ಸುದ್ದಿಗಳು

‘ದೂರ ದೂರ ನೀನಿದ್ದರೂ ಸನಿಹ.. ‘ ಎಂದು ಹಾಡಿದ ವಿಜಯ್ ಪ್ರಕಾಶ್ ..!!!

ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಕುಮಾರ್ ನಿರ್ಮಾಣದ ‘ಬಡ್ಡಿಮಗನ್ ಲೈಫು’ ಚಿತ್ರವು ದಿನದಿಂದ ದಿನಕ್ಕೆ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಸದ್ಯದಲ್ಲಿಯೇ ಈ ಸಿನಿಮಾ ತೆರೆಗೆ ಬರಲಿದ್ದು, ವಿಜಯ್ ಪ್ರಕಾಶ್ ಹಾಡಿರುವ ಹಾಡು ಸಖತ್ ಮೋಡಿ ಮಾಡುತ್ತಿದೆ.

ವಿಜಯ್ ಪ್ರಕಾಶ್ ಹಾಡಿರುವ ಈ ಹಾಡನ್ನು ಕಿರಣ್ ಕಾವೇರಪ್ಪ ರಚಿಸಿದ್ದು, ಆಶಿಕ್ ಅರುಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನಿಕಾಂತ್, ಮೈಮ್ ರಮೇಶ್ ಸೇರಿದಂತೆ ಮುಂತಾದವರ ತಾರಾಬಳಗವಿದೆ.

ಐಪಿಎಲ್ ಬೆಟ್ಟಿಂಗ್ ಗಾಗಿ ಬಡ್ಡಿ ಸೀನಪ್ಪ ಎಂಬುವರ ಬಳಿ ಸಾಲ ಮಾಡಿಕೊಂಡ ಭಾವಮೈದುನನ್ನು ಉಳಿಸಲು ಜಾಮೀನು ಕೊಟ್ಟು ಸಂಕಟಕ್ಕೆ ಸಿಲುಕುವ ಭಾವನ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಚಿತ್ರಕಥೆಯಾಗಿದ್ದು, ಅದನ್ನು ಸಂಪೂರ್ಣ ಹಾಸ್ಯ ರೀತಿಯಲ್ಲಿ ಕಟ್ಟಿಕೊಡಲಾಗಿದೆ.

ವರಮಹಾಲಕ್ಷ್ಮಮಿ ಹಬ್ಬಕ್ಕೆ ತುಪ್ಪದ ಬೆಡಗಿ ವಿಶ್!!

#baddimaganalifu #baddimaganalifusong #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags