ಸುದ್ದಿಗಳು

ಸಲ್ಲು ತಾಯಿ, ಕತ್ರೀನಾ ಕೈಫ್ ಜೊತೆಗಿರೋ ಫೋಟೋ ಅರ್ಪಿತಾ ಗೆ ಇಷ್ವವಿರಲಿಲ್ಲವೇ?

ಈ ಫೋಟೋವನ್ನು ಅರ್ಪಿತಾ ಡಿಲೀಟ್ ಮಾಡಿದ್ದಾದರೂ ಯಾಕೆ?

ಅರ್ಪಿತಾ ಶೇರ್ ಮಾಡಿದ್ದು, ಸಲ್ಮಾನ್ ಖಾನ್ ತಾಯಿ ಕತ್ರೀನಾ ಕೈಫ್ ನನ್ನು ಅಪ್ಪಿಕೊಂಡಿರುವ ಫೋಟೋ.

ಮುಂಬೈ,ಸೆ.07: ಆಲಿ ಅಬ್ಬಾಸ್ ಜಾಫರ್ ಅವರ ಭಾರತ್ ಚಿತ್ರದಲ್ಲಿ, ಮತ್ತೆ ಮಾಜಿ ಪ್ರೇಮಿಗಳು ಒಂದಾಗುತ್ತಿದ್ದಾರೆ. ಹೌದು ನಾವೀಗ ಹೇಳಲು ಹೊರಟಿರುವುದು ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಬಗ್ಗೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದ ಕುರಿತಂತೆ ಕುತೂಹಲ ಕೆರಳುವಂತೆ ಮಾಡಿದೆ. ಈ ನಡುವೆ ಸಲ್ಮಾನ್ ಖಾನ್ ಪ್ರೀತಿಯ ತಂಗಿ, ಅರ್ಪಿತಾ ಖಾನ್, ಭಾರತ್ ಚಿತ್ರೀಕರಣದ ಸೆಟ್ ನಲ್ಲಿದ್ದ ಫೋಟೋವೊಂದನ್ನು ಶೇರ್ ಮಾಡಿ ಬಳಿಕ ಡಿಲೀಟ್ ಮಾಡಿ ಸುದ್ದಿಯಾದರು.

ಪೋಸ್ಟ್ ಮಾಡಿದ್ದೂ ಯಾಕೆ ಮತ್ತು ಡಿಲೀಟ್ ಮಾಡಿದ್ದು ಯಾಕೆ?

ಅಂದಹಾಗೆ ಅರ್ಪಿತಾ ಶೇರ್ ಮಾಡಿದ್ದು, ಸಲ್ಮಾನ್ ಖಾನ್ ತಾಯಿ ಕತ್ರೀನಾ ಕೈಫ್ ನನ್ನು ಅಪ್ಪಿಕೊಂಡಿರುವ ಫೋಟೋ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅರ್ಪಿತಾ ಖಾನ್ ಈ ಫೋಸ್ಟ್ ಡಿಲೀಟ್ ಮಾಡಿದ್ದು, ದೊಡ್ಡ ಸುದ್ದಿಯಾಯಿತು.

ಅರ್ಪಿತಾ ಖಾನ್ ಫೋಟೋವನ್ನು ಪೋಸ್ಟ್ ಮಾಡಿದ್ದೂ ಯಾಕೆ ಮತ್ತು ಡಿಲೀಟ್ ಮಾಡಿದ್ದು ಯಾಕೆ ಎಂಬ ಕುರಿತಂತೆ ಚರ್ಚೆಗಳು ಸಾಗಿದವು. ಇದೀಗ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅರ್ಪಿತಾ ಖಾನ್ ಪತಿ ಆಯುಶ್ ಶರ್ಮಾ, ಆಕೆ ಯಾವ ಕಾರಣಕ್ಕಾಗಿ ಈ ಫೋಟೋವನ್ನು ಡಿಲೀಟ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅದೊಂದು ಸುಂದರವಾದ ಫೋಟೋ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಫೋಟೋ ಸೆಟ್ ನಲ್ಲಿದ್ದಾಗ ತೆಗೆದಿದ್ದಕ್ಕೆ ಅಥವ ತಪ್ಪು ಸಂದೇಶ ರವಾನಿಸುವಂತಿದೆ ಎಂಬ ಕಾರಣಕ್ಕಾಗಿ ಆಕೆ ಫೋಟೋವನ್ನು ಡಿಲೀಟ್ ಮಾಡಿರುವ ಸಾಧ್ಯತೆ ಎಂದಿದ್ದಾರೆ.

ಕತ್ರೀನಾ ಕೈಫ್ ಮತ್ತು ಸಲ್ಮಾನ್ ಖಾನ್ ತೆರೆ ಮೇಲಿನ ಸುಂದರ ಹಾಗೂ ಮುದ್ದಾದ ಸೂಪರ್ ಹಿಟ್ ಜೋಡಿಯಾಗಿದ್ದು, ತೆರೆ ಮೇಲೆ ಅವರ ಕೆಮೆಸ್ಟ್ರೀ ಸಿಕ್ಕಾಪಟ್ಟೆ ಸುಂದರವಾಗಿದೆ ಎಂದು ಆಯುಶ್ ಹೇಳಿದ್ದಾರೆ.

 

Tags