ಸುದ್ದಿಗಳು

ಕಿರುತೆರೆಯಲ್ಲಿ ಭಾವನಾ

ಬೆಂಗಳೂರು,ಮೇ.15: ಪದ್ಮಾವತಿ ಧಾರಾವಾಹಿಯಲ್ಲಿ ನಟಿ ಭಾವನ ದೇವತೆ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಭಾವನಾ ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಮನೆ ಮಾತಾಗಿದ್ದಾರೆ. ಅಷ್ಟೆ ಅಲ್ಲ ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿದ ಭಾವನ ಸದ್ಯ ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ. ಅಷ್ಟೇ ಅಲ್ಲ ಈ ನಟಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೀಗ ಈ ನಟಿ ಸೀರಿಯಲ್ ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೇವತೆ ರೂಪದಲ್ಲಿ ದರ್ಶನ ನೀಡಿದ ನಟಿ

ಕಲರ್ಸ್ ಕನ್ನಡದಲ್ಲಿ ಪದ್ಮಾವತಿ ಎಂಬ ಧಾರಾವಾಹಿ ಪ್ರತಿ ರಾತ್ರಿ ೯:೩೦ಕ್ಕೆ ಪ್ರಸಾರವಾಗುತ್ತಿದೆ.. ಈಗ ಧಾರಾವಾಹಿಯು ಮುಕ್ತಾಯ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಈ ಧಾರಾವಾಹಿಯ ಮುಖ್ಯ ಹಂತದಲ್ಲಿ ಭಾವನ ದೇವತೆ ಪದ್ಮಾವತಿ ರೂಪದಲ್ಲಿ ದರ್ಶನ ನೀಡಿದ್ದಾರೆ. ಮುತ್ಯಾಲನನ್ನು ಕೊಂದು ಜಗದುದ್ದಾರ ಮಾಡುವ ವೇಳೆ ಇದಾಗಿದೆ. ಈ ವೇಳೆ ದೇವರ ದರ್ಶನ ಆಗಬೇಕು ಆಗ ದೇವರ ರೂಪ ತಾಳಿರುವ ನಟಿ ಭಾವನ ಅಭಿಮಾಣಿಗಳಿಗೂ ದರ್ಶನ ನೀಡಿದ್ದಾರೆ.

Image result for bhavana actress kannada

ಮತ್ತೆ ಅಭಿಮಾನಿಗಳಿಗೆ ಭಾವನ ದರ್ಶನ

ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ೩ ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿದ್ದ ಧಾರಾವಾಹಿ. ಈ ಧಾರಾವಾಹಿ ಮೇ ೨೪ ರಂದು ಮುಕ್ತಾಯಗೊಳ್ಳಲಿದೆಯಂತೆ ಎಂಬ ಮಾಹಿತಿ ಹೊರ ಬಿದ್ದಿದೆ. ಧಾರವಾಹಿಯ ಪಾತ್ರಧಾರಿಗಳಲ್ಲಿ ಸಾಮ್ರಾಟ್ ಮತ್ತು ತುಳಸಿ, ಸುಪ್ರಭಾ, ವಿಕ್ರಮ್, ಅಜ್ಜಿ, ಸಾಧನಾ ಹೀಗೆ ಅನೇಕ ಪಾತ್ರಧಾರಿಗಳು ರಂಜಿಸುತ್ತಿದ್ದಾರೆ. ಸದ್ಯ ಕಿರುತೆರೆ ಮೂಲಕ ಭಾವನ ಮತ್ತೆ ಕಾಣಿಸಿದ್ದಾರೆ

https://www.voot.com/shows/padmavathi/1/475700/thulasi-invokes-goddess-padmavathi/796393

ಗಾಂಧಿನಗರದಲ್ಲಿ ದಿವಾಕರ್ ‘ರೇಸ್’ ಪ್ರಾರಂಭ!!

#bhavana #padmavathi #colorskannada

Tags