ಸುದ್ದಿಗಳು

ಬಬ್ರೂ: ಥ್ರಿಲ್ಲಿಂಗ್ ಜರ್ನಿಯಲ್ಲಿ ತೆರೆದುಕೊಳ್ಳಲಿದೆ ರೋಚಕ ಕಥನ

ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡಿರುವ ಚಿತ್ರ ‘ಬಬ್ರೂ’. ಕನ್ನಡ ಪ್ರೇಕ್ಷಕರ ಪಾಲಿನ ಖಾಯಂ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಅಭಿನಯಿಸಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಈ ಚಿತ್ರ ಜರ್ನಿಯೊಂದರ ಮೂಲಕ ಕ್ರೈಂ, ಥ್ರಿಲ್ಲರ್ ಸಸ್ಪೆನ್ಸ್ ಕಥೆಯನ್ನು ತೆರೆದಿಡುವ ಪ್ರಯತ್ನವಿದೆ.

ಪೂರ್ತಿಯಾಗಿ ಅಮೆರಿಕಾದಲ್ಲಿಯೇ ಚಿತ್ರೀಕರಣ ನಡೆಸಿಕೊಂಡಿರುವುದು ಸೇರಿದಂತೆ ‘ಬಬ್ರೂ’ ಬಿಡುಗಡೆಗೂ ಮುನ್ನವೇ ನಾನಾ ದಾಖಲೆಗಳ ರೂವಾರಿಯಾಗಿದ್ದಾನೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಈ ಚಿತ್ರ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

ಇದು ವೃತ್ತಿಯಲ್ಲಿ ನಾನಾ ರೀತಿಯಲ್ಲಿ ಕಳೆದು ಹೋಗಿದ್ದರೂ ಸಿನಿಮಾ ವ್ಯಾಮೋಹವನ್ನು ಹತ್ತಿಕ್ಕಿಕೊಳ್ಳಲಾರದ ಉತ್ಸಾಹಿಗಳ ತಂಡವೊಂದು ಸೇರಿಕೊಂಡು ರೂಪಿಸಿರುವ ಚಿತ್ರ.  ಅಮೆರಿಕಾದಲ್ಲಿ ನೆಲೆಸಿದ್ದರೂ ಕನ್ನಡ ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದವರೇ ಸೇರಿಕೊಂಡು ಬಬ್ರೂವನ್ನು ರೂಪಿಸಿದ್ದಾರೆ. ಇಂಥಾ ಸಿನಿಮಾ ಪ್ರೀತಿಯಿಂದಲೇ ಈ ವರೆಗೂ ದೃಷ್ಯಕಾವ್ಯದಂಥಾ ಅದೆಷ್ಟೋ ಸಿನಿಮಾಗಳು ರೂಪುಗೊಂಡಿವೆ.

ಆ ಸಾಲಿಗೆ ‘ಬಬ್ರೂ’ ಕೂಡಾ ಖಂಡಿತಾ ಸೇರ್ಪಡೆಗೊಳ್ಳಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ. ಇಲ್ಲೊಂದು ರೋಚಕ ಜರ್ನಿ ಇದೆ. ಅದನ್ನು ಪ್ರೇಮ ತಬ್ಬಿಕೊಂಡು, ಅಡಿಗಡಿಗೆ ಎದುರಾಗುವ ಅನಿರೀಕ್ಷಿತ ಘಟನಾವಳಿಗಳು, ರೋಚಕ ತಿರುವುಗಳ ಮೂಲಕ ಸಾಗುವ ಸಮ್ಮೇಹಕವಾದ ಕಥೆ ಇದರಲ್ಲಿದೆಯಂತೆ.

ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇಷ್ಟವಾಗುವಂತೆ ರೂಪುಗೊಂಡಿರುವ ಈ ಚಿತ್ರದಲ್ಲಿ ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್‍ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ‘ಬಬ್ರೂ’ ನಿರ್ಮಾಣಗೊಂಡಿದೆ.

ಇಲ್ಲಿ ಸುಮನ್ ನಗರ್‍ ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ, ವರುಣ್ ಶಾಸ್ತ್ರಿ ಸಂಭಾಷಣೆ ಇರುವ  ಈ ಚಿತ್ರ ಇದೇ ಡಿಸೆಂಬರ್ ಆರರಂದು ತೆರೆಕಾಣಲು ರೆಡಿಯಾಗಿದೆ.

ನಟ ವಿನೋದ್ ರಾಜ್ ಏಕೆ ಮದುವೆಯಾಗಲಿಲ್ಲ…?

#Babru #BabruMovie #SumanNagarkar #KannadaSuddigalu

Tags