ಸುದ್ದಿಗಳು

ಮುದ್ದು ಆನೆಮರಿಗೆ ಸ್ನಾನ ಮಾಡಿಸಿ, ಕನಸನ್ನು ನನಸು ಮಾಡಿಕೊಂಡ ಆಶಿಕಾ ರಂಗನಾಥ್

ಕೊಡಗಿನ ‘ದುಬಾರೆ’ ಆನೆಗಳ ಕ್ಯಾಂಪಿನಲ್ಲಿ ‘ಮುಗುಳು ನಗೆ’ ಚೆಲುವೆ

ಬೆಂಗಳೂರು,ಡಿ.15: ಈ ವರ್ಷ ಒಟ್ಟು ಮೂರು ಚಿತ್ರಗಳಲ್ಲಿ ನಟಿಸಿದ ಖುಷಿಯಲ್ಲಿರುವ ‘ಮುಗುಳು ನಗೆ’ ಚೆಲುವೆ ಆಶಿಕಾ ರಂಗನಾಥ್, ಇದೀಗ ‘ರಂಗಮಂದಿರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಶೂಟಿಂಗ್ ನಡುವೆ ಕೊಂಚ ಬ್ರೇಕ್ ತೆಗೆದುಕೊಂಡು, ಕೊಡಗಿನ ದುಬಾರೆ ಆನೆಗಳ ಕ್ಯಾಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಆನೆಗೆ ಸ್ನಾನ ಮಾಡಿಸಿದ ಆಶಿಕಾ

ಬಹು ದಿನಗಳಿಂದ ಆನೆ ಮರಿಗಳಿಗೆ ಸ್ನಾನ ಮಾಡಿಸಬೇಕೆಂಬ ಕನಸನ್ನು ಹೊತ್ತುಕೊಂಡಿದ್ದ ಆಶಿಕಾ ಕೊನೆಗೂ ಕೂರ್ಗ್ ‘ದುಬಾರೆ’ ಆನೆಗಳ ಕ್ಯಾಂಪಿಗೆ ತೆರಳಿ, ಅಲ್ಲಿ ನಾಲ್ಕು ವರ್ಷದ ಕಮಲಿ ಎಂಬ ಆನೆ ಮರಿಗೆ ಸ್ನಾನ ಮಾಡಿಸಿ ಸಂತಸ ಪಟ್ಟಿದ್ದಾರೆ. ಸದ್ಯ ಕನಸು ನನಸಾದ ಬಗೆಯನ್ನು ಅವರು ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಡಿಮ್ಯಾಂಡ್ ನಲ್ಲಿರುವ ಆಶಿಕಾ

ಆಶಿಕಾ ರಂಗನಾಥ್ ಈ ವರ್ಷದ ತುಂಬ ಬ್ಯುಸಿ ಇದ್ದರು. ‘ರಾಜು ಕನ್ನಡ ಮೀಡಿಯಾಂ’, ‘ರಾಂಬೋ 2’ ಹಾಗೂ ‘ತಾಯಿಗೆ ತಕ್ಕ ಮಗ’ ಅವರ ನಟನೆಯಲ್ಲಿ ಈ ವರ್ಷ ಬಿಡುಗಡೆಯಾದ ಸಿನಿಮಾಗಳಾಗಿವೆ. ಇವುಗಳಲ್ಲಿ ‘ರಾಂಬೋ 2′ ಚಿತ್ರ ಶತದಿನ ಪೂರೈಸಿದೆ, ‘ರಾಜು ಕನ್ನಡ ಮೀಡಿಯಾಂ’ ಓಕೆ ಓಕೆ ಎನಿಸಿದೆ. ಆದರೆ,’ತಾಯಿಗೆ ತಕ್ಕ ಮಗ’ ಅಷ್ಟೊಂದು ಗಮನ ಸೆಳೆಯಲಿಲ್ಲ.

ರಂಗಮಂದಿರ…

ಸದ್ಯ ಆಶಿಕಾ ರಂಗನಾಥ್ ‘ರಂಗಮಂದಿರ’ ಚಿತ್ರದಲ್ಲಿ ನಟಿಸುತ್ತಿದ್ದು, ಇವರೊಂದಿಗೆ ಪ್ರವೀಣ್ ತೇಜ್, ಅನುಪಮಾ ಗೌಡ , ಶ್ರುತಿ ಪ್ರಕಾಶ್, ರಂಗಾಯಣ ರಘು, ಅಚ್ಯುತ್ ಕುಮಾರ್, ತೆಲುಗು ನಟ ಸುಮನ್ ಸೇರಿದಂತೆ ಮುಂತಾದವರೂ ನಟಿಸುತ್ತಿದ್ದಾರೆ.

Tags