ಸುದ್ದಿಗಳು

ಪಿಗ್ಗಿ ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಪಾಕ್ ನಟಿಯ ಒತ್ತಾಯ..?

ಗಾಸಿಪ್ ಗಳಿಗೆ ವಿವಾದಗಳ ಸಂತೆ ಎಂದರೆ ಬಾಲಿವುಡ್ ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಬಿಟೌನ್. ಹೊಸದೊಂದು ಸುದ್ದಿ ಬಿಟೌನ್ ತುಂಬಾ ಹರಿದಾಡುತ್ತಿದೆ. ಸ್ಟಾರ್ ನಟಿ ಪ್ರೀಯಾಂಕ  ಚೋಪ್ರಾ ಪ್ರತಿಭಾವಂತ ಕಲಾವಿದೆ ಹಾಗೆಯೇ ಇತ್ತೀಚಿಗೆ ತನ್ನ ಖಾಸಗಿ ವಿಚಾರಕ್ಕೂ ಟ್ರೋಲ್ ಆಗುತ್ತಿದ್ದಾರೆ. ಇದೀಗ ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಇಲ್ಲಿದೆ ನೋಡಿ ಸ್ಟೋರಿ.

ವಿಶ್ವಸಂಸ್ಥೆಯ ಯುನಿಸೆಫ್​ ರಾಯಭಾರಿ ಹುದ್ದೆಯಿಂದ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕೈಬಿಡುವಂತೆ ಪಾಕ್ ನಟಿ ಅರ್ಮೀನ್ ಖಾನ್ ಒತ್ತಾಯಿಸಿದ್ದಾರೆ.

ಈ ಕುರಿತು ಯುನಿಸೆಫ್​ ಗೆ ಪತ್ರ ಬರೆದಿರುವ ಅರ್ಮೀನ್ ಹಾಗೂ ಅವರ ಪತಿ​, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಟ್ವೀಟ್ ಮೂಲಕ ಪಾಕ್ ಮೇಲೆ ಯುದ್ಧಕ್ಕೆ ಉತ್ತೇಜನ ನೀಡಿದ್ದಾರೆ. ಆದ್ದರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ. ಈ ಪತ್ರವನ್ನು ತಮ್ಮ ಟ್ವಿಟ್ಟರ್​ಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಪುಲ್ವಾಮಾ ದಾಳಿ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್​​ ಮೇಲೆ ಏರ್​ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆಗೆ ಪ್ರಿಯಾಂಕಾ ಟ್ವೀಟ್ ಮಾಡಿ ಅಭಿನಂದಿಸಿದ್ದರು.

ಇತ್ತೀಚಿಗಷ್ಟೇ ಪಾಕ್​ ಮೂಲದ ಯುವತಿವೋರ್ವಳು ಪಿಗ್ಗಿಯ ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ‘ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಆಗಿರುವ ನೀವು ಪಾಕ್​ ಮೇಲೆ ದಾಳಿಯನ್ನೇ ಬಯಸುತ್ತಿದ್ದೀರಿ. ನಮ್ಮ ದೇಶದಲ್ಲಿಯೂ ನಿಮ್ಮ ಅಭಿಮಾನಿಗಳಿದ್ದಾರೆ’ ಎಂದಿದ್ದಳು. ಇದಕ್ಕೆ ಉತ್ತರಿಸಿದ್ದ ಪಿಗ್ಗಿ, ಪಾಕ್​ನಲ್ಲಿ ನನಗೆ ತುಂಬಾ ಅಭಿಮಾನಿಗಳಿದ್ದಾರೆ. ಆದರೆ, ನಾನು ಭಾರತೀಯಳು. ನಾನು ದೇಶಭಕ್ತೆ, ಆದ್ದರಿಂದ ನಮ್ಮ ಸೈನಿಕರಿಗೆ ಧನ್ಯವಾದ ಹೇಳಿದ್ದೆ ಎಂದು ಪಾಕ್ ಯುವತಿಯ ಬಾಯಿ ಮುಚ್ಚಿಸಿದ್ದರು. ಇದೀಗ ಈ ಪೋಸ್ಟ್ ಮತ್ತು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

#priyanachopra #arminkhan #actress #bollywood #paktweet #pakistan

Tags