರ ಜಾತಿಯ ಮೀನುಗಳು ಅಕ್ವೇರಿಯಂನಲ್ಲಿ ಸಾಕುವುದು ಕಷ್ಟ. ಯಾಕೆಂದರೆ ಅವುಗಳಿಗೆ ತುಂಬಾ ನೀರಿನ ಅವಶ್ಯಕತೆಯಿರುತ್ತದೆ. ನೀರು ಶೇಖರಣಾ ತೊಟ್ಟಿಯ ಸಾಮರ್ಥ ಹೊಂದಿಕೊಂಡು ಮೀನು ಬೆಳವಣಿಗೆಯಾಗುತ್ತವೆ. ಸಣ್ಣ ಜಾತಿಯ ಮೀನುಗಳಾದ ಗಪ್ಪಿ, ಮೋಲಿ, ಪ್ಲಾಟಿ, ಬಬುಲ್ ಮೋಲಿ, ಸೋರ್ಡ್ ಟೈಲ್ ಇನ್ನಿತರ ಸಣ್ಣ ಜಾತಿಯ ಮೀನುಗಳು ಅಕ್ವೇರಿಯಂನಲ್ಲಿ ಬೆಳೆದು ಮರಿ ಹಾಕುತ್ತವೆ.

ಅಕ್ವೇರಿಯಂನ ಮೀನುಗಳಿಗೆ ಅದರದೇ ಆದ ಆಹಾರ ಸಿಗುತ್ತದೆ. ಅಕ್ವೇರಿಯಂ ಮತ್ತು ಮೀನಿನ ಪ್ರಮಾಣ ನೋಡಿಕೊಂಡು ಆಹಾರ ನೀಡಿದರೆ ಉತ್ತಮ. ಹಳ್ಳಿಯಲ್ಲಿ ಕಡಲೆ ಹಿಂಡಿ ಮೀನುಗಳಿಗೆ ಹೇಳಿ ಮಾಡಿಸಿದ ಆಹಾರ. ಮೀನು ಸಾಕುವುದಿದ್ದರೆ ದೊಡ್ಡ ಅಕ್ವೇರಿಯಂ ಒಳ್ಳೆಯದು. ಮೀನುಗಳಿಗೆ ಓಡಾಡಲು ಬೇಕಾದಷ್ಟು ಜಾಗ ದೊರೆಯುತ್ತದೆ. ಮತ್ತೆ ಅದನ್ನು ಕ್ಲೀನ್ ಮಾಡುವುದು ಕೂಡ ಅಷ್ಟೇ ಸುಲಭ. ಚಿಕ್ಕದಾದರೆ ತುಂಬಾ ಜಾಗರೂಕರಾಗಿರಬೇಕು.

ಅಕ್ವೇರಿಯಂನ ನೀರನ್ನು ಪ್ರತಿದಿನ ಬದಲಾಯಿಸಬೇಕು ಎಂದೇನಿಲ್ಲ. ಪ್ರತಿದಿನ ಬದಲಾಯಿಸದರೆ ಮೀನು ಸಾಯುವ ಸಂಭವ ಹೆಚ್ಚು. ಹಾಗೂ ಬದಲಾಯಿಸಬೇಕು ಎಂದಿದ್ದರೆ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಬದಲಾಯಿಸಬಹುದು. ಇನ್ನು ಅಕ್ವೇರಿಯಂ ಒಳಗೆ ಫಿಲ್ಟರೇಶನ್ ವ್ಯವಸ್ಥೆ ಅಳವಡಿಸಿದ್ದರೆ ನೀರು ಬದಲಾಯಿಸುವ ಅವಶ್ಯಕತೆಯಿಲ್ಲ.

– ಅನಿತಾ ಬನಾರಿ

#aquarium, #filmnews #healthtips #lifestyle

ಅಡುಗೆಗೂ ಸೈ, ಆರೋಗ್ಯಕ್ಕೂ ಸೈ ಈ ಇಂಗು

Tags