ಸುದ್ದಿಗಳು

31 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅರ್ಜುನ್ ಸರ್ಜಾ ದಂಪತಿ!!

ಬೆಂಗಳೂರು,ಫೆ.9

: ‘ಆ್ಯಕ್ಷನ್​ ಕಿಂಗ್​’ ಅರ್ಜುನ್ ಸರ್ಜಾ  ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ.ಅವಕಾಶಗಳು ಇವರಿಗೆ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. 1981 ರಲ್ಲಿ ತೆರೆಕಂಡಿರುವ “ಸಿಂಹದ ಮರಿ ಸೈನ್ಯ” ಚಿತ್ರದ ಮೂಲಕ ಕನ್ನಡ ಚಿತ್ರ ರಂಗವನ್ನು ಪ್ರವೇಶ ಮಾಡಿದ್ದಾರೆ. ಇದಲ್ಲದೆ ಅರ್ಜುನ ಸರ್ಜಾ ಅವರು ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಪಕಾರಾಗಿ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.

31ನೇ ವಿವಾಹ ವಾರ್ಷಿಕೋತ್ಸವ

ನಿನ್ನೆ ಅರ್ಜುನ್ ಸರ್ಜಾ ತಮ್ಮ 31ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದಾರೆ.. ಯಾವುದೇ ವಿವಾದ ಇಲ್ಲದೆ ತಮ್ಮ ಸಾಂಸಾರಿಕ ಜೀವನವನ್ನು ಸುಗಮವಾಗಿ ಸಾಗಿಸಿಕೊಂಡು ಬಂದವರು.. ಇನ್ನು ಅರ್ಜುನ್ ಸರ್ಜಾ ‘ರಥಸಪ್ತಮಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ಆಶಾರಾಣಿ (ನಿವೇದಿತಾ)ರನ್ನು  1988 ರಲ್ಲಿ ವಿವಾಹವಾದರು..  ಇನ್ನು ತಮ್ಮ 31ನೇ ವಿವಾಹ ವಾರ್ಷಿಕೋತ್ಸವನ್ನು ಸಿಂಗಾಪುರದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದು ಮಕ್ಕಳಾದ ಐಶ್ವರ್ಯ, ಅಂಜನಾ ಕೂಡ ಭಾಗಿಯಾಗಿದ್ದರು.

 

View this post on Instagram

 

Anniversary celebrations 😍💖💖💕💟 @arjunsarjaa #arjunsarja #actionking 👑

A post shared by Aishwarya Arjun (@the_sarja_princess) on

ಶಾರೂಖ್ ನಿದ್ದೆಗೆಡಿಸಿದ ಯಶ್ …!?!

#balkanienws #arjunsarja #marriageanniversdary

Tags

Related Articles