ಸುದ್ದಿಗಳು

ಅಥರ್ವ ಸಿನಿಮಾ ನೋಡಿ, ಅದೃಷ್ಟವಿದ್ರೇ ಬುಲೆಟ್ ಬೈಕ್ ಗೆಲ್ಲಿ

ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಪವನ್ ತೇಜ್ ನಟಿಸಿರುವ ಅಥರ್ವ ಸಿನಿಮಾ ಇದೇ ಜುಲೈ. 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅರುಣ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಈಗಾಗಲೇ ನಿರೀಕ್ಷೆಯನ್ನುಂಟು ಮಾಡಿದೆ. ಹಿರಿಯ ನಟ ಶಕ್ತಿಪ್ರಸಾದ್ ಪುತ್ರ ಅರ್ಜುನ್ ಸರ್ಜಾ ಅವರ ಸಹೋದರಿಯ ಮಗ ‘ಪವನ್ ತೇಜ್’ ಅಥರ್ವ ಎಂಬ ಚಿತ್ರದ ಮೂಲಕ ನಾಯಕನಟರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಹಿರಿಯ ನಟಿ ತಾರಾ ಅನುರಾಧ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್, ಲವ್, ಎಂಟರ್ಟೈನ್ ಮೆಂಟ್, ಸೆಂಟಿಮೆಂಟ್ ನಂತಹ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಾಯಕಿಯಾಗಿ ಕರಾವಳಿ ಮೂಲದ ಸನಂ ಶೆಟ್ಟಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಶಿವಸೇನಾ ಅವರ ಛಾಯಾಗ್ರಹಣವಿದ್ದು, ವಿನಯ್ ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರತಂಡವು ಪ್ರೇಕ್ಷಕರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ. ಅದುವೇ ಒಂದು ಬುಲೆಟ್ ಬೈಕ್.

ಚಿತ್ರವು ಬಿಡುಗಡೆಯಾದ ನಂತರ ಆ ಬುಲೆಟ್ ಬೈಕ್ನ್ನು ಪ್ರೇಕ್ಷಕರಿಗೆ ನೀಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಆದರೆ ಈ ಬೈಕ್ ಪಡೆಯುವುದಕ್ಕೆ ಪ್ರೇಕ್ಷಕರು ಮಾಡಬೇಕಾಗಿರುವುದು ಇಷ್ಟೇ. ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ‘ಅಥರ್ವ’ ಚಿತ್ರವನ್ನು ನೋಡುವ ಪ್ರೇಕ್ಷಕರು, ಟಿಕೆಟ್ ಹಿಂದೆ ಅವರ ಹೆಸರು ಮತ್ತು ಫೋನ್ ನಂಬರ್ ಬರೆದು ಥಿಯೇಟರ್ಗಳಲ್ಲಿ ಅಳವಡಿಸಿರುವ ಬಾಕ್ಸ್ ನಲ್ಲಿ ಹಾಕಬೇಕು. ಎಲ್ಲಾ ಚಿತ್ರಮಂದಿರಗಳ ಬಾಕ್ಸ್ ಗಳಲ್ಲಿನ ಟಿಕೆಟ್ ಗಳನ್ನು ಒಟ್ಟಾಗಿ ಸೇರಿಸಿ ಲಕ್ಕಿ ಡಿಪ್ ಮೂಲಕ ಅದೃಷ್ಟವಂತರನ್ನು ಆರಿಸಲಾಗುತ್ತದೆ. ಈ ರೀತಿ ಹೆಸರು ಬಂದ ಅದೃಷ್ಟವಂತರುಗೆ ಬೈಕ್ ನೀಡಲಿದೆ ಚಿತ್ರತಂಡ.

 

@ sunil javali

Tags