ಸುದ್ದಿಗಳು

ಗಂಟಲು ಹರಿಯುವಂತೆ ಕೂಗಿ ಡಬ್ಬಿಂಗ್ ಮಾಡಿದ ಅಯ್ಯಪ್ಪ ಶರ್ಮ

ನೆನಪ್ ಮಾಡ್ಕೋ, ನೆನಪ್ ಮಾಡ್ಕೋ, ನೆನಪ್ ಮಾಡ್ಕೋ

ಬೆಂಗಳೂರು, ಸ.14: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರವು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದೆ ಚಿತ್ರತಂಡ.

ಡಬ್ಬಿಂಗ್ ಮಾಡುತ್ತಿರುವ ಅಯ್ಯಪ್ಪ ಶರ್ಮ

‘ಉದ್ಘರ್ಷ’ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ಪಟ್ಟಿ ಸಾಕಷ್ಟಿದೆ. ಕಳೆದ ವಾರವಷ್ಟೇ ಈ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿತ್ತು. ಇದೀಗ, ಅಯ್ಯಪ್ಪ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ.

ನಟ ಅಯ್ಯಪ್ಪ ಗಂಟಲು ಕಿತ್ತೋಗುವ ಮಟ್ಟಿಗೆ ‘ನೆನಪ್ ಮಾಡ್ಕೋ, ನೆನಪ್ ಮಾಡ್ಕೋ, ನೆನಪ್ ಮಾಡ್ಕೋ’ ಅಂತ ಕಿರುಚಿ ಸಂಭಾಷಣೆ ಹೇಳುತ್ತಿದ್ದಾರೆ. ಇತ್ತ ನಿರ್ದೇಶಕ ದೇಸಾಯಿಯವರು ಈ ಡೈಲಾಗ್ ಜೊತೆಗೆ ತಾವೂ ಚೀರುತ್ತಾ ಅಯ್ಯಪ್ಪಗೆ ಡಬ್ಬಿಂಗ್ ಪಾಠ ಮಾಡುತ್ತಿದ್ದಾರೆ.

ಈ ವಿಡಿಯೋವೊಂದನ್ನು ನಿರ್ದೇಶಕ ದೇಸಾಯಿಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆದರೆ, ಮೂರು ಫೈಟಿಂಗ್ ಸೀಕ್ವೆನ್ಸ್ ಬಾಕಿ ಉಳಿದಿದೆ.

ತಾರಾಬಳಗ

ಈ ಚಿತ್ರದಲ್ಲಿ ಧನ್ಸಿಕಾ, ಮಿಸ್ಟರ್ ವರ್ಲ್ಡ್ ಆಗಿದ್ದ ಠಾಕೂರ್ ಅನೂಪ್ ಸಿಂಗ್, ತಾನ್ಯಾ ಹೋಪ್, ಶ್ರದ್ಧಾ ದಾಸ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ಅಭಿನಯಿಸಿದ್ದಾರೆ… ಡಿ ಕ್ರಿಯೇಷನ್ಸ್ ಅಡಿ ದೇವರಾಜ್. ಆರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.. ಏಕಕಾಲಕ್ಕೆ ಕನ್ನಡ ತೆಮಿಳು ತೆಲುಗು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Tags