ಸುದ್ದಿಗಳು

ಸ್ಯಾಂಡಲ್ ವುಡ್ ನಲ್ಲಿಂದು ಸೆಲೆಬ್ರಿಟಿಗಳ ಬರ್ತಡೇ ಸಂಭ್ರಮ

ಆಗಸ್ಟ್ 15 ಇಡೀ ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಆಚರಣೆ ಮಾಡುತ್ತಿದ್ದು, ಎಲ್ಲೆಡೆ ಸಂತಸ ಮನೆಮಾಡಿದೆ. ಆದರೆ, ಈ ಸಂತೋಷದ ಆಚರಣೆಯ ನಡುವೆ ನಮ್ಮ ಚಿತ್ರರಂಗದ ತಾರೆಯರು ಹಾಗೂ ನಿರ್ದೇಶಕರ ಹುಟ್ಟುಹಬ್ಬವಿದೆ. ಅವರಿಗೂ ಕೂಡ ನಾವಿಂದು ಜನ್ಮದಿನದ ಶುಭಾಷಯಗಳನ್ನು ಕೋರೋಣ.

ಹೌದು, ಇಂದು ಸ್ಯಾಂಡಲ್ ವುಡ್ ಜನಪ್ರಿಯ ಕಲಾವಿದರಾದ ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಸುಹಾಸಿನಿ ಹಾಗೂ ರಾಘವೇಂದ್ರ ರಾಜ್ ಕುಮಾರ್ ರವರು ಸಂಭ್ರಮದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೇ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂತೋಷ್ ಆನಂದ್ ರಾಮ್ ರವರ ಜನ್ಮದಿನವೂ ಕೂಡ ಇಂದೇ ಇರುವುದು ಅವರ ಅಭಿಮಾನಿಗಳಿಗೆ ಸಂತಸಯುಂಟು ಮಾಡಿದೆ.ಬಹಳಷ್ಟು ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನಪಡೆದುಕೊಂಡಿರುವ ಮೇರು ಕಲಾವಿದರು ಹಾಗೂ ನಿರ್ದೇಶಕರಿಗೆ ನಮ್ಮ ಬಾಲ್ಕನಿ ನ್ಯೂಸ್  ಹುಟ್ಟುಹಬ್ಬದ ಶುಭಾಷಯವನ್ನು ಕೋರುತ್ತಿದ್ದೇವೆ.

ನಿಮ್ಮ 73ನೇ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಹೀಗಿರಲಿ…

#balkaninews #santhoshanandram #nagathihallichandrashekhar #arjunsarja #suhasini #raghavendrarajkumar #sandalwoodbirthdays #august15thsandalwoodcelebritiesbirthdays

Tags