ಸುದ್ದಿಗಳು

ಮತ್ತೆ ಸುದ್ದಿಯಾದ ‘ಅವೆಂಜರ್ಸ್ ಎಂಡ್ ಗೇಮ್’ ಸಿನಿಮಾ

ಬೆಂಗಳೂರು, ಏ.25:

ಹಾಲಿವುಡ್‌ ನ ಬಹು ನಿರೀಕ್ಷಿತ ಸಿನಿಮಾ ‘ಅವೆಂಜರ್ಸ್ ಎಂಡ್ ಗೇಮ್’.. ಈಗಾಗಲೇ ಸಕ್ಕತ್ ಸುದ್ದಿಯಾಗುತ್ತಿರುವ ಈ ಚಿತ್ರ ಬಿಡುಗಡೆಗೂ ಮೊದಲೇ ಬಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಟಿಕೆಟ್ ವಿಚಾರದಲ್ಲೂ ಈ ಚಿತ್ರ ಸದ್ದು ಮಾಡಿದೆ. ಈ ಸಿನಿಮಾ ಟಿಕೆಟ್ ಗೆ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ.

ಟಿಕೆಟ್ ಫುಲ್ ಸೋಲ್ಡೌಟ್

ಹೌದು, ‘ಅವೆಂಜರ್ಸ್ ಎಂಡ್ ಗೇಮ್’ ಭಾರತದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಈ ಸಿನಿಮಾ ಕ್ರೇಜ್ ಎಷ್ಟಿದೆ ಎಂದರೆ ಮುಂಗಡ ಬುಕ್ಕಿಂಗ್ ನಲ್ಲಿ ಒಂದು ದಿನಕ್ಕೆ ಬುಕ್ ಮೈ ಶೋನಲ್ಲಿ ಹತ್ತು ಲಕ್ಷ ಟಿಕೆಟ್‌ ಗಳು ಬುಕ್ ಆಗಿವೆ ಎನ್ನಲಾಗಿದೆ. ಇನ್ನೂ ಇಷ್ಟು ದೊಡ್ಡ ಮಟ್ಟಿನಲ್ಲಿ ಈ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಅಷ್ಟೇ ಅಲ್ಲ ಅಮೆರಿಕಾದಲ್ಲಿ ಹದಿನಾಲ್ಕು ಕೋಟಿ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ ಎನ್ನಲಾಗಿದೆ. ಇನ್ನು ನಾಳೆ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಎಲ್ಲಾ ಟಿಕೆಟ್‌ ಗಳು ಸೋಲ್ಡ್ ಔಟ್ ಆಗಿವೆ.

ಬಹುಭಾಷೆಯಲ್ಲಿ ಬಿಡುಗಡೆ…?

‘ಅವೆಂಜರ್ಸ್ ಎಂಡ್ ಗೇಮ್’ ಚಿತ್ರ ಇಂಗ್ಲಿಷ್, ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 22ಕ್ಕೆ ಚಿತ್ರ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಏಪ್ರಿಲ್ 26ಕ್ಕೆ ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಇನ್ನು, ಈ ಚಿತ್ರದಲ್ಲಿ, ರಾಬರ್ಟ್ ಡೌನಿ ಜೂನಿಯರ್, ಕ್ರಿಸ್ ಹೆಮ್ಸ್ವರ್ತ್, ಮಾರ್ಕ್ ರುಫಲೋ, ಕ್ರಿಸ್ ಇವಾನ್ಸ್, ಸ್ಕಾರ್ಲೆಟ್ ಜೋಹಾನ್ಸನ್, ಬೆನೆಡಿಕ್ಟ್ ಕಂಬರ್ಬ್ಯಾಚ್ ನಟಿಸಿದ್ದಾರೆ. ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ಇಷ್ಟು ಸದ್ದು ಮಾಡುತ್ತಿರುವ ಈ ಚಿತ್ರ ಬಿಡುಗಡೆ ನಂತರ ಹೇಗೆ ಕ್ರೇಜ್ ಹೆಚ್ಚಾಗುತ್ತೆ ಕಾದು ನೋಡಬೇಕು.

ಕಿರು ಚಿತ್ರವಾಗಿ ಹೊರಹೊಮ್ಮುತ್ತಿದೆ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ

#balkaninews #hollywood #englishmovies #avengers #avengersendgame #ticketsoldout

Tags