ಸುದ್ದಿಗಳು

ಬಾದಶಾ ಹಾಡಿಗೆ ಹುಚ್ಚೆದ್ದು ಕುಣಿದ ಯುವ ಸಮೂಹ..!

ದಸರಾ ಹಬ್ಬ ಸಡಗರ

ಮೈಸೂರು,ಅ.14: ಸಾಂಸ್ಕೃತಿಕ ನಗರಿ ದಸರಾ ಹಬ್ಬ ಸಡಗರ, ಸಂಭ್ರಮದಲ್ಲಿ ಮುಳುಗಿ ಜನರು ಆನಂದದಲ್ಲಿ ತೇಲುವಂತೆ ಮಾಡುತ್ತಿದೆ. ಯುವ ದಸರಾ ಪಯುಕ್ತ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕರಾದ ಬಾದಶಾ, ಆಸ್ತಗಿಲ್ ತಂಡದ ಹಾಡುಗಳು ಯುವ ಸಮೂಹ ಸಂಭ್ರಮದಲ್ಲಿ ಮುಳುಗೇಳುವಂತೆ ಮಾಡಿದೆ.

ಹಿಂದಿ ಗಾಯಕ ಬಾದಶಾ ತಂಡ

ಹಿಂದಿ ಗಾಯಕ ಬಾದಶಾ ತಂಡ ಸಂಗೀತಕ್ಕೆ ಸಭೀಕರು ಹುಚ್ಚೆದ್ದು ಕುಣಿದರು. ಲಗೋರಿ ತಂಡದ ಬಹ್ಮ ನಿಂಗೆ ಜೋಡಿಸ್ತಿನಿ ಹೆಂಡ ಮುಟ್ಟಿದ್ ಕೈನಾ.., ದುನಿಯಾರೆ ದುನಿಯ.., ಕುಲದಲ್ಲಿ ಕೀಳಾವುದೋ ಹುಚ್ಚಪ್ಪ.., ತರವಲ್ಲ ತಂಗಿ ನಿನ್ನ ತಂಬೂರಿ ಪದ.., ಎಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂಚೂರು..’ ಹಾಡುಗಳಿಗೆ ಜನರು ಸಖತ್ ಆಗಿ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದರು.

ನಾಗಮಂಗಲದ ಬಿಜಿಎಸ್ ಕಾಲೇಜು ತಂಡ

ನಾಗಮಂಗಲದ ಬಿಜಿಎಸ್ ಕಾಲೇಜು ತಂಡ ಬುದ್ಧ ಶರಣಂ ಗಚ್ಚಾಮಿ.., ಜೋಗಯ್ಯ ನೃತ್ಯ ಅಕಾಡೆಮಿಯು ಅಕ್ಕಯ್ಯ ನೋಡುಬಾರೆ ಚೆಲುವನಾ’ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಮನ ತಣ ಸಿದವು. ಅಂಬಾರಿ ಡ್ಯಾನ್ಸ್ ಅಕಾಡೆಮಿ ‘ರಾವಣ’ ಕುರಿತು ನರ್ತಿಸಿದರೆ, ಡಿವೈನ್ ಡ್ಯಾನ್ಸ್ ಅಕಾಡೆಮಿ ಐಗಿರಿ.. ನಂದಿನಿ’ ಸಂಗೀತದ ಮೂಲಕ ನವಶಕ್ತಿ ವೈಭವ ಪ್ರದರ್ಶಿಸಿತು.

Tags