ಸುದ್ದಿಗಳು

‘ಅಯೋಗ್ಯ’ ಚಿತ್ರಕ್ಕೆ ಸಿಕ್ತು ಮತ್ತೊಂದು ಗರಿ

ಟಾಪ್ ಒನ್ ಪ್ರಶಸ್ತಿ ಪಡೆಯಿತು ‘ಏನಮ್ಮಿ ಏನಮ್ಮಿ’ ಹಾಡು

ಬೆಂಗಳೂರು.ಮೇ.14: ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿರುವ ‘ಅಯೋಗ್ಯ’ ಚಿತ್ರವು ಕಳೆದ ವರ್ಷ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುವುದರೊಂದಿಗೆ ಶತದಿನವನ್ನೂ ಸಹ ಪೂರೈಸಿತ್ತು.

ಇನ್ನು ಈ ಚಿತ್ರದ ಗೆಲುವಿಗೆ ಮೊದಲು ಮುನ್ನುಡಿಯಾಗಿದ್ದು ಚಿತ್ರದ ಕಥೆ ಮತ್ತು ಹಾಡುಗಳು. ಅದರಲ್ಲಿ ವಿಶೇಷವಾಗಿ ‘ಏನಮ್ಮಿ ಏನಮ್ಮಿ’ ಹಾಡಂತೂ ಸಖತ್ ಕ್ರೇಜ್ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಹವಾ ಮಾಡಿತ್ತು. ಇದೀಗ ಮತ್ತೊಮ್ಮೆ ಈ ಹಾಡು ಸಾಧನೆ ಮಾಡಿದೆ.

ಹೌದು, ‘ಏನಮ್ಮಿ..’ ಹಾಡು ಸಂಗೀತ ಕ್ಷೇತ್ರದ ಪ್ರಮುಖ ಆ್ಯಪ್ ಗಳಲ್ಲಿ ಒಂದಾಗಿರುವ ಗಾನ (gaana) ಆ್ಯಪ್ ನಲ್ಲಿ ನೂರು ಮಿಲಿಯನ್ ಜನರು ಈ ಹಾಡು ಕೇಳಿದ್ದಾರೆ. ಈ ಬಗ್ಗೆ ಚಿತ್ರತಂಡ ಸಂತಸ ಹಂಚಿಕೊಂಡಿದೆ.

‘ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ನನ್ನ ಮೊದಲ ನಿರ್ದೇಶನದ “ಅಯೋಗ್ಯ” ಚಿತ್ರದ “ಏನಮ್ಮಿ ಏನಮ್ಮಿ” ಪ್ರೇಮ ಗೀತೆ, “ಗಾನ” ಆ್ಯಪ್ ಒಂದರಲ್ಲೇ 10 ಕೋಟಿ ಜನ (100 MILLION) ಈ ಗೀತೆಯನ್ನು ಕೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಈ ಗೀತೆಗೆ ಅತ್ಯದ್ಭುತ ಸಂಗೀತ ನಿರ್ದೇಶನ ಮಾಡಿರುವ “ಅರ್ಜುನ್ ಜನ್ಯ” ಸರ್ ಅವರಿಗೂ ಹಾಗೂ ಅತ್ಯದ್ಭುತ ಸಾಹಿತ್ಯ ಬರೆದಿರುವ ನನ್ನ ಪ್ರೀತಿಯ ಗೆಳೆಯ “ಚೇತನ್ ಕುಮಾರ್” ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದು ನಿರ್ದೇಶಕ ಮಹೇಶ್ ಗೌಡ ತಿಳಿಸಿದ್ದಾರೆ.

ಅಂದ ಹಾಗೆ ಈ ಹಾಡನ್ನು ಬಹದ್ದೂರ್ ಚೇತನ್ ಕುಮಾರ್ ರಚಿಸದ್ದು ವಿಜಯ್ ಪ್ರಕಾಶ್ ಧ್ವನಿಯಾಗಿದ್ದರು. ‘ಗಾನ 2019 ರಲ್ಲಿ ನಮ್ಮ ಚಿತ್ರದ ಏನಮ್ಮಿ ಹಾಡು 100 ಮಿಲಿಯನ್ ಆಗುವ ಮೂಲಕ ಟಾಪ್ ಒನ್ ಪ್ರಶಸ್ತಿ ಪಡೆದಿದೆ. ಹಾಡು ಕೇಳಿ ಹರಸಿದ, ಪ್ರತಿಯೊಬ್ಬರಿಗೂ 100 ಮಿಲಿಯನ್ ನಮಸ್ಕಾರಗಳು…” ಎಂದು ಸತೀಶ್ ನೀನಾಸಂ ಖುಷಿ ಹಂಚಿಕೊಂಡಿದ್ದಾರೆ.

‘ಅದ್ದೂರಿ-2’ ಚಿತ್ರಕ್ಕೆ ಉಪೇಂದ್ರ ಅಣ್ಣನ ಮಗ ನಿರಂಜನ್ ಹೀರೋ..!!

#ayogya, #yenammi, #song, #award #filmnews, #kannadasuddigalu, #sathishninasam, #filmnews

Tags

Related Articles