ಸುದ್ದಿಗಳು

ಅವಕಾಶಗಳ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ ಸಾರಾ ಅಲಿಖಾನ್!!!

ಚಾಕೋಲೇಟ್ ಹಿರೋ ಆರ್ಯನ್ ಅಂದರೆ ನನಗೆ ತುಂಬಾನೆ ಇಷ್ಟ.

ಮುಂಬೈ,ಡಿ.23: ನನಗೆ ನಟ ಕಾರ್ತಿಕ್ ಆರ್ಯನ್ ಅಂದರೆ ಸಿಕ್ಕಾಪಟ್ಟೆ ಇಷ್ಟ ಎಂದು ಸಾರ್ವಜನಿಕವಾಗಿಯೇ ನಟಿ ಸಾರಾ ಅಲಿಖಾನ್ ಹೇಳಿಕೊಂಡಿದ್ದರು. ಇದೀಗ ಸಾರಾ ಕನಸು ನನಸಾಗಿದ್ದು, ಕಾರ್ತಿಕ್ ಆರ್ಯನ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶವೊಂದು ಸಾರಾಗೆ ಲಭಿಸಿದೆ. ಇಮ್ತಿಯಾಸ್ ಅಲಿ ಅವರ ‘ಲವ್ ಅಜ್ ಕಲ್’ ಚಿತ್ರದ ಸರಣಿಯಲ್ಲಿ ಸಾರಾ ಅಲಿಖಾನ್, ಚಾಕಲೇಟ್ ಹಿರೋ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದು, ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆಯಂತೆ. ಅಂದಹಾಗೆ ಇಮ್ತಿಯಾಸ್ ಅಲಿ ಅವರ ‘ಲವ್ ಅಜ್ ಕಲ್’ ಮೊದಲ ಭಾಗದಲ್ಲಿ ನಟಿ ದೀಪಿಕಾ ಪಡುಕೋಣೆ, ಹಾಗೂ ಸೈಫ್ ಅಲಿಖಾನ್ ನಟಿಸಿದ್ದರು.

Image result for kartik aryan

ಕಾರ್ತಿಕ್ ಜೊತೆಗೆ ಡೇಟಿಂಗ್ ಮಾಡೋಕೆ ನಾನು ರೆಡಿ ಅಂದ್ರು ಸಾರಾ

ಚಾಕೋಲೇಟ್ ಹಿರೋ ಆರ್ಯನ್ ಅಂದರೆ ನನಗೆ ತುಂಬಾನೆ ಇಷ್ಟ. ಅವರೊಂದಿಗೆ ಡೇಟಿಂಗ್ ಮಾಡಲು ನಾನು ರೆಡಿ ಅಂತ ಸಾರಾ ಅಲಿಖಾನ್ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಅದೃಷ್ಟವೋ ಎಂಬಂತೆ ಇಮ್ತಿಯಾಸ್ ತಮ್ಮ ಚಿತ್ರಕ್ಕೆ ಸಾರಾ ಹಾಗೂ ಆರ್ಯನ್ ಅವರನ್ನು ಆಯ್ಕೆ ಮಾಡಿದ್ದು, ಸಾರಾ ಕನಸು ನನಸಾಗಿದೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಟ ರಣ್ ವೀರ್ ಸಿಂಗ್, ಸಾರಾ ಹಾಗೂ ಕಾರ್ತಿಕ್ ಅವರನ್ನು ಜೊತೆಯಾಗಿ ಕೂರಿಸುವ ಪ್ರಯತ್ನ ಮಾಡಿದ್ದರೂ. ಆರಂಭದಲ್ಲಿ ಸಿಕ್ಕಾಪಟ್ಟೆ ನಾಚಿಕೊಂಡಂತೆ ಕಂಡ ಆರ್ಯನ್ ಬಳಿಕ ಸುಧಾರಿಸಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರಾ ಅಲಿಖಾನ್ ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ಹಾಗೂ ರಣ್ ವೀರ್ ಜೊತೆಗೆ ತೆರೆ ಹಂಚಿಕೊಂಡಿದ್ದು, ಆರ್ಯನ್ ಜೊತೆಗೆ ಮೂರನೇ ಬಾರಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

Tags

Related Articles