ಸುದ್ದಿಗಳು

ಅರ್ಜುನ್ ರೆಡ್ಡಿ, ನಿರ್ದೇಶಕನಿಗೆ ಅವಮಾನ ಮಾಡಿದ ನಟ ವಿಕ್ರಮ್?

ಚೆನ್ನೈ,ಫೆ.10:

ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಮೋಡಿ ಮಾಡಿದ ವಿಜಯ್ ದೇವರಕೊಂಡ ಸದ್ಯಕ್ಕ ಮೋಸ್ ಹ್ಯಾಪನಿಂಗ್ ಹಿರೋ. ಇವರು ಮುಟ್ಟಿದ್ದೆಲ್ಲಾ ಒಂದರಾ ಚಿನ್ನವಾಗುತ್ತಿದ್ದು, ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿಯಾಗಿದ್ದಾರೆ. ಹೀಗಾಗಿಯೇ ನಿರ್ಮಾಪಕರು ನಾ ಮುಂದು ತಾ ಮುಂದೆ ಎಂಬಂತೆ ದೇವರಕೊಂಡ ಅವರ ಕಾಲ್ ಶೀಟ್ ಗೆ ಕಾಯುತ್ತಿದ್ದಾರೆ. ವಿಜಯ್ ಅಭಿನಯದ ಅರ್ಜುನ್ ರೆಡ್ಡಿ ಚಿತ್ರ ಇತರ ಭಾಷೆಗಳಲ್ಲೂ ರಿಮೇಕ್ ಆಗುತ್ತಿದ್ದು,ತಮಿಳಿನ ಹಿರಿಯ ನಟ ವಿಕ್ರಮ್ ಅವರ ಮಗ ಧ್ರುವ್ ಇದೇ ಚಿತ್ರದ ಮೂಲಕ ಇದೀಗ ಚಿತ್ರರಂಗಪ್ರವೇಶಿಸುತ್ತಿದ್ದು, ಚಿತ್ರಕ್ಕೆ ಬಾಲಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕರ ನಿರ್ದೇಶಕರು ಎಂಬುದು ಮತ್ತೊಂದು ಹೆಮ್ಮೆ. ವಿಕ್ರಮ್ ಮತ್ತು ಬಾಲಾ ಸೇತು ಮತ್ತು ಪಿತಮಗನ್ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದು ಇವರಿಬ್ಬರ ನಡುವೆ ಉತ್ತಮ ಬಾಂಧವ್ಯಇದೆ. ಇದೀಗ ತಮಿಳಿನಿಲ್ಲಿ ಅರ್ಜುನ್ ರೆಡ್ಡಿ ಚಿತ್ರ ರಿಮೇಕ್ ಮಾಡಲು E4 ಎಂಟರ್ಟೈನ್ ಮೆಂಟ್ ಬ್ಯುಸಿಯಾಗಿದೆ.

Image result for varma movie

ಫೆಬ್ರವರಿ 14ರಂದು ಬಿಡುಗಡೆಯಾಗಬೇಕಿದ್ದ  ಚಿತ್ರ

ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ಅರ್ಜುನ್ ರೆಡ್ಡಿ ಇದೇ ಫೆಬ್ರವರಿ 14ರಂದು ಬಿಡುಗಡೆಯಾಗಲು ತಯಾರಿ ನಡೆದಿತ್ತು. ಪ್ರೇಮಿಗಳ ದಿನದ ವಿಶೇಷವಾಗಿ ಚಿತ್ರ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಯೋಚಿಸಿತ್ತು. ಆದರೆ ಶಾಕಿಂಗ್ ಎಂಬಂತೆ ಚಿತ್ರದ ಪ್ರಾಜೆಕ್ಟ್ ಅರ್ಧದಲ್ಲೇ ನಿಲ್ಲಿಸುವುದಾಗಿ ಪ್ರೋಡಕ್ಷನ್ ಹೌಸ್ ಘೋಷಿಸಿದ್ದರಿಂದ ಚಿತ್ರ ಅರ್ಧಕ್ಕೆ ನಿಂತಿತ್ತು. ತಾವು  ಅಂದುಕೊಂಡಂತೆ ಚಿತ್ರ ಮೂಡಿಬಾರದ ಕಾರಣ ಚಿತ್ರವನ್ನು ನಿಲ್ಲಿಸುವುದಾಗಿ ನಿರ್ಮಾಪಕರು ಘೋಷಿಸಿದ್ದರಿಂದ ಚಿತ್ರ ಅರ್ಧಕ್ಕೆ ನಿಂತಿದ್ದು, ಹೀಗಾಗಿ ಫೆಬ್ರವರಿ 14ರಂದು ಚಿತ್ರಬಿಡುಗಡೆಯಾಗುತ್ತಿಲ್ಲ ಎಂದು ಚಿತ್ರತಂಡ ಘೋಷಿಸಿದ್ದು, ತಾವಂದುಕೊಂಡಂತೆ ಚಿತ್ರ ಬಿಡುಗಡೆಮಾಡುವ ಸಲುವಾಗಿ ಇದೀಗ ಆರಂಭದಿಂದಲೇ ಅರ್ಜುನ್ ರೆಡ್ಡಿಗಾಗಿ ಕೆಲಸ ಮಾಡಲು ನಿರ್ಧರಿಸಿದೆ.

ನಿರ್ದೇಶಕನಿಗೆ ಮಾಡಿದ ಅವಮಾನವೂ ಹೌದು

ವಿಶೇಷವೆಂದರೆ ರಾಷ್ಟ್ರೀಯ ಪ್ರಶಸ್ತಿಪುರಸ್ಕರ ನಿರ್ದೇಶಕ ಅದರಲ್ಲೂ ವಿಕ್ರಮ್ ಅವರಿಗೆ ತೀರಾ ಹತ್ತಿರದ ಗೆಳೆಯನಾದ ಬಾಲಾ ಅವರ ನಿರ್ದೇಶನದ ಶೈಲಿಯನ್ನು ಧ್ರುವ ಹಾಗೂ ವಿಕ್ರಮ್ ನಿರಾಕರಿಸಿದ್ದು, ಇದೀಗ ಹೊಸ ನಿರ್ದೇಶಕರೊಂದಿಗೆ ಅರ್ಜುನ್ ರೆಡ್ಡಿಯ ವರ್ಜಿನಲ್ ವರ್ಷನ್ ನಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದು ಅಚ್ಚರಿಗೆ ಕಾರಣವಾಗಿದ್ದರೆ, ಇದು ಒಂಥಾರಾ ಹಿರಿಯ ಹಾಗೂ ಪ್ರತಿಭಾನ್ವಿತ ನಿರ್ದೇಶಕನಿಗೆ ಮಾಡಿದ ಅವಮಾನವೂ ಹೌದು. ತಪ್ಪು ಎಲ್ಲರೂ ಮಾಡುತ್ತಾರೆ, ಚಿತ್ರದ ಔಟ್ ಪುಟ್ ಬಗ್ಗೆ ಖುಷಿಯಿಲ್ಲದಿದ್ದರೆ ಆ ಚಿತ್ರವನ್ನು ರಿಜೆಕ್ಟ್ ಮಾಡುವ ಹಕ್ಕು ಎಲ್ಲಾ ನಿರ್ಮಾಪಕರಿಗೂ ಇರುತ್ತದೆ. ಆದರೆ ಅದಕ್ಕೂ ಒಂದು ನೀತಿ ನಿಯತ್ತು ಇದೆ. ಬಾಲಾ ಅವರ ಜೊತೆಗೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಬೇಕಿತ್ತು ಎಂಬುದು ಚಿತ್ರರಂಗದ ಮಾತು.

Tags