ಸುದ್ದಿಗಳು

‘ರೋಗ್’ ಚಿತ್ರದ ನಾಯಕ ಇಶಾನ್ ಜೊತೆಗೆ ಕಾಣಿಸಿಕೊಂಡ ಆಶಿಕಾ ರಂಗನಾಥ್

ನಟಿ ಆಶಿಕಾ ರಂಗನಾಥ್ ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಮೊನ್ನೆಯಷ್ಟೇ ಕಾಶ್ಮೀರಿ ಶೈಲಿಯಲ್ಲಿ Ramp ವಾಕ್ ಮಾಡಿ ಸುದ್ದಿಯಾಗಿದ್ದ ಇವರೀಗ ‘ರೋಗ್’ ಚಿತ್ರದ ನಾಯಕ ಇಶಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಹೌದು, ಆಶಿಕಾ ಇದೀಗ ಇಶಾನ್ ಗೆ ಜೋಡಿಯಾಗುತ್ತಿದ್ದಾರೆ. ಹಾಗಂತಾ ನಿಜ ಜೀವನದಲ್ಲಲ್ಲಾ ಸಿನಿಮಾದಲ್ಲಿ. ಹೌದು, ಅವರ ಕೈಯಲ್ಲೀಗ ಸಾಕಷ್ಟು ಸಿನಿಮಾಗಳಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ಕೆಲವು ದಿನಗಳಿಂದ ಇಶಾನ್ ನಟಿಸಲಿರುವ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಅದೀಗ ನಿಜವಾಗಿದ್ದು, ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಜೊತೆಗೆ ‘ನಟಸಾರ್ವಭೌಮ’ ಚಿತ್ರದ ನಂತರ ಪವನ್ ಹೊಸಬರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಈ ಚಿತ್ರವು ಶುರುವಾಗುವ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸುತ್ತಿದೆ.

ಅಂದ ಹಾಗೆ ಇಶಾನ್ ಈ ಮೊದಲು ‘ರೋಗ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾದರು. ಆನಂತರ ಯಾವ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಪವನ್ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ಇದೊಂದು ಲವ್ ಸ್ಟೋರಿಯನ್ನು ಒಳಗೊಂಡ ಸಿನಿಮಾವಾಗಿದ್ದು, ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿದ್ದು ಚಿತ್ರತಂಡ ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

ಇನ್ನು ‘ಕ್ರೇಜಿಬಾಯ್’ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಅವರು ‘ಮುಗುಳು ನಗೆ’, ‘ರಾಜು ಕನ್ನಡ ಮೀಡಿಯಂ’, ‘ಮಾಸ್ ಲೀಡರ್’, ‘ತಾಯಿಗೆ ತಕ್ಕ ಮಗ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ರಂಗ ಮಂದಿರ’ ಹಾಗೂ ‘ಅವತಾರ್ ಪುರುಷ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಿಹಾರದ 2100 ರೈತರ ಬ್ಯಾಂಕ್ ಸಾಲ ತೀರಿಸಿದ ನಟ ಅಮಿತಾಬ್ ಬಚ್ಚನ್

#ishan, #ashikaranganath, #movie, #news, #balkaninews #filmnews, #pawanodeyar, #filmnews #kannadasuddigalu,

Tags