ಸುದ್ದಿಗಳು

ಸರ್ಜಾ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಕಾಲವಕಾಶ

ಬೆಂಗಳೂರು, ಫೆ.11:

ನಟ ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿದ್ದ ಆರೋಪ ಇಡೀ ಚಿತ್ರರಂಗದಲ್ಲಿ ಒಂದು ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಿದ್ದಂತೂ ಸತ್ಯ. ಇಬ್ಬರು ಆರೋಪ ಪ್ರತ್ಯಾರೋಪಗಳ ಜೊತೆಗೆ ದೂರು ಪ್ರತಿದೂರುಗಳನ್ನು ನೀಡಿದ್ದರು. ಈ ಸಂಬಂಧ ವಿಚಾರಣೆ ಕೂಡ ನಡೆಸಲಾಗಿತ್ತು. ಇದೀಗ ದೋಷಪಟ್ಟಿ ಸಲ್ಲಿಸಲು ಪೊಲೀಸರು ಮುಂದಾಗಿಲ್ಲ. ಇನ್ನು ಕಾಲವಕಾಶ ಬೇಕೆಂದು ಕೇಳಿಕೊಂಡಿದ್ದಾರೆ.

ವಿಚಾರಣೆ ಇನ್ನು ಬಾಕಿ ಇದೆ..?

ಹೌದು, ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಶೃತಿ ಹರಿಹರನ್. ನಂತರ ಈ ಪ್ರಕರಣ ಸಂಬಂಧ ಬಹಳಷ್ಟು ಮಂದಿಯ ವಿಚಾರಣೆಗಳು ನಡೆದಿದ್ದವು. ಇದೀಗ ಇನ್ನು ಸಾಕ್ಷಿಗಳ ವಿಚಾರಣೆಯ ಅಗತ್ಯತೆ ಇದೆ ಅಂತಾ ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಡಿಸಿಪಿ ಅವರಿಂದ ದೋಷಾರೋಪ ಪಟ್ಟಿ ಸಲ್ಲಿಸಲು ಕಾಲವಕಾಶ ಕೊಡಿ ಅಂತಾ ಹೇಳುತ್ತಿದ್ದಾರೆ.

ಅನುಮತಿ ಪಡೆದ ಪೊಲೀಸರು

ಇನ್ನು ದೂರು ನೀಡಿದ 90 ದಿನಗಳ ಒಳಗೆ ದೋಷಾರೋಪ ಪಟ್ಟಿಯನ್ನು ನೀಡಬೇಕು ಅನ್ನೋದು ಕಾನೂನು. ಆದರೆ ಇವರ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ, ತನಿಖೆ ಬಾಕಿ ಇರೋದ್ರಿಂದ ಕಾಲವಕಾಶ ಬೇಕು ಅಂತಾ ಅನುಮತಿ ಪಡೆಯಲಾಗಿದೆ.

31 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅರ್ಜುನ್ ಸರ್ಜಾ ದಂಪತಿ!!

#sandalwood #metoo #arjunsarja #sruthihariharan #balkaninews #arjunsarjaandsruthihariharan

Tags