ಸುದ್ದಿಗಳು

’ಅರ್ಜುನ್ ರೆಡ್ಡಿ’ ರೀಮೇಕ್ ಸಿನಿಮಾಗೆ ಧನಂಜಯ್ ನಟ..?

ಈಗಾಗಲೇ ಬೇರೆ ಭಾಷೆಯ ಸಿನಿಮಾಗಳು ಸಾಕಷ್ಟು ರೀಮೇಕ್ ಆಗಿದ್ದಾವೆ. ಅದರಲ್ಲಿ ಕೆಲವು ಸಕ್ಕತ್ ಫೇಮಸ್ ಹಾಗೂ ನೋಡುಗರನ್ನ ಸೆಳೆದ್ರೆ ಇನ್ನಷ್ಟು ಮಕಾಡೆ ಮಲಗಿವೆ. ಆದ್ರೆ ಕೆಲವೊಮ್ಮೆ ಬೇರೆ ಬಾಷೆಯಲ್ಲಿಯೇ ಹೆಸರು ಪಡೆಯೋದ್ರಿಂದ ಕನ್ನಡದಲ್ಲೂ ಅದನ್ನೇ ನಿರೀಕ್ಷೆ ಮಾಡಿರುತ್ತಾರೆ ಪ್ರೇಕ್ಷಕರು. ಅಲ್ಲದೆ ನಿರ್ದೇಶಕರು ಕೂಡ ಅದನ್ನ ತೆರೆ ಮೇಲೆ ತರಲು ಪ್ರಯತ್ನ ಮಾಡ್ತಾರೆ. ಇನ್ನೊಂದು ವಿಶೇಷ ಅಂದ್ರೆ ಆ ಭಾಷೆಯಲ್ಲಿ ಹೀರೋ ಎಷ್ಟು ಮುಖ್ಯವೋ ಅದೇ ರೀತಿ ರೀಮೇಕ್ ಆಗುತ್ತೆ ಅಂದ್ರೆ ಅಲ್ಲಿಯೂ ಹೀರೋ ಮುಖ್ಯವಾಗಿರುತ್ತೆ. ಇದೀಗ ಅಂಥಹದ್ದೇ ಸವಾಲೊಂದು ಅರ್ಜುನ್ ರೆಡ್ಡಿ ಸಿನಿಮಾಗೆ ರೀಮೇಕ್‌ ಗೆ ಆಗಿದೆ.

ಹೌದು, ಟಾಲಿವುಡ್‌ನಲ್ಲಿ ಬಂದ ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ, ಸಾಕಷ್ಟು ಹೆಸರು ಗಳಿಸಿ, ನೋಡುಗರನ್ನ ಸೆಳೆ ಸಿನಿಮಾ ಇದಾಗಿತ್ತು. ನೋಡಿದ ಎಲ್ಲರು ಕೂಡ ಸಿನಿಮಾ ಅಂದ್ರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ಈ ಸಿನಿಮಾ ತೆರೆ ಕಂಡಿತ್ತು. ಯಾರೇ ನಿರ್ದೇಶಕ ಈ ಸಿನಿಮಾ ನೋಡಿದ್ರು ರೀಮೇಕ್ ಮಾಡಲೇ ಬೇಕು ಎಂಬ ಮನಸ್ಥಿತಿಗೆ ಬರುವಷ್ಟು ಸಕ್ಕತ್ತಾಗಿದೆ ಸಿನಿಮಾ. ವಿಶೇಷ ಅಂದರೆ, ಈ ಹಿಂದೆ ಅನೇಕ ಬಾರಿ ಕನ್ನಡದಲ್ಲಿ ಅರ್ಜುನ್ ರೆಡ್ಡಿ ಸಿನಿಮಾ ರಿಮೇಕ್ ಆಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಅದು ಇನ್ನು ಫೈನಲ್ ಆಗಿರಲಿಲ್ಲ. ಜೊತೆಗೆ ನಿರ್ಮಾಪಕರು ಸಿಕ್ಕಿರಲಿಲ್ಲ. ಆದ್ರೆ ಈ ಚಿತ್ರದ ರೈಟ್ಸ್ ರಾಕ್‌ಲೈನ್ ಬಳಿ ಇದೆ ಅನ್ನೋ ಸುದ್ದಿ ಕೂಡ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಇದೀಗ ಈ ಸಿನಿಮಾ ರಿಮೇಕ್ ಆಗುತ್ತೆ ಅನ್ನೋ ವಿಚಾರ ಮತ್ತೆ ಗಾಂಧಿ ನಗರದಲ್ಲಿ ಸುದ್ದಿ ಮಾಡ್ತಾ ಇದೆ.

ಇನ್ನು ಈ ವಿಚಾರದ ಬೆನ್ನಲ್ಲೇ ಈಗ ಒಂದು ಫ್ಯಾನ್ಸ್ ಮೇಡ್ ಪೋಸ್ಟರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಹೌದು, ಮೊದಮೊದಲು ಯಶ್ ಈ ಸಿನಿಮಾಗೆ ಸೂಟೇಬಲ್ ಅಂತಾ ಈ ಮೊದಲು ರಿಮೇಕ್ ಸಿನಿಮಾದಲ್ಲಿ ನಟ ಯಶ್ ನಟಿಸುತ್ತಾರೆ ಎನ್ನುವ ಸುದ್ದಿ ಸಾಕಷ್ಟು ಹರಿದಾಡಿತ್ತು. ಆದರೆ ಈಗ ಯಶ್ ಈ ಸಿನಿಮಾದಲ್ಲಿ ನಟನೆ ಮಾಡೋ ಸಾದ್ಯತೆ ಬಹಳ ಕಡಿಮೆ ಇದೆ. ಯಶ್ ಇನ್ನು ಈ ಸಿನಿಮಾವನ್ನು ನೋಡಿಲ್ಲ ಜೊತೆಗೆ ಈ ಸಿನಿಮಾ ಮಾಡುವ ಬಗ್ಗೆ ಯಶ್ ಕೂಡ ಹೆಚ್ಚು ಉತ್ಸಾಹ ಕೊಡುತ್ತಿಲ್ಲ. ಸದ್ಯ ಕೆ.ಜಿ.ಎಫ್ ಚಾಪ್ಟರ್ ೧ ನಂತರ ಕೆ.ಜಿ.ಎಫ್ ಚಾಪ್ಟರ್ ೨ ಸಿನಿಮಾ ಬರಲಿದೆ. ಆ ನಂತರ ’ರಾಣಾ’ ಚಿತ್ರದಲ್ಲಿ ಯಶ್ ಬಿಜಿ ಆಗುತ್ತಾರೆ. ಹಾಗಾಗಿ ಈ ಸಿನಿಮಾ ಬಗ್ಗೆ ಹೆಚ್ಚು ಮಾಹಿತಿ ಇಲ್ಲವಂತೆ.

ಇನ್ನು, ಅರ್ಜುನ್ ರೆಡ್ಡಿ ರಿಮೇಕ್ ನಲ್ಲಿ ಯಶ್ ನಂತರ ಕೇಳಿ ಬಂದ ಹೆಸರು ಅಂದ್ರೆ ನಟ ಧನಂಜಯ್. ಸದ್ಯ ಮೂಲಗಳ ಮಾಹಿತಿ ಪ್ರಕಾರ ಅರ್ಜುನ್ ರೆಡ್ಡಿ ರಿಮೇಕ್ ಪ್ರಾಜೆಕ್ಟ್ ಈಗ ಡಾಲಿ ಮುಂದೆ ಇದೆಯಂತೆ ಅಂತಾ ವರದಿಯಾಗಿವೆ. ಇನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ’ಧನು ರೆಡ್ಡಿ’ ಎಂಬ ಫ್ಯಾನ್ಸ್ ಮೇಡ್ ಪೋಸ್ಟರ್ ಕೂಡ ಹರಿದಾಡಿದೆ. ಧನಂಜಯ್ ಅವರನ್ನು ’ಅರ್ಜುನ್ ರೆಡ್ಡಿ’ ಯಾಗಿ ನೋಡಲು ಬಯಸಿದ ಅಭಿಮಾನಿಗಳು ತಾವೇ ಒಂದು ಪೋಸ್ಟರ್ ಕೂಡ ಮಾಡಿದ್ದಾರೆ. ಹಾಗಾಗಿ ಮುಂದಿನ ಸಿನಿಮಾ ಇದೆಯಾ ಅನ್ನೋದು ಕುತೂಹಲಕಾರಿ.

ಸದ್ಯ ಈ ಸಿನಿಮಾದ ರೈಟ್ಸ್ ರಾಕ್ ಲೈನ್ ಬಳಿ ಇದೆ. ಈಗಾಗಲೇ ’ಅರ್ಜುನ್ ರೆಡ್ಡಿ’ ರಿಮೇಕ್ ರೈಟ್ಸ್ ಕನ್ನಡದಲ್ಲಿಯೇ ಇದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೂಲ ನಿರ್ಮಾಪಕರಿಂದ ರಿಮೇಕ್ ಹಕ್ಕು ಖರೀದಿಸಿದ್ದಾರೆ. ಆದ್ರೆ ಈ ಬಗ್ಗೆ ಅಥವಾ ಸಿನಿಮಾ ರೀಮೇಕ್ ಬಗ್ಗೆ ರಾಕ್‌ಲೈನ್ ಮಾಡತನಾಡಿಲ್ಲ. ಅಭಿಮಾನಿಗಳ ಪ್ರಕಾರ ಒಳ್ಳೆಯ ಹೀರೋವನ್ನ ಹುಡುಕುತ್ತಿದ್ದಾರೆ ಅಂತಿದ್ದಾರೆ. ಒಟ್ನಲ್ಲಿ ಯಾವುದೇ ವಿಚಾರ ಖೂಡ ಸಂಬಂಧಪಟ್ಟವರಿಂದ ಬಹಿರಂಗವಾಗಿಲ್ಲ. ಅಭಿಮಾನಿಗಳು ಮಾತ್ರ ಪೋಸ್ಟರ್ ಮಾಡಿರೋದು ಇಷ್ಟು ಚರ್ಚೆಗೆ ಕಾರಣವಾಗಿದೆ.

Tags