ಸುದ್ದಿಗಳು

ತಮಿಳಿನಲ್ಲೂ ‘ಅಯೋಗ್ಯ’ ಚಮಕ್..!

ತಮಿಳು ರೀಮೇಕ್ ನಲ್ಲಿ ‘ಅಯೋಗ್ಯ’ ನಾಯಕ ಯಾರು..?

ಬೆಂಗಳೂರು,ಸೆ.10: ‘ಅಯೋಗ್ಯ’ ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯದ ಸಿನಿಮಾ. ಮಹೇಶ್ ಕುಮಾರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ‘ಅಯೋಗ್ಯ’ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಸಿನಿಮಾ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಚಿತ್ರತಂಡ ಚಿತ್ರದ ‘ಏನಮ್ಮಿ ಏನಮ್ಮಿ’ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ. ಸಿನಿಮಾ ರಿಲೀಸ್​​ಗೂ ಮುನ್ನವೇ ಈ ಹಾಡು ಬಹಳ ಹಿಟ್ ಆಗಿತ್ತು.

ನಾಯಕ ಯಾರು?

ಇದರ ಬೆನ್ನಲ್ಲೇ ಚಿತ್ರ ಕಾಲಿವುಡ್ ಗೆ ರೀಮೇಕ್ ಆಗುತ್ತಿರುವ ವಿಚಾರವನ್ನು ಸಿನಿಮಾತಂಡ ತಿಳಿಸಿದೆ. ಹೌದು ತಮಿಳಿನಲ್ಲಿ ರೀಮೇಕ್ ಆಗುತ್ತಿರುವ ‘ಅಯೋಗ್ಯ’ ಸಿನಿಮಾಗೆ ಕಾಲಿವುಡ್ ಸ್ಟಾರ್ ನಾಯಕ ವಿಜಯ ಸೇತುಪತಿ ನಾಯಕ. ಈಗಾಗಲೇ ಖಾಲಿವುಡ್ ನ ಸಂಸ್ಥೆ ಚಿತ್ರದ ರಿಮೇಕ್ ಹಕ್ಕನ್ನು ಖರೀದಿಮಾಡಿದೆ. ಮತ್ತೊಂದು ವಿಶೇಷ ಎಂದರೆ ‘ಅಯೋಗ್ಯ’ ಎನ್ನುವ ಟೈಟಲ್ ನಲ್ಲಿ ತಮಿಳಿನಲ್ಲಿ ಮತ್ತೊಂದು ಚಿತ್ರ ಸೆಟ್ಟೇರಿದೆ

Image result for vijay sethupathi

 

Tags