ಸುದ್ದಿಗಳು

ಕನ್ನಡಕ್ಕೂ ರೀಮೇಕ್ ಆಗಲಿದೆ ‘ಬಧಾಯಿ ಹೋ’

ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ

ಬೆಂಗಳೂರು.ಮಾ.20: ಕಳೆದ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯಾಗಿದ್ದ ‘ಬಧಾಯಿ ಹೋ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ರೂ 140 ಕೋಟಿ ಗಳಿಸಿ ದಾಖಲೆ ಮಾಡಿತ್ತು. ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ಸನ್ಯಾ ಮಲ್ಹೋತ್ರಾ, ನೀನಾ ಗುಪ್ತಾ, ಗಿರಿರಾಜ್ ರಾವ್ ಸೇರಿದಂತೆ ಅನೇಕರು ನಟಿಸಿದ್ದರು.

ಈಗ ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು, ಚಿತ್ರದ ರಿಮೇಕ್ ಹಕ್ಕುಗಳನ್ನು ಬೋನಿ ಕಪೂರ್ ಪಡೆದುಕೊಂಡಿದ್ದಾರೆ. ಈ ಚಿತ್ರವು ಬಿಡುಗಡೆಯಾದಾಗ ‘ಥಗ್ಸ್ ಆಫ್ ಹಿಂದೂಸ್ಥಾನ್’ ಮತ್ತು ‘ನಮಸ್ತೆ ಇಂಗ್ಲೆಂಡ್’ ಚಿತ್ರಗಳ ರೇಸ್ ನಲ್ಲಿದ್ದವು. ಆ ಚಿತ್ರಗಳನ್ನು ಈ ಸಿನಿಮಾ ಮೀರಿಸಿ ಯಶಸ್ಸು ಕಂಡಿತ್ತು.

Image result for hindi badhaai ho movie

‘ದಕ್ಷಿಣದ ಎಲ್ಲಾ ಭಾಷೆಗಳ ಬಧಾಯಿ ಹೋ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದೇನೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ. ಹಿಂದಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು ಗೊತ್ತೇ ಇದೆ. ದಕ್ಷಿಣದಲ್ಲೂ ಈ ಸಿನಿಮಾ ಮೋಡಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ. ಯಾವ ಭಾಷೆಯ ಮೂಲಕ ಮೊದಲು ಆರಂಭಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ ಬೋನಿ ಕಪೂರ್.

Image result for hindi badhaai ho movie

ಅಂದ ಹಾಗೆ ಈ ಚಿತ್ರವನ್ನು ಜಂಗ್ಲಿ ಪಿಕ್ಚರ್ಸ್ ಬರೀ 20 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ಕನ್ನಡ ಸೇರಿದಂತೆ ತಮಿಳು, ತೆಲುಗು ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಇನ್ನು ಕನ್ನಡದಲ್ಲಿ ಯಾರು ಪ್ರಧಾನ ಪಾತ್ರದಲ್ಲಿ ನಿರ್ವಹಿಸಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಇನ್ನು ನಿರ್ಮಾಪಕ ಬೋನಿ ಕಪೂರ್ ಈ ಚಿತ್ರದ ಬಳಿಕ ಅಮಿತಾಬ್ ಬಚ್ಚನ್ ಹಾಗೂ ತಾಪ್ಸಿ ಪೊನ್ನು ನಟನೆಯ ‘ಪಿಂಕ್’ ಚಿತ್ರವು ತಮಿಳಿನಲ್ಲಿ ನೆರಕೊಂಡ ಪರವೈ’ ಎಂಬ ಹೆಸರಿನಲ್ಲಿ ರಿಮೇಕ್ ಆಗುತ್ತಿದ್ದು, ಕನ್ನಡದ ಶೃದ್ದಾ ಶ್ರೀನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಪಂಚತಂತ್ರ’ ಟ್ರೈಲರ್ ಬಿಡುಗಡೆ: ಚಿತ್ರದಲ್ಲಿದೆ ಕಾರ್ ರೇಸ್ ನೊಂದಿಗೆ ನವಿರಾದ ಪ್ರೇಮಕಥೆ

#badhayiho, #remekeinkannada, #balkaninews #bollywoodmovies, #kannadasuddigalu #pink, #shruddasrinath, #bonikapoor

Tags