ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಚಿತ್ರ ವಿಮರ್ಶೆ: ಬೆಳ್ಳಿತೆರೆಯ ಮೇಲೆ ‘ನಾರಾಯಣನ’ದ್ದೇ ದರ್ಬಾರ್..

ಮೂರು ವರ್ಷದ ರಕ್ಷಿತ್ ಕನಸು ಫಲಿಸಿದೆ

ರೇಟಿಂಗ್:3.5/5

ಕಲಾವಿದರು: ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ಮಠ ಕೊಪ್ಪಳ, ಶಾನ್ವಿ ಶ್ರೀವಾತ್ಸವ್, ಅಚ್ಚುತ್ ಕುಮಾರ್ ಹಾಗೂ ಇತರರು

ಸಂಗೀತ: ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್

ನಿರ್ದೇಶನ: ಸಚಿನ್ ರವಿ

ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ವರ್ಷಗಳ ಪರಿಶ್ರಮ  ತೆರೆಯ ಮೇಲೆ ‘ಶ್ರೀಮನ್ನಾರಾಯಣ’ನ ದರ್ಶನಕ್ಕೆ ಕಾದು ಕುಳಿತಿದ್ದ ಪ್ರೇಕ್ಷಕ ಪ್ರಭುಗೆ ರಕ್ಷಿತ್ ಶೆಟ್ಟಿ ದರ್ಶನ ಕೊಟ್ಟಿದ್ದಾರೆ. ನಾರಾಯಣನ ಅವತಾರದಲ್ಲಿ ಮ್ಯಾಜಿಕ್ ಮಾಡಿರುವ ಸಿಂಪಲ್ ಸ್ಟಾರ್ ನಟನೆ ಕಂಡು ಸಿನಿಪ್ರೇಕ್ಷಕ ಪುಳಕಿತನಾಗಿದ್ದಾನೆ….

‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಇವತ್ತು ಅದ್ಧೂರಿಯಾಗಿ ತೆರೆಗೆ ಎಂಟ್ರಿ ಕೊಟ್ಟಿದೆ.  ಸ್ಕ್ರೀನ್ ಪ್ಲೇ, ಮೇಕಿಂಗ್, ಕಲಾವಿದರ ನಟನೆ, ಬಿಜಿಎಂ, ವಿಷ್ಯುವಲ್ ಟ್ರೀಟ್ ಎಲ್ಲವೂ ಸೂಪರ್ ಆಗಿ ಮೂಡಿ ಬಂದಿದೆ.

ಅಮರಾವತಿ ಎನ್ನುವ ಊರು. ಈ ಊರಲ್ಲಿ ಗೂಂಡಾಗಳ ಹಾವಳಿ. ಇದನ್ನು ತಡೆಯಲು ಬರುವ ಪೊಲೀಸ್. ಆರಂಭದಲ್ಲಿ ಪೊಲೀಸ್ ತೆಪ್ಪಗಿರುತ್ತಾನೆ. ನಂತರ ಗೂಂಡಾಗಳು ಮಾಡುವ ಕಿತಾಪತಿ ತಾಳಲಾರದೆ ಫುಲ್ ವೈಲೆಂಟ್ ಆಗುತ್ತಾನೆ. ಈ ನಡುವೆ ಒಂದು ಲವ್ ಸ್ಟೋರಿ ಶುರುವಾಗುತ್ತದೆ. ಇದು ಸಾಮಾನ್ಯ ಚಿತ್ರಗಳಲ್ಲಿರುವ ಬರುವ ಕಥೆ. ಆದರೆ, ‘ಅವನೇ ಶ್ರೀಮನ್ನಾರಾಯಣ’ದಲ್ಲಿ ಎಲ್ಲವೂ ಡಿಫರೆಂಟ್.

ಇಲ್ಲಿ ಗೂಂಡಾಗಳಿದ್ದಾರೆ, ಪೊಲೀಸ್ ಕೂಡ ಇದ್ದಾನೆ. ಆದರೆ, ಈ ಪೊಲೀಸ್ ಎಲ್ಲರಂತಲ್ಲಾ ಆತ ಡಕಾಯಿತನೂ ಆಗಿರುತ್ತಾನರ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇಡೀ ಚಿತ್ರವೇ  ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡುತ್ತದೆ.

ಇನ್ನು ರಕ್ಷಿತ್ ಜೊತೆ ಮಿಂಚಿರುವ ‘ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ನಟನೆಯಂತೂ ಸಿಂಪ್ಲಿ ಸೂಪರ್. ಕಾನ್ಸ್ಟೇಬಲ್ ಪಾತ್ರದಲ್ಲಿ  ಅಚ್ಯುತ್ ಕುಮಾರ್ , ಜಯರಾಮ್ ಪಾತ್ರದಲ್ಲಿ ಬಾಲಾಜಿ ಮನೋಹರ್,  ತುಕಾರಾಮ್ ಪ್ರಮೋದ್ ಶೆಟ್ಟಿ  ಮಿಂಚಿದ್ದಾರೆ.

ಹಾಗೆ ನೋಡಿದ್ರೆ ‘ಅವನೇ ಶ್ರೀಮನ್ನಾರಾಯಣ’ ಮಾಸ್ ಅಂಡ್ ಕ್ಲಾಸ್ ಎರಡು ಪ್ರೇಕ್ಷಕರಿಗೆ ಹೇಳಿ ಮಾಡಿಸಿದ. ಇನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ನಿರ್ದೇಶಕ ಸಚಿನ್ ರವಿ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಇನ್ನು, ಪುಷ್ಕರ್ ಮಲ್ಲಿಕಾರ್ಜುನಯ್ಯ ಅಂಡ್ ಟೀಂ ಪರಿಶ್ರಮ ಎಲ್ಲವೂ ತೆರೆಮೇಲೆ ಚೆನ್ನಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೇಳಬೇಕಂದರೆ ನಿಜಕ್ಕೂ ‘ಶ್ರೀಮನ್ನಾರಾಯಣ’ ಚರಿತ್ರೆ ಸೃಷ್ಟಿಸುತ್ತಾನೆ ಎನ್ನುವುದರಲ್ಲಿ ನೋ ಡೌಟ್.

ಜೋಕರ್ ವೇಷಕ್ಕಾಗಿ ಸುದೀಪ್ ಹೀಗೆಲ್ಲಾ ಮಾಡಿದ್ದರು..?

#AvaneSrimannarayana #AvaneSrimannarayanaReview #RakshithShetty #KannadaSuddigalu

Tags