ಸುದ್ದಿಗಳು

ನಾಳೆ ನಿಮಗೊಂದು ಸರ್ ಪ್ರೈಸ್ ಕೊಡಲಿದ್ದಾರೆ ಅನುಷ್ಕಾ!

ಶೀರ್ಷಿಕೆ ನೋಡಿ ನಿಮಗೆ ಕುತೂಹಲ ಹೆಚ್ಚುತ್ತಿರಬಹುದು. ನಟಿ ಅನುಷ್ಕಾ ಏನು ಸರ್ ಪ್ರೈಸ್ ಕೊಡಬಹುದು ಅಂತ. ಆದರೆ ಆ ಸರ್ ಪ್ರೈಸ್ ತಿಳಿಯಲು ನೀವು ನಾಳೆಯವರೆಗೆ ಕಾಯಲೇಬೇಕು. ಯಾಕೆ ಅಂತೀರಾ?.

ಅನುಷ್ಕಾ ಅವರ ಮುಂಬರುವ ಚಿತ್ರ ‘ನಿಶಬ್ದಂ’ ಶೀಘ್ರಗತಿಯಲ್ಲಿ ಸಾಗುತ್ತಿದೆ. ಇತ್ತೀಚಿನ ಅಪ್ ಡೇಟ್ಸ್ ಪ್ರಕಾರ ನಾಳೆ 11:11ಕ್ಕೆ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲು ಯೋಜಿಸಲಾಗಿದೆ.

ಹೌದು, ಕೋನಾ ವೆಂಕಟ್ ಈ ಸರ್ ಪ್ರೈಸ್ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದು, ಅನುಷ್ಕಾ ಶೆಟ್ಟಿ ಚಿತ್ರದಲ್ಲಿ ವಿಕಲಚೇತನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವರದಿ ಬೆಳಕಿಗೆ ಬಂದಿದೆ.

ಸಿಯಾಟಲ್ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರ 30 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷ.

ಹೇಮಂತ್ ಮಧುಕರ್ ನಿರ್ದೇಶನದ ಈ ಚಿತ್ರದಲ್ಲಿ ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಗಣವಿದೆ.

‘ನಿಶಬ್ದಂ’ಗೆ ಗೋಪಿ ಸುಂದರ್ ಅವರ ಸಂಗೀತ, ಶಾನಿಯಲ್ ಡಿಯೋ ಅವರ ಛಾಯಾಗ್ರಹಣವಿದ್ದು, ಕೋನಾ ವೆಂಕಟ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ನನ್ನ ಮದುವೆ ನಡೆದರೆ ಅದು ತಿರುಪತಿಯಲ್ಲೇ ಎಂದ ಜಾಹ್ನವಿ

#balkaninews #anushkashetty  #nishabdham #firstlook

Tags