ಸುದ್ದಿಗಳು

‘ಕೆ.ಜಿ.ಎಫ್’ ಚಿತ್ರದ ಹಾಡನ್ನು ಹಾಡಿದ ಬಾಲಿವುಡ್ ನಟಿ !!

ಬೆಂಗಳೂರು,ಮೇ.19: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ಗಮನ ಸೆಳೆದಿದ್ದ ಕನ್ನಡದ ಹುಡುಗಿ ಈಗ ಬಾಲಿವುಡ್ ಸಿನಿಮಾ ನಟಿ. ಹಿಂದಿಯ ‘ಜಂಗ್ಲಿ’ ಎಂಬ ಚಿತ್ರಕ್ಕೆ ನಾಯಕಿಯಾಗಿ ನಟಿಸಿ ಮಿಂಚಿದ್ದಾರೆ. ಅಮೆರಿಕ ಮೂಲಕ ಚುಕ್‌ ರುಸೆಲ್‌ ನಿರ್ದೇಶನದ ಚಿತ್ರ ಇದು.

Related image

ಬಹುಮುಖ ಪ್ರತಿಭಾವಂತೆ

ಆಶಾ ಭಟ್ ನಟಿಯಲ್ಲದೆ ಸಂಗೀತ, ಡ್ಯಾನ್ಸಿಂಗ್, ಮಾರ್ಷಲ್ ಆರ್ಟ್ಸ್‌ ಸೇರಿದಂತೆ ವಿವಿಧ ರೀತಿಯ ಕಲೆಗಳಲ್ಲಿ ಕಲಿತಿದ್ದಾರೆ. ಶಾಲಾ ಕಾಲೇಜು ಜೀವನದಲ್ಲಿ ಓದು, ಸಾಂಸ್ಕೃತಿಕ ಚಟುವಟಿಕೆ ಎಂದು ತೊಡಗಿಸಿಕೊಂಡಿದ್ದ ಆಶಾ, ಯಾವುದೇ ಕೆಲಸ ಮಾಡುವುದಿದ್ದರೂ ಕೂಡ ಶೇ.100ರಷ್ಟು ಶ್ರದ್ಧೆ, ಆಸಕ್ತಿ ತೋರುವ ಅಭ್ಯಾಸ ಹೊಂದಿದ್ದವರು. ಎನ್ಸಿಸಿ, ಚರ್ಚೆ, ವೇದಿಕೆ ಪ್ರದರ್ಶನ, ಭಾಷಣದಲ್ಲಿ ಕೂಡ ತಮ್ಮ ಚಾಕಚಕ್ಯತೆ ತೋರಿಸುತ್ತಿದ್ದರು.

Related image

‘ಧೀರ ಧೀರ ಸುಲ್ತಾನ’.. ಹಾಡನ್ನು ಹಾಡಿದ ಆಶಾ!!

ಈಗ ಆಶಾ ಇಡೀ ಭಾರತದಾದ್ಯಂತ ಹವಾ ಸೃಷ್ಟಿಸಿದ ‘ಕೆ.ಜಿ.ಎಫ್’  ಚಿತ್ರದ ‘ಧೀರ ಧೀರ ಸುಲ್ತಾನ’.. ಹಾಡನ್ನು ಯಾವುದೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇಲ್ಲದೆ ತುಂಬಾ ಮಧುರುವಾಗಿ ಹಾಡಿದ್ದಾರೆ.. ಇದನ್ನು ತಮ್ಮ ಗೆಳತಿ, ‘ಕೆ.ಜಿ.ಎಫ್’ ನಟಿ ಶ್ರೀನಿಧಿ ಶೆಟ್ಟಿಗೆ ಹಾಗೂ ಕನ್ನಡ ಅಭಿಮಾನಿಗಳಿಗೆ  ಹಾಡಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಇನ್ನು ಅನೇಕ ಯಶ್ ಫ್ಯಾನ್ಸ್ ಪೇಜ್ ಗಳು  ಇವರ ಹಾಡಿಗೆ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ..

ಆಶಾ ಭಟ್ ಯಾವುದೇ ಸಿಂಗರ್ ಗೂ ಕಡಿಮೆಯಿಲ್ಲ.. ಯಾಕೆಂದರೆ ಇವರು ಕೂಡ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. ಭದ್ರಾವತಿ ಬೆಡಗಿ ಆದ ಆಶಾಗೆ ಕನ್ನಡದಲ್ಲಿ ನಟಿಸುವ ಆಸೆಯಿದ್ದು ಉತ್ತಮ ಅವಕಾಶ ಸಿಕ್ಕರೆ ಕನ್ನಡದಲ್ಲೂ ನಟಿಸುವುದು ಖಂಡಿತಾ!!

ನೋಟಗಾರನಿಗೆ ಜೊತೆಯಾದ ಅಶ್ವಿನಿ ಚಂದ್ರಶೇಖರ್

#ashabhat #ashabhatfanspage #kgfmovie #yash #yashmovie #srinidhishetty

Tags