ಸುದ್ದಿಗಳು

ಶಾರುಖ್ ಪುತ್ರನಿಗೆ ನಾಯಕಿಯಾಗಲಿರುವ ಖುಷಿ ಕಪೂರ್

ಶಾರೂಖ್ ಪುತ್ರ ಆರ್ಯನ್ ಖಾನ್ ಖುಷಿಗೆ ನಾಯಕನಾಗಲಿದ್ದಾನೆಯಂತೆ..

ಜಾಹ್ನವಿ ನಂತರ ಈಗ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಚಿ್ತರರಂಗಕ್ಕೆ ಪ್ರವೇಶ

ಮುಂಬೈ,ಆ.31: ದಿವಂಗತ ಶ್ರೀದೇವಿ ಅವರ ಮೊದಲ ಪುತ್ರಿ ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್ ​ಗೆ ಭರ್ಜರಿಯಾಗಿ  ಪ್ರವೇಶ ಮಾಡಿದ್ದಾರೆ. ‘ಧಡಕ್’ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಿತು. ಇದರಿಂದ ಜಾಹ್ನವಿ ಕಪೂರ್ ಗೂ ಒಳ್ಳೆಯ ಹೆಸರು ತಂದು ಕೊಟ್ಟಿತು. ಜಾಹ್ನವಿ ನಂತರ ಈಗ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಅವರದ್ದು.  ಹೌದು, ಬಿ-ಟೌನ್ ಅಂಗಳದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಶೀಘ್ರವೇ ಖುಷಿ ಬಣ್ಣದ ಬದುಕಿಗೆ ಕಾಲಿಡಲಿದ್ದಾರೆ. ಆದರೆ ಈಕೆಗೆ ನಾಯಕನಾಗಿ ಯಾರು ಅಭಿನಯಿಸುತ್ತಾರೆ ಎಂಬುದು ಈಗ ಬಹಿರಂಗಗೊಂಡಿದೆ.. ಶಾರೂಖ್ ಪುತ್ರ ಆರ್ಯನ್ ಖಾನ್ ಖುಷಿಗೆ ನಾಯಕನಾಗಲಿದ್ದಾನೆಯಂತೆ!!

ಸ್ಟಾರ್ ಮಕ್ಕಳ ಸಿನಿಮಾ!!

ಹಲವು ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ನಿರ್ದೇಶಕ ಕರಣ್ ಜೋಹರ್​ ಗೆ ಇದೆ. ಇದೀಗ ಆರ್ಯನ್ ಮತ್ತು ಖುಷಿಯನ್ನು ಬಣ್ಣದ ಲೋಕಕ್ಕೆ ಕರೆತರುವ ಜವಾಬ್ದಾರಿಯನ್ನು ಕರಣ್ ಅವರೇ ತೆಗೆದುಕೊಂಡಿದ್ದಾರೆ. ಈಗಾಗಲೇ ಉತ್ತಮ ಕಥೆಯೊಂದು ಆಯ್ಕೆಮಾಡಿದ್ದು, ನಿರ್ದೇಶಕರ ಹುಡುಕಾಟದಲ್ಲಿದ್ದಾರೆ ಕರಣ್. ಆರ್ಯನ್ ಖಾನ್ ಸದ್ಯ ನಟನಾ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ಮಕ್ಕಳನ್ನು ಪರಿಚಯಿಸುವ ಹೆಗ್ಗಳಿಕೆ ಕರಣ್ ಅವರಿಗೆ ಸಲ್ಲುತ್ತದೆ..

 

Tags