ಸುದ್ದಿಗಳು

ಸಲ್ಮಾನ್ ಖಾನ್ ನನಗೆ ತಂದೆ ಸಮಾನ: ಆಯುಷ್ ಶರ್ಮಾ

ಹುಟ್ಟು ಹಬ್ಬ ಆಚರಿಸಿಕೊಂಡ ವೇಳೆ ಸಲ್ಮಾನ್ ಕುರಿತು ಭಾವುಕ ನುಡಿ

ಮುಂಬೈ, ಅ.29: `ಲವ್‍ ಯಾತ್ರಿ’ ಚಿತ್ರದ ಮೂಲಕ, ಸಿನಿಮಾರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ನಟ ಆಯುಷ್ ಶರ್ಮಾ. ಇದೀಗ ಅವರು  ಸಿನಿಮಾದ ಕುರಿತಂತೆ ಮಾತನಾಡಿದ್ದಾರೆ.

“ಬಾಲಿವುಡ್ ಬ್ಯಾಡ್‍ ಬಾಯ್ ಸಲ್ಮಾನ್ ಖಾನ್ ನನಗೆ ತಂದೆ ಸಮಾನ. ಸಿನಿಮಾಗಳ ಆಯ್ಕೆ ವಿಷಯದಲ್ಲಿ ಅವರ ಸಲಹೆಗಳನ್ನು ಪಡೆಯದಿದ್ದರೆ ನಾನೊಬ್ಬ ಮೂರ್ಖನಾಗುತ್ತೇನೆ. ಅವರು ನನಗೆ ದೇವರ ಕೊಟ್ಟ ದೊಡ್ಡ ಉಡುಗೊರೆ” ಅಂತಾ ತಿಳಿಸಿದ್ದಾರೆ.

ಹುಟ್ಟುಹಬ್ಬ ಆಚರಣೆ

ಇತ್ತಿಚೆಗಷ್ಟೇ ಮುಂಬೈನಲ್ಲಿ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡ ಆಯುಷ್, “ನನ್ನ ಸಂಪೂರ್ಣ ಭವಿಷ್ಯ ಸಲ್ಮಾನ್ ಖಾನ್ ಸಲಹೆಗಳ ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದ್ದಾರೆ.

‘ಲವ್ ಯಾತ್ರಿ’ ಸಿನಿಮಾ

ಸಲ್ಮಾನ್ ಖಾನ್ ತಮ್ಮ ಸಲ್ಮಾನ್ ಖಾನ್ ಫಿಲ್ಮಮ್ಸ್ ಪ್ರೊಡಕ್ಷನ್ ಅಡಿ `ಲವ್‍ ಯಾತ್ರಿ’ ಚಿತ್ರದ ಮೂಲಕ ಆಯುಷ್‍ ನನ್ನು ಪರಿಚಯಿಸಿದ್ದರು.  ಅ.5ರಂದು ಸಿನಿಮಾ ತೆರೆ ಕಂಡು ಯಶಸ್ವಿಯಾಗಿತ್ತು.

Tags