ಸುದ್ದಿಗಳು

ಮಲೈಕಾ ಜೊತೆ ಫ್ಲರ್ಟ್ ಮಾಡಿದಕ್ಕೆ ಅರ್ಜುನ್ ಹೇಳಿದ್ದೇನು ಗೊತ್ತಾ..!!??!!

ಬಾಲಿವುಡ್ ಮೋಸ್ಟ್ ಬ್ಯೂಟಿಫುಲ್ ನಟಿ ಮಲೈಕಾ ಅರೋರಾ ಜೊತೆ ಕಿರುತೆರೆ ನಟ ಕರಣ್ ಟಾಕರ್ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದು ಹೇಗೆ ಗೊತ್ತಾ..? ಈ  ವಿಡಿಯೋ ನೋಡಿ ಇದೀಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಟಿ ಮಲೈಕಾ ಮತ್ತು ಅರ್ಜುನ್ ಕಪೂರ್ ಎಂಗೇಜ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯಾ. ಮೊನ್ನೆ ಗುರುವಾರ (ಆಗಸ್ಟ್ 8) ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಲ್ಬೋರ್ನ್ ನ ಭಾರತೀಯ ಚಲನಚಿತ್ರೋತ್ಸವ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಭಾಗವಹಿಸಿದ್ದರು. ಮೆಲ್ಭೋರ್ನ್‍ನ ಸೆಂಟ್ ಕಿಲ್ಡಾದಲ್ಲಿ ಇರುವ ಪಲೈಸ್ ಥಿಯೇಟರ್ ನಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಕಿರುತೆರೆ ನಟ ಕರಣ್ ಟಾಕರ್, ಮಲೈಕಾ ಜೊತೆ ನಡೆಸಿದ ಸಂಭಾಷಣೆ ವಿಡಿಯೋ  ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲಿ ಕರಣ್ ನಟಿ ಮಲೈಕಾ ಅವರಿಗೆ “20 ಗಂಟೆ ವಿಮಾನದಲ್ಲಿ ಸಂಚಾರ ಮಾಡಿದ್ದರು ಸುಂದರವಾಗಿ ಕಾಣಿಸುತ್ತಿದ್ದೀರಾ” ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಜುನ್, “ಹಿಂದೆ ಬೇರೆ ಮಹಿಳೆಯರು ಕುಳಿತಿದ್ದಾರೆ. ಅವರ ಜೊತೆ ಫ್ಲರ್ಟ್ ಮಾಡು ಹೋಗು’ ಎಂದು ನಗುತ್ತಾ ಕರಣ್‍ಗೆ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಮಾತು ಕೇಳಿ ಅಲ್ಲಿದ್ದ ಬೇರೆ ಕಲಾವಿದರು ಜೋರಾಗಿ ನಗಲು ಶುರು ಮಾಡಿದ್ದರು.

ಮಿನಿ ಡ್ರೆಸ್ ಧರಿಸಿ ಹಾಟ್ ಆಗಿ ಮಿಂಚಿದ ಲಾವಣ್ಯ ತ್ರಿಪಾಠಿ

#malaikaarora #arjunkapoor #karantakar #flirt #viralvideo #bollywoodnews