ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನಸುದ್ದಿಗಳು

ಚಿತ್ರರಂಗಕ್ಕೊಬ್ಬ ಮುದ್ದಾದ ಮತ್ತು ರಗಡ್ ಆಗಿರುವ ನಾಯಕ ನಟ ಅರುಣ್ ಕುಮಾರ್

‘ನಾಗಿಣಿ’ ಧಾರಾವಾಹಿಯಲ್ಲಿ ರುದ್ರನ ಪಾತ್ರದ ಮೂಲಕ ಜನರ ಮನಸ್ಸನ್ನು ಸೆಳೆದ ಕಲಾವಿದ

ಬೆಂಗಳೂರು.ಜ.21:

ಸಿನಿಮಾ ಕನಸುಗಳನ್ನು ಇಟ್ಟುಕೊಂಡು ಅನೇಕರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಚಿತ್ರರಂಗ ಕೆಲವರನ್ನು ಮಾತ್ರ ಕೈ ಹಿಡಿದು ತನ್ನತ್ತ ಸೆಳೆಯುತ್ತದೆ. ಈ ಸಾಲು ಸಾಮಾನ್ಯವಾಗಿ ನಾವೆಲ್ಲರೂ ಕೇಳುತ್ತಿದ್ದರೂ ಸಹ ಇದು ಸತ್ಯ.

ಈಗ್ಯಾಕೆ ಈ ವಿಷಯ ಎಂದರೆ, ಇಲ್ಲೊಬ್ಬ ಮಂಡ್ಯದ ಪ್ರತಿಭಾವಂತ ಯುವಕನೊಬ್ಬ ಚಿಕ್ಕ ವಯಸ್ಸಿನಿಂದಲೇ ಸಿನಿಮಾರಂಗದ ಬಗೆಗೆ ಒಲವನ್ನು ಇಟ್ಟುಕೊಂಡು ಏನಾದ್ರೂ ಸರಿ, ಸಾಧಿಸಿಯೇ ತೀರುತ್ತೇನೆ ಎಂಬ ಛಲದೊಂದಿಗೆ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು, ಈಗಾಗಲೇ ತನ್ನ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ,ಅವರೇ ಅರುಣ್ ಕುಮಾರ್..

‘ನಾಗಿಣಿ’ಯ ರುದ್ರನ ಪಾತ್ರ

ತಟ್ಟನೇ ನಿಮಗೆ ಅರುಣ್ ಕುಮಾರ್ ಎಂದರೆ ನೆನಪಾಗದೇ ಇರಬಹುದು. ಆದರೆ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ‘ನಾಗಿಣಿ’ ಧಾರಾವಾಹಿಯ ವಿಲನ್ ರುದ್ರ ಎಂದ ಕೂಡಲೇ ತಕ್ಷಣಕ್ಕೆ ಒಬ್ಬ ಸ್ಪೂರದ್ರೂಪಿ ಯುವಕನೊಬ್ಬ ನೆನಪಾಗುತ್ತಾರೆ ಅವರೇ ಅರುಣ್ ಕುಮಾರ್.

ಎಸ್, ಹೌದು, ಮೊದಲಿಗೆ ಈ ಪಾತ್ರವನ್ನು ಬೇರೆಯವರು ಮಾಡುತ್ತಿದ್ದರು. ಆನಂತರ ಪಾತ್ರಧಾರಿ ಬದಲಾದಾಗ ಆ ಪಾತ್ರವನ್ನು ಅರುಣ್ ಕುಮಾರ್ ನಿರ್ವಹಿಸಿ ಎಲ್ಲರಿಂದ ಪ್ರಸಂಶೆಗೆ ಪಾತ್ರರಾದರು.

ಸಿನಿಮಾದಲ್ಲಿಯೂ ನಟನೆ

ಮೂಲತಃ ಮಂಡ್ಯದವರಾದ ಅರುಣ್ ಕುಮಾರ್ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಕಾಲೇಜು ಹಂತದಲ್ಲಿಯೇ ಸಿನಿಮಾ ಬಗೆಗಿನ ಅಪಾರ ಒಲವಿನಿಂದಾಗಿ ನಾಟಕಗಳಲ್ಲಿಯೂ ಸಹ ನಟಿಸಿದ್ದರು. ಇದಾದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಾಗಿಣಿ’ಯಲ್ಲಿ ನಟಿಸಿದರು. ನಂತರ ಬೆಳ್ಳಿತೆರೆಗೂ ಸಹ ಕಾಲಿಟ್ಟ ಅರುಣ್ ಕುಮಾರ್ ‘ವಂದನ’ ಚಿತ್ರದಲ್ಲಿ ನಾಯಕನಟರಾಗಿ ನಟಿಸಿದ್ದಾರೆ.

‘ನಾಗಿಣಿ’ಯಿಂದ ನಿಜವಾದ ನನ್ನ ಪಯಣ…

“2015-16 ರಲ್ಲಿ ನಾನು ಚಿತ್ರರಂಗಕ್ಕೆ ಬಂದಾದ ಕಲ್ಕಿ ಚಾನಲ್ ನ ಧಾರಾವಾಹಿಯೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಾದ ನಂತರ ನಾನು ನಟಿಸುತ್ತಿರುವ ‘ನಾಗಿಣಿ’ ಧಾರಾವಾಹಿಯಲ್ಲಿನ ರುದ್ರನ ಪಾತ್ರ ನನ್ನ ಪ್ರತಿಭೆಯನ್ನು ತೋರಿಸಲು ಅನುಕೂಲವಾಯಿತು. ಇದಕ್ಕೂ ಮೊದಲು ಉಷಾ ಬಂಡಾರಿಯವರ ನಾಟಕಗಳಲ್ಲಿಯೂ ಸಹ ನಟಿಸಿದ್ದೇನೆ. ಈಗಲೂ ಸಹ ಸಮಯ ಸಿಕ್ಕರೆ ಡ್ರಾಮಾ ಮಾಡುತ್ತಿರುತ್ತೇನೆ. ‘ವಂದನ’ ಚಿತ್ರದ ಮೂಲಕ ನಾಯಕನಟನೂ ಆದೆ. ಸದ್ಯ ‘ಚೌಕಟ್ಟು’, ಮತ್ತು ‘ರಂಗ ಬಿ.ಇ.ಎಂಟೆಕ್’ ಚಿತ್ರದಲ್ಲೂ ನಟಿಸುತ್ತಿದ್ದೇನೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅರುಣ್ ಕುಮಾರ್.

‘ಚೌಕಟ್ಟು’ ಚಿತ್ರದ ಬಗ್ಗೆ

ಈ ಸಿನಿಮಾವನ್ನು ಸಂದೀಪ್ ಕೊಟೆಯಾನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ 60 ರಿಂದ 70 ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. ಉಳಿದಂತೆ ಒಂದು ಹಾಡು ಮತ್ತು ಒಂದಷ್ಟು ಟಾಕಿ ಪೋರ್ಶನ್ ಶೂಟಿಂಗ್ ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ. ಇನ್ನು ಕಥೆಯ ವಿಷಯಕ್ಕೆ ಬಂದರೆ, ಇದೊಂದು ಥ್ರಿಲ್ಲಿಂಗ್ ಕಥೆಯನ್ನು ಒಳಗೊಂಡಿದ್ದು, ಈಗಿನ ಯುವ ಜನಾಂಗ ಟ್ರೆಂಡಿಯಾಗಿರುವ ವಿಷಯಗಳನ್ನು ಸಹ ತೋರಿಸಲಾಗುತ್ತಿದೆ” ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಅರುಣ್ ಕುಮಾರ್.

ಸಮರ್ಥ ನಾಯಕನಟರಾಗುವ ಎಲ್ಲಾ ಲಕ್ಷಣಗಳಿವೆ

ಇನ್ನು ಇವರು ಸುಮ್ಮನೇ ಸಿನಿಮಾರಂಗದ ಬಗ್ಗೆ ಕನಸನ್ನು ಕಂಡವರಲ್ಲ. ಬೇಕಾದ ತಯಾರಿಗಳಾದ ಡ್ಯಾನ್ಸ್, ಜಿಮ್ನಾಸ್ಟಿಕ್ ವಿದ್ಯೆಗಳನ್ನು ಸಹ ಕಲಿತುಕೊಂಡಿದ್ದಾರೆ. ಒಬ್ಬ ನಾಯಕನಟನಿಗೆ ಬೇಕಾದ ಡ್ಯಾನ್ಸ್, ಬಾಡಿ ಲಾಂಗ್ವೇಜ್.. ಹೀಗೆ ಎಲ್ಲವನ್ನೂ ಕಲಿತುಕೊಂಡಿದ್ದಾರೆ. ಅದಕ್ಕೆ ತಕ್ಕಂತ ಹೈಟ್ ಕೂಡಾ ಇದೆ. ಹಾಗೆಯೇ ‘ನಾಗಿಣಿ’ ಧಾರಾವಾಹಿಯ ರುದ್ರನ ಪಾತ್ರವನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿಯೂ ಸಹ ಬೇರೂರಿದ್ದಾರೆ.

ಖಂಡಿತಾ, ಇವರಿಗೆ ಒಬ್ಬ ಸಮರ್ಥ ನಾಯಕ ನಟನಾಗುವ ಎಲ್ಲ ಲಕ್ಷಣಗಳಿದ್ದು ಸರಿಯಾದ ಅವಕಾಶಗಳು ಸಿಕ್ಕಿದರೆ, ಚಿತ್ರರಂಗಕ್ಕೊಬ್ಬ ಮುದ್ದಾದ ಮತ್ತು ರಗಡ್ ಆಗಿರುವ ನಾಯಕನೊಬ್ಬ ಸಿಕ್ಕಂತಾಗುತ್ತದೆ.

#arunaa, #balkaninews #vandana, #nagini, #deepikadas, #filmnews, #kannadasuddigalu

Tags

Related Articles