ಸುದ್ದಿಗಳು

‘ಏನಮ್ಮಿ ಏನಮ್ಮಿ’ ಹಾಡು ಈಗ ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್

25 ದಿನಗಳನ್ನು ಪೂರೈಸಿದ ಅಯೋಗ್ಯ!!

ಬೆಂಗಳೂರು,ಸೆ.10: ನೀನಾಸಂ ಸತೀಶ್ ಅಭಿನಯದ ‘ಅಯೋಗ್ಯ’ ಸಿನಿಮಾ ಎಲ್ಲಾ ಚಿತ್ರ ಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ನಿನ್ನೆ ತಾನೇ 25 ದಿನಗಳನ್ನು ಪೂರೈಸಿ ನರ್ತಕಿ ಥಿಯೇಟರ್​​​ನಲ್ಲಿ ಸಂಭ್ರಮಾಚರಣೆ ಏರ್ಪಡಿಸಿತ್ತು. ನೀನಾಸಂ ಸತೀಶ್, ರಚಿತಾ ರಾಮ್, ನಿರ್ದೇಶಕ ಸೇರಿ ಸಿನಿಮಾ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ನಂ.1 ಟ್ರೆಂಡಿಂಗ್

ಇನ್ನು ಸಿನಿಮಾ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಚಿತ್ರತಂಡ ಚಿತ್ರದ ‘ಏನಮ್ಮಿ ಏನಮ್ಮಿ’ ವಿಡಿಯೋ ಹಾಡು ಬಿಡುಗಡೆಯಾಗಿದೆ. ಚಿತ್ರದ ಹಾಡು ಎಲ್ಲರಿಗೂ ಇಷ್ಟವಾಗಿತ್ತು ಸಿನಿಮಾ ರಿಲೀಸ್​​ಗೂ ಮುನ್ನವೇ ಈ ಹಾಡು ಬಹಳ ಹಿಟ್ ಆಗಿತ್ತು. ಬಹಳಷ್ಟುಜನ ಡಬ್​​​ಸ್ಮ್ಯಾಶ್ ಕೂಡ ಮಾಡಿದ್ದರು​​​​​​​​​​. ಇದೀಗ ‘ಏನಮ್ಮಿ ಏನಮ್ಮಿ’ ಹಾಡು ನಿಮಗೆ ಯೂಟ್ಯೂಬ್​​​ನಲ್ಲಿ ಲಭ್ಯವಿದ್ದು ಇದು ಈಗ ನಂ.1 ಟ್ರೆಂಡಿಂಗ್ ನಲ್ಲಿದೆ.

Tags