ಸುದ್ದಿಗಳು

ಬೇಬಿ ಬಂಪ್ ಫೋಟೋ ಟ್ರೋಲ್ ಆದ ನಟಿ!! ನೆಟ್ಟಿಗರಿಗೆ ಖಡಕ್ ಉತ್ತರ!!

ಹೈದರಾಬಾದ್,ಮಾ.14: ಇತ್ತೀಚೆಗೆ,ನಟ-ನಟಿಯರ ಪೋಸ್ಟ್ ಗೆ ನೆಟ್ಟಿಗರು ಹೆಚ್ಚೆಚ್ಚು ಟ್ರಳೋಲ್ ಮಾಡುತ್ತಿದ್ದಾರೆ.. ಈಗ ನಟಿ ಸಮೀರಾ ರೆಡ್ಡಿಯ ಫೋಟೋಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಬೇಬಿ ಬಂಪ್ ಫೋಟೋ

ಮೆಗಾ ಸ್ಟಾರ್​ ಚಿರಂಜೀವಿ ಹಾಗೂ ಜ್ಯೂನಿಯರ್ ಎನ್​ಟಿಆರ್​ ಜತೆ ತೆರೆಹಂಚಿಕೊಂಡಿರುವ ಸಮೀರಾ, 2014ರಲ್ಲಿ ಅಕ್ಷಯ್​ ವರ್ದೆ ಜತೆ ವಿವಾಹವಾದರು. ಈಗಾಗಲೇ ಒಂದು ಮಗುವಿನ ತಾಯಿಯಾಗಿರುವ ಸಮಿರಾ, ಇದೀಗ ಎರಡನೇ ಮಗುವಿಗೆ ಜನ್ಮ ನೀಡುವ ಖುಷಿಯಲ್ಲಿದ್ದಾರೆ. ಈ ಸಂತಸವನ್ನು ಎಲ್ಲರೊಡನೆ ಹಂಚಿಕೊಳ್ಳಲು ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು…

ಸಮೀರಾ ಗರಂ

ಈ ಚಿತ್ರಕ್ಕೆ ಸಾಕಷ್ಟು ಜನ ಉತ್ತಮ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ, ಕೆಲವೊಂದಿಷ್ಟು ಮಂದಿ ಮಾತ್ರ ಪ್ರಗ್ನೆನ್ಸಿಯಿಂದ ನಿಮ್ಮ ದೇಹಸೌಂದರ್ಯ ಹಾಳಾಗಿದೆ ಎಂದಿದ್ದಾರೆ.ಇದಕ್ಕೆ ಸಮೀರಾ ಗರಂ ಆಗಿ ನೆಟ್ಟಿಗರಿಗೆ ಖಾರವಾಗಿಯೇ ಉತ್ತರಿಸಿದ್ದಾರೆ.. ಒಂದು ಮಗುವಿನ ತಾಯಿಯಾದ ಮೇಲೂ ನಟಿ ಕರೀನಾ ಕಪೂರ್ ಸುಂದರವಾಗಿದ್ದಾರೆ. ಆದರೆ, ಎಲ್ಲರೂ ಅವರನ್ನು ಇಷ್ಟಪಡುವುದಿಲ್ಲ. ಅದೇ ರೀತಿ ಮಗು ಪಡೆದ ನಂತರ ಮೊದಲಿನ ಹಾಗೆ ಆಗಲು ಕೊಂಚ ಸಮಯ ಬೇಕಾಗುತ್ತೆ.. ಮೊದಲ ಮಗುವಿನ ನಂತರ ಹೀಗೆ ಆಗಿತ್ತು. ಇದೀಗ ಎರಡನೇ ಮಗು ಪಡೆದ ನಂತರ ಅದೇ ರೀತಿ ಆಗುತ್ತೆ ಅಂತಾ ನನ್ನ ನಂಬಿಕೆ ಎಂದು ಕೂಲ್ ಆಗಿ ಉತ್ತರಿಸಿದ್ದಾರೆ

ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

 

Tags

Related Articles