ಸುದ್ದಿಗಳು

‘ಮೈ ಆಟೋಗ್ರಾಫ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮನೆಯಲ್ಲಿ ಇದೀಗ ‘ಅವತಾರ ಪುರುಷ’ ನ ಶೂಟಿಂಗ್

ಕೇರಳದ ಸುಂದರ ಮನೆಯಲ್ಲಿ ಅವತಾರ ಪುರುಷನಾದ ಶರಣ್!

ಬೆಂಗಳೂರು, ಮಾ.21:

ಕಿಚ್ಚ ಸುದೀಪ್ ಅಭಿನಯದ ಚಿತ್ರ “ಮೈ ಆಟೋಗ್ರಾಫ್ ” ಚಿತ್ರ ಬಿಡುಗಡೆಯಾಗಿ ಸುಮಾರು ಹದಿಮೂರು ವರುಷಗಳೇ ಕಳೆದಿವೆ. ‘ಮೈ ಆಟೋಗ್ರಾಫ್’ ಚಿತ್ರದ ಪಾತ್ರಗಳು, ಮನಸೂರೆಗೊಳ್ಳುವ ಹಾಡುಗಳು, ಜೊತೆಗೆ ಚಿತ್ರೀಕರಣಗೊಂಡ ಜಾಗಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಕೇರಳದ ಆ ಮನೆಯ ಸೌಂದರ್ಯವನ್ನು ಅದು ಹೇಗೆ ಮರೆಯಲು ಸಾಧ್ಯ..?

‘ಮೈ ಆಟೋಗ್ರಾಫ್’ ಚಿತ್ರ ಬಂದು ಬರೋಬ್ಬರಿ ಹದಿಮೂರು ವರುಷಗಳೇ ಕಳೆದಿವೆ. ಈಗೇಕೆ ಇದರ ಬಗ್ಗೆ ಮಾತುಕತೆ ಎನ್ನುತ್ತೀರಾ? ಅದಕ್ಕೆ ಕಾರಣವೂ ಇದೆ. ಅಂದು ಕಿಚ್ಚ ಸುದೀಪ್ ಅಭಿನಯದ ‘ಮೈ ಆಟೋಗ್ರಾಫ್’ ನಲ್ಲಿ ಕಾಣಿಸಿಕೊಂಡಿದ್ದ ಕೇರಳದ ಸುಂದರವಾದ ಮನೆಯ ಸೊಬಗು ಮತ್ತೊಮ್ಮೆ ಸಿನಿ ಪ್ರಿಯರ ಕಣ್ಣ ಮುಂದೆ ಬರಲಿದೆ. ಕೇರಳದ ಆ ಮನೆಯಲ್ಲಿ ಇದೀಗ ಕನ್ನಡದ ಮತ್ತೊಂದು ಸಿನಿಮಾ ನಡೆಯುತ್ತಿದೆ.

ಕಾಮಿಡಿ ನಟ ಎಂದೇ ಹೆಸರು ಗಳಿಸಿದ್ದ ಶರಣ್ ಅಭಿನಯದ ‘ಅವತಾರ್ ಪುರುಷ’ ಚಿತ್ರದ ಚಿತ್ರೀಕರಣ ಇದೀಗ ಕೇರಳದ ಆ ದೊಡ್ಡ ಮನೆಯಲ್ಲಿ ನಡೆಯುತ್ತಿದೆ. ಸುಮಾರು 300 ವರ್ಷಗಳಷ್ಟು ಹಳೆಯದಾಗಿರುವ ಈ ಮನೆ 100ಕ್ಕೂ ಅಧಿಕ ಎಕರೆಯ ಜಾಗದಲ್ಲಿದೆ. ಮಾಲಿವುಡ್ ಇಂಡಸ್ಟ್ರಿಯಲ್ಲಿ ಇದನ್ನು ಅದೃಷ್ಟದ  ಮನೆ ಎಂದೇ ಕರೆಯಲಾಗುತ್ತದೆ. ಮಲಯಾಳಂನ ಸಾಕಷ್ಟು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಕೇರಳದ ಸೂಪರ್ ಸ್ಟಾರ್ ಗಳಾದ ಮಮ್ಮುಟ್ಟಿ, ಮೋಹನ್ ಲಾಲ್ ಅವರ ಅಭಿನಯಿಸುವ ಚಿತ್ರದ ಒಂದು ಭಾಗವನ್ನಾದರೂ ಇಲ್ಲಿ ಚಿತ್ರೀಕರಿಸಲೇ ಬೇಕು. ಅಷ್ಟರ ಮಟ್ಟಿಗೆ ಇದು ಅದೃಷ್ಟದ ಮನೆ.

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೆಸರು ಗಳಿಸಿದ ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಚಿತ್ರದ ನಂತರ ಇದೀಗ ಎರಡನೇ ಬಾರಿಗೆ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಚಿತ್ರದ ಚಿತ್ರೀಕರಣವನ್ನು ಇಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಏಪ್ರಿಲ್ 5 ರ ತನಕವೂ ಚಿತ್ರೀಕರಣ ನಡೆಯಲಿದೆ. ಪುಷ್ಕರ್ ಮಲ್ಲಿಕಾರ್ಜುನ ಬಂಡವಾಳ ಹೂಡಿರುವ ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಲಿದ್ದಾರೆ.

ಅಭಿಮಾನಿಗಳೇ ಸಹಾಯ ಮಾಡಿ ಎಂದ ವಿಜಯಲಕ್ಷ್ಮಿ

#myautographkannadamovie #sandalwood #avatarapurusha #kannadamovies #balkaninews

Tags