ಸುದ್ದಿಗಳು

ಮಲೈಕಾ- ಅರ್ಜುನ್ ಕಪೂರ್ ಮದುವೆ ಬಗ್ಗೆ ಅನಿಲ್ ಕಪೂರ್ ಏನಂದ್ರು ?

ಆತನಿಗೆ ಖುಷಿಯಾಗುವಂತಹದ್ದನ್ನು ಏನನ್ನಾದರೂ ಮಾಡಲಿ..

ಮುಂಬೈ,ಡಿ.9:  ನಟ ಅರ್ಜುನ್ ಕಪೂರ್ ಹಾಗೂ ಬಾಲಿವುಡ್ ನಟಿ ಮಲೈಕಾ ಆರೋರ ಪರಸ್ಪರ ಪ್ರೇಮಿಸುತ್ತಿದ್ದು, ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ  ಸುದ್ದಿ ಕಳೆದ ಹಲವು ದಿನಗಳಿಂದ ಜೋರಾಗಿ ಚರ್ಚೆಯಾಗುತ್ತಲೇ ಇದೆ. ಇವರಿಬ್ಬರ  ಸಂಬಂಧದ ಕುರಿತಂತೆ ಹಲವು ಬಾರಿ ಗುಸುಗುಸು ಎದ್ದಿದ್ದರೂ, ಇತ್ತೀಚೆಗೆ ಮಲೈಕಾ ಆರೋರ ಅವರ ಹುಟ್ಟುಹಬ್ಬಕ್ಕೆ ಜೋಡಿಹಕ್ಕಿಗಳು ವಿದೇಶಕ್ಕೆ ಹೋಗಿ ಬಂದಾಗಿನಿಂದ ಮದುವೆ ವಿಚಾರ ಜೋರಾಗಿ ಸಾಗುತ್ತಿದೆ. ಇದೀಗ ಈ ಜೋಡಿಯ ಕುರಿತಂತೆ ನಟ ಅನಿಲ್ ಕಪೂರ್,  ಅರ್ಜುನ್ ಕಪೂರ್ ಖುಷಿಯಾಗಿದ್ದರೆ, ಆತನಿಗೆ ಖುಷಿಯಾಗುವಂತಹದ್ದನ್ನು ಏನನ್ನಾದರೂ ಮಾಡಲಿ ಎಂದಿದ್ದಾರೆ.

Image result for arjun kapoor

 ನೇಹಾ ದುಪಿಯಾ  ಟಾಕ್ ಶೋನಲ್ಲಿ ಬಹಿರಂಗವಾಯ್ತು ಹಲವು ವಿಚಾರ

ಇತ್ತೀಚೆಗೆ ನಟ ಅರ್ಜುನ್ ಕಾಪೂರ್ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ, ಸಹೋದರಿ ಜಾಹ್ನವಿ ಕಪೂರ್ ಜೊತೆಗೆ ಆಗಮಿಸಿದ್ದರು. ಈ ಸಂದರ್ಭ ಕರಣ್ ಹೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅರ್ಜುನ್, ತಮ್ಮ ಹಾಗೂ ಮಲೈಕಾ ನಡುವಿನಸಂಬಂಧವನ್ನು ಒಪ್ಪಿಕೊಂಡಿದ್ದರು. ಇದೀಗ ನೇಹಾ ದುಪಿಯಾ ಅವರ ಟಾಕ್ ಶೋ ನಲ್ಲಿ ಪಾಲ್ಗೊಂಡ ನಟ ಅನಿಲ್ ಕಪೂರ್, ಅರ್ಜುನ್ ಹಾಗೂ ಮಲೈಕಾ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ. ಅರ್ಜುನ್ ಗೆ ಆತನ ಸಂಗಾತಿ ಬಗ್ಗೆ ತಿಳಿದಿದೆ. ಆತನಿಗೆ ಖುಷಿಯಾಗುವುದನ್ನು ಆತ ಮಾಡಿದರೆ ನಮಗೂ ಖುಷಿ ಎಂದುಹಾರಿಕೆಯ ಉತ್ತರ ನೀಡಿದ್ದಾರೆ ಚಾಚು.

 

Tags