ಸುದ್ದಿಗಳು

ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ‘ಮಿಸ್ ಸುಪ್ರ’ ಗೆ ಇಂದು ಹುಟ್ಟಿದ ಹಬ್ಬ..

ಕರ್ನಾಟಕದ ಕುವರಿ ಆಶಾ ಭಟ್..

ಆಶಾ ಆಳ್ವಾಸ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ’ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ಗ’ ಕ್ಯಾಡೆಟ್ ಆಗಿ ಸೇರಿಕೊಂಡರು ಮತ್ತು ‘ರಿಪಬ್ಲಿಕ್ ಡೇ’ ಕ್ಯಾಂಪ್ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

asha bhatt images ಗೆ ಚಿತ್ರದ ಫಲಿತಾಂಶ

ಕಣ್ಣಲ್ಲೇ ಕೊಲ್ಲುವ ನೋಟ, ಚೆಂದುಟಿಯಂಚಿನಲ್ಲಿ ಸವಿನಗು, ಬಳ್ಳಿಯಂತೆ ಬಳಕುವ ಮೈಮಾಟ, ಎಂಥವರೂ ಒಮ್ಮೆ ನೋಡಿ ವಾಹ್ಹ್, ಯಾರೀ ಸುಂದರ ಬೆಡಗಿ ಎಂದು ಹೇಳದೆ ಇರಲಾರರು. ಅರೆ ಯಾರೀ ಸುಂದರ ಚೆಲುವೆ ಅಂದುಕೊಂಡಿರಾ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ ನೋಡಿ…

ಸುಪ್ರಾ ಸುಂದರಿ ಆಶಾ!!

ಈಕೆಯ ಹೆಸರೇ ಆಶಾ ಭಟ್.. ಕರ್ನಾಟಕದ ಭದ್ರಾವತಿ ಮೂಲದವರಾದ ಆಶಾ ಭಟ್ 2014 ರಲ್ಲಿ ‘ಸುಪ್ರಾ ನ್ಯಾಷನಲ್ ಸೌಂದರ್ಯ ಕಿರೀಟ’ ತಮ್ಮ ಮುಡುಗೇರಿಸಿಕೊಂಡು ಭಾರತ ಹೆಮ್ಮೆ ಪಡುವಂತೆ ಮಾಡಿದರು. ಇಂದು ಇವರಿಗೆ ಹುಟ್ಟಿದ ಹಬ್ಬದ ಸಂಭ್ರಮ. ಪೊಲೆಂಡಿನಲ್ಲಿ ದಕ್ಷಿಣ ಆಫ್ರಿಕಾ ಮೂಲದ ಸಂಸ್ಥೆ ನಡೆಸಿದ ಸುಪ್ರಾ ನ್ಯಾಷನಲ್ ಸೌಂದರ್ಯ ಸ್ಫರ್ಧೆಯಲ್ಲಿ ಆಶಾ ಭಟ್ ‘ಮಿಸ್ ಸುಪ್ರಾ  ನ್ಯಾಷನಲ್ ಕಿರೀಟ’ ತಮ್ಮದಾಗಿಸಿಕೊಂಡು, ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಭಾರತೀಯರೆಂಬ ಕೀರ್ತಿಗೂ ಆಶಾ ಭಟ್ ಭಾಜನರಾಗಿದ್ದರು.

 ಬಲು ಚತುರೆ ಈ ಸುಂದರಿ!!

ಭದ್ರಾವತಿಯವರಾದ ಆಶಾ ಭಟ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಚಾರ್ಲ್ಸ್ನಲ್ಲಿ ಪೂರೈಸಿದ್ದು ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿರುತ್ತಾರೆ. ಇದಲ್ಲದೇ ಆಶಾ ಭಟ್  ಹಾಡುಗಾರಿಕೆ, ಚಿತ್ರಕಲೆ , ಭರತನಾಟ್ಯ , ವೆಸ್ಟರ್ನ್ ನೃತ್ಯ ಸೇರಿದಂತೆ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳು ಈ ಚತುರೆ.

asha bhat images ncc cadet ಗೆ ಚಿತ್ರದ ಫಲಿತಾಂಶ

ಶಿಕ್ಷಣ

ಆಶಾ ಆಳ್ವಾಸ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ’ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ಗ’ ಕ್ಯಾಡೆಟ್ ಆಗಿ ಸೇರಿಕೊಂಡರು ಮತ್ತು ‘ರಿಪಬ್ಲಿಕ್ ಡೇ’ ಕ್ಯಾಂಪ್ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಸಾರ್ಕ್ ( ದಕ್ಷಿಣ ಏಷ್ಯಾದ ಅಸೋಸಿಯೇಷನ್ ​​ಫಾರ್ ರೀಜನಲ್ ಕೋಆಪರೇಷನ್ ರಾಷ್ಟ್ರಗಳ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನಿಯೋಗದ ಸದಸ್ಯರಾಗಿದ್ದು ಮತ್ತು ಶ್ರೀಲಂಕಾ ಮಿಲಿಟರಿ ಅಕಾಡೆಮಿಗೆ ಭೇಟಿ ನೀಡಿ, ಶ್ರೀಲಂಕಾ  ಅಧ್ಯಕ್ಷ ಮಹಿಂದಾ ರಾಜಪಕ್ಷರಿಂದ ‘2009 ರ ಆಲ್ ರೌಂಡರ್’ ಪ್ರಶಸ್ತಿಯನ್ನು ಗೆದ್ದು ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ ಆಶಾ.

Image result for miss supranational 2014

2014ರಲ್ಲಿ ಮಿಸ್ ಸುಪ್ರ ಕಿರೀಟ

2014 ರ ವರ್ಷದಲ್ಲಿ ದಿ ಟೈಮ್ಸ್ ಗ್ರೂಪ್ ಆಯೋಜಿಸಿದ್ದ ಮಿಸ್ ದಿವಾ ಸ್ಪರ್ಧೆಯಲ್ಲಿ ಪಾಲ್ಗೊಂಡು, ಮಿಸ್ ಇಂಡಿಯಾ ಸುಪ್ರ ನ್ಯಾಷನಲ್ 2014, ಮಿಸ್ ಇಂಡಿಯಾ ಅರ್ಥ್ 2014  ಹೀಗೆ ಅನೇಕ ಪೇಜೆಂಟ್ ಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಆಶಾ ಮಿಸ್ ದಿವಾ 2014 ನಲ್ಲಿ ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಇದರಲ್ಲಿ ಮಿಸ್ ಕಾಂಜಿನಿಯಾಲಿಟಿ, ಮಿಸ್ ಬ್ಯೂಟಿಫುಲ್ ಸ್ಮೈಲ್ ಮತ್ತು ಮಿಸ್ ಫ್ಯಾಸ್ಚಿಟಿಂಗ್.

ಸಂಬಂಧಿತ ಚಿತ್ರ

ಪೋಲೆಂಡ್ನ ಕ್ರೈನಿಕಾ-ಝಡ್ರೋಜ್ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ 2014 ರಲ್ಲಿ ಭಾರತವನ್ನು ಪ್ರತಿನಿಧಿಸಿದ ಈ ಬೆಡಗಿ ಮತ್ತು ಡಿಸೆಂಬರ್ 5, 2014 ರಂದು ನಡೆಯುವ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ವಿಜೇತರಾಗುವ ಮೂಲಕ ಭಾರತಕ್ಕೆ ಸುಪ್ರ ಕಿರೀಟ ತಂದು ಕೊಟ್ಟರು. ಸ್ಪರ್ಧೆಯಲ್ಲಿ “ಬೆಸ್ಟ್ ಇನ್ ಟ್ಯಾಲೆಂಟ್” ಗಾಗಿ ವಿಶೇಷ ಪ್ರಶಸ್ತಿಯನ್ನು ಗೆದ್ದುಮಿಸ್ ಸುಪ್ರನ್ಯಾಷನಲ್ 2014 ರ ಹೊರಹೋಗುವ ಶೀರ್ಷಿಕೆಗಾರ ಮಿಸ್ ಸುಪ್ರನ್ಯಾಷನಲ್ 2013, ಫಿಲಿಪೈನ್ಸ್ನ ಮುತ್ಯಾಯಾ ಜೊಹನ್ನಾ ಡಾತುಲ್  ಕೈಯಿಂದ ಕಿರೀಟವನ್ನು ತನ್ನದಾಗಿಸಿಕೊಂಡಳು.

asha bhat images ಗೆ ಚಿತ್ರದ ಫಲಿತಾಂಶ

ವೃತ್ತಿಜೀವನ

ಆಶಾ ಯಮಹಾ ಮೋಟಾರ್ ಕಂಪನಿ , ಕ್ಲೋಸ್-ಅಪ್ , ಫೆಮಿನಾ , ಆರ್ಟ್ಸ್ ಮ್ಯಾಗಝೀನ್ ಸೇರಿದಂತೆ ಬ್ರಾಂಡ್ಗಳಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಆಸ್ಟ್ರಾ ಫೌಂಡೇಷನ್ ಎಂಬ ಹೆಸರಿನ ಸ್ವಂತ ಎನ್ಜಿಒವನ್ನು ನಡೆಸುತ್ತಾರೆ

ಹಾಲಿವುಡ್ ನ ಸಿನಿಮಾದಲ್ಲಿ ನಟಿಸಿರುವ ಆಶಾ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಈಕೆ ಬಾಲಿವುಡ್ ಗೂ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.. ಚಂದನವನಕ್ಕೆ ಈ ಬೆಡಗಿ ಲಗ್ಗೆ ಇಟ್ಟರೆ ಎಲ್ಲರ ಹಾಟ್ ಫೇವರೇಟ್ ನಟಿ ಆಗುವುದರಲ್ಲಂತೂ  ಸಂಶಯವಿಲ್ಲ.

ಬಾಲ್ಕನೀ ನ್ಯೂಸ್ ವತಿಯಿಂದ ಆಶಾ ಭಟ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ಸಂಬಂಧಿತ ಚಿತ್ರ

Tags