ಸುದ್ದಿಗಳು

ಅರ್ಜುನ್ ರೆಡ್ಡಿ ಚಿತ್ರದ ಪ್ರಶಸ್ತಿ ಹರಾಜು

ವೀಕ್ ಎಂಡ್ ನಲ್ಲೂ ಟ್ರಾಫಿಕ್ ಪ್ರೀ

ವೀಕ್ ಎಂಡ್ ನಲ್ಲಿ ಹೈದರಾಬಾದ್ ನಲ್ಲಿರುವ ಎಲ್ಲಾ ರಸ್ತೆಗಳು ವಿಶಾಲವಾಗಿ ಇರುವುದನ್ನು ನೋಡಿ ಮಾಧ್ಯಮದವರಿಗೆ ಆಶ್ಚರ್ಯವಾಗಿತ್ತಂತೆ. ಈ ಹಿನ್ನೆಲೆಯಲ್ಲಿ ಏನಾದರೂ ಕರ್ಪ್ಯೂ ಜಾರಿಗೊಳಿಸಿಗೊಳಿಸಿದೆಯಾ, ಎಂದು ಕ್ಯಾಮರಾಗಳನ್ನು ತೆಗೆದು ದುರಂತಗಳನ್ನು ಎದುರು ನೋಡುವ ಹಾಗೆ ದಡ ಬಡಾಯಿಸಿ ಹೋಗುತ್ತಿರುವಾಗ ಹೈದರಾಬಾದ್ ಜೂಬ್ಲಿ ಹಿಲ್ಸ್ ನಲ್ಲಿ ನೆರೆದಿರುವ ಜನರನ್ನು ನೋಡಿ ಅವಾಕ್ ಆಗಿದ್ದರಂತೆ.

ಅವಾರ್ಡ್ ಹರಾಜು ಪ್ರಕ್ರಿಯೆ

ನಟ ವಿಜಯ್ ದೇವರಾಕೊಂಡ ಅವರು ಇಡೀ ಮಾಧ್ಯಮವರನ್ನು ಮತ್ತು ಅಭಿಮಾನಿಗಳನ್ನುಆಹ್ವಾನಿಸುವ ಹಾಗೆ, ‘ಅರ್ಜುನ್ ರೆಡ್ಡಿ’ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್ ಅನ್ನು ಹರಾಜಿಗಿಟ್ಟಿದ್ದಾರೆ ಎನ್ನಲಾಗಿದೆ.  “ನಾವು ರೌಡೀಸ್ ಎಂದು ಕರೆಸಿಕೊಳ್ಳುವ ನನ್ನ ಅಭಿಮಾನಿಗಳಿಗೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪಾರ್ಟಿ ಕೊಡಲಿದ್ದೇನೆ ಎಂದು ವಿಜಯ್ ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 200-500 ರೌಡಿಗಳನ್ನು (ಅಭಿಮಾನಿಗಳನ್ನು) ಆಹ್ವಾನಿಸಲಾಗಿದೆ.

ಸಂವಾದಾತ್ಮಕ ಸಂಭಂಧ

“ನಾನು ಅರ್ಜುನ್ ರೆಡ್ಡಿ ಚಿತ್ರಕ್ಕಾಗಿ ಗೆದ್ದ ಫಿಲ್ಮ್ ಫೇರ್ ಟ್ರೋಫಿಯನ್ನು ಹರಾಜು ಮಾಡಲು ಅಭಿಮಾನಿಗಳಿಗೆ ಭರವಸೆ ನೀಡಿದ್ದೇನೆ. ಅಭಿಮಾನಿಗಳ ಜೊತೆ ಹರಾಜಿನಲ್ಲಿ ಬಂದ ಹಣವನ್ನು ಚಾರಿಟಿಗೆ ನೀಡುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ವಿಜಯ್ ತಿಳಿಸಿದ್ದಾರೆ. ಅವರ ಅಭಿಮಾನಿಗಳೊಂದಿಗೆ ನಡೆಯುತ್ತಿರುವ ಸಂವಾದಾತ್ಮಕ ಸಂಬಂಧದಲ್ಲಿ ವಿಜಯ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *