ಸುದ್ದಿಗಳು

ಇನ್ಫಿನಿಟಿ ವಾರ್ ಮುಗಿದು ಐದು ವರ್ಷಗಳ ನಂತರ ಸೆಟ್ಟರಲಿರುವ ‘ಅವೆಂಜರ್ಸ್ 4’

ಐದು ವರ್ಷಗಳ ನಂತರ 'ಅವೆಂಜರ್ಸ್ 4'

ಅಕ್ಟೋಬರ್, 12: ಅವೆಂಜರ್ಸ್ ಸರಣಿಯ ಮುಂಬರುವ ಚಿತ್ರ ‘ಅವೆಂಜರ್ಸ್ 4’ ನ ಕೆಲ ಪಾತ್ರಗಳು ಸೋರಿಕೆಯಾದ ನಂತರ, ಮತ್ತಷ್ಟು ವಿಭಿನ್ನವಾಗಿ ಕಾಣುತ್ತಿವೆ ಎಂಬ ವದಂತಿಗಳು ಹಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಬ್ಲ್ಯಾಕ್ ವಿಡೋ ಮತ್ತು ಕ್ಯಾಪ್ಟನ್ ನನ್ನು ಮಾರ್ವೆಲ್ ಹೊಸ ರೂಪದ ಕೆಲವು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ ನಂತರ ವದಂತಿಗಳು ಹರಡಲು ಪ್ರಾರಂಭವಾಯಿತು. ಕ್ಯಾಪ್ಟನ್ ಅಮೇರಿಕಾ ಚಿತ್ರಗಳಲ್ಲಿ ವಿಭಿನ್ನ, ಶುದ್ಧ-ಶೇವ್ ನೋಟವನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದರು. ಈ ಸರಣಿಯ ಬಗ್ಗೆ ಕುತೂಹಲ ಹೊಂದಿದ್ದ ಅಭಿಮಾನಿಗಳಿಗೆ ಅಂತಿಮವಾಗಿ ಉತ್ತರ ಗೋಚರವಾಗುತ್ತಿರುವುದು ಕಾಣಿಸುತ್ತಿದೆ.ಅವೆಂಜರ್ಸ್ ಸರಣಿಯ ಮುಂಬರುವ ಚಿತ್ರ ‘ಅವೆಂಜರ್ಸ್: ಆನಿಹೈಲೇಷನ್’?

ಇತ್ತೀಚಿನ ಮಾಹಿತಿಗಳ ಪ್ರಕಾರ, ‘ಅವೆಂಜರ್ಸ್ 4’ ಐದು ವರ್ಷಗಳ ನಂತರ ಸೆಟ್ಟೇರುತ್ತಿದೆ. ಹಾಗಾಗಿ ಪಾತ್ರಗಳಲ್ಲಿ ವಿಭಿನ್ನತೆ ಇರುವುದು ಸಹಜವೇ ಆಗಿದೆ.

ಬರಹಗಾರ ಟ್ವೀಟ್ ಮಾಡಿದ ನಂತರ, ಕಾಲ್ಪನಿಕ ಯುದ್ಧ ದೃಶ್ಯದ ನಂತರ ಚಿತ್ರ “ವರ್ಷಗಳಷ್ಟು” ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಿದ ಮೇಲೆ ವದಂತಿ ಮತ್ತಷ್ಟು ಹೆಚ್ಚಾಯಿತು. ಇದಕ್ಕೆ ಪ್ರತಿಯಾಗಿ ಅಭಿಮಾನಿಯೊಬ್ಬ ಎಷ್ಟು ವರ್ಷಗಳ ಕಾಲ ‘ಲೀಪ್’ ಎಂದು ಕೇಳಿದಾಗ, ಐದು ವರ್ಷ ಎಂದು ಡೇನಿಯಲ್ ಉತ್ತರಿಸಿದ್ದಾರೆ.

ಏತನ್ಮಧ್ಯೆ, ಚಲನಚಿತ್ರದ ಶೀರ್ಷಿಕೆ ಏನಿರಲಿದೆ ಎಂಬುದರ ಬಗ್ಗೆ ಭಾರಿ ಊಹಾಪೋಹಗಳು ಎದ್ದಿವೆ. ಕೆಲ ಮನರಂಜನಾ ಪೋರ್ಟಲ್ ಗಳು ಮುಂದಿನ ವರ್ಷ ಮೇನಲ್ಲಿ ಬಿಡುಗಡೆಗೊಳ್ಳುವ ಈ ಚಿತ್ರಕ್ಕೆ ‘ಅವೆಂಜರ್ಸ್: ಆನಿಹೈಲೇಷನ್’ ಎಂಬ ಹೆಸರಿಡಬಹುದು ಎಂದು ಹೇಳುತ್ತಿವೆ. ‘ಅವೆಂಜರ್ಸ್: ಆನಿಹೈಲೇಷನ್’ ಚಿತ್ರದ ಶೀರ್ಷಿಕೆಯೇ ಉಳಿಯಲಿದೆಯೇ? ಎಂಬುದನ್ನು ಕಾದು ನೋಡಬೇಕು.

Tags

Related Articles