ಸುದ್ದಿಗಳು

ಚಿಣ್ಣರ ಮೇಲೆಸಗುವ ಅತ್ಯಾಚಾರಿಗಳ ವಿರುದ್ದ ಹೋರಾಡುವ ಕಥೆಯೇ ‘ಅಸುರ ಸಂಹಾರ’

ಅತ್ಯಾಚಾರದ ನೈಜ ಘಟನೆಯನ್ನಾಧರಿಸಿ ತಯಾರು ಮಾಡಿರುವ ಸಿನಿಮಾ

ಬೆಂಗಳೂರು.ಫೆ.14

ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಅರಸ್ ನಿರ್ದೇಶನ ಮಾಡಿರುವ ಸಿನಿಮಾ ‘ಅಸುರ ಸಂಹಾರ’ ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ನೋಡುಗರ ಗಮನ ಸೆಳೆದಿತ್ತು.

ಸದ್ಯದಲ್ಲಿಯೇ ತೆರೆಗೆ

ಇಂದು ದೈನಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಚಿಣ್ಣರ ಮೇಲೆಸಗುವ ಅತ್ಯಾಚಾರಗಳನ್ನು ಇಡೀ ದೇಶದ ಸಮಸ್ಯೆಯಾಗಿ ವಿಶ್ಲೇಷಿಸುವ ಸಿನಿಮಾ ಇದಾಗಿದ್ದು, ಹರಿ ಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರದಲ್ಲಿ ಅಣ್ಣ, ತಂಗಿಯನ್ನು ಹೇಗೆ ಕಾಪಾಡುತ್ತಾನೆ ಎಂಬ ಅಂಶಗಳನ್ನು ನೋಡಬಹುದು.

ನೈಜ ಘಟನೆ ಆಧಾರಿತ

ರೆಬೆಲ್ ಸ್ಟಾರ್ ಅಂಬರೀಶ್ ಅರ್ಪಿಸಿರುವ ಈ ಚಿತ್ರವನ್ನು ಶ್ರೀ ಚಂಡಿಕೇಶ್ವರಿ ಕ್ರಿಯೇಷನ್ಸ್ ನ ಅಡಿಯಲ್ಲಿ ಹರಿಪ್ರಸಾದ್ ಅವರು, ಡೇರಿಂಗ್ ಸ್ಟಾರ್ ಧರ್ಮರವರ ಸಹಕಾರದಿಂದ ನಿರ್ಮಿಸಿ, ನಟಿಸಿದ್ದಾರೆ.

ಇತ್ತಿಚೆಗಷ್ಟೇ ಕೋಲಾರದ ಮಾಲೂರಿನಲ್ಲಿ ‘ರಕ್ಷಿತಾ’ ಎಂಬ ಹುಡುಗಿ ಮೇಲೆ ಕಾಮುಕರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಲವು ಸಂಘಟನೆಗಳು ಹೋರಾಡುತ್ತಿದೆ. ಈಗ ಇಂತಹುದೇ ಕಥೆಯನ್ನು ಇಟ್ಟುಕೊಂಡು ಯುವ ನಿರ್ದೇಶಕ ಪ್ರದೀಪ್ ಕುಮಾರ್ ಈ ಚಿತ್ರವನ್ನು ಮಾಡಿದ್ದಾರೆ.

ಚಿತ್ರದಲ್ಲಿ ಹರಿಪ್ರಸಾದ್, ಹರ್ಷಲಾ ಹನಿ, ಧರ್ಮರಾಜ್, ವೀಣಾ ಸುಂದರ್, ದರ್ಶನ್, ಟಾಮಿ, ಶಿವು ಬಾಲಾಜಿ, ವಿನಯ್, ದೀಕ್ಷಾ, ಅಶ್ವಿನ್, ಹರಿ ಬ್ರಮಾರ್ಯ ಸೇರಿದಂತೆ ಬಹುತೇಕ ಹೊಸಬರು ಹಾಗೂ ಹಲವಾರು ಹೆಸರಾಂತ ಕಲಾವಿದರು ನಟಿಸಿದ್ದಾರೆ.

ಚಿತ್ರವನ್ನು ಅರಸೀಕೆರೆ, ಬೀರೂರು, ಶ್ರವಣ ಬೆಳಗೊಳ, ಮಂಗಳೂರು ಸೇರಿದಂತೆ ವಿವಿದೆಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಬಾಲಿವುಡ್ ನ ಖ್ಯಾತ ನಟಿ ಮಧುಬಾಲಾ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

#asurasamhara, #balkaninews #kannadasuddigalu, #childrape

Tags