ಸುದ್ದಿಗಳು

ಮತ್ತೆ ಮೋಡಿ ಮಾಡಲಿದೆ ಶಿವಣ‍್ಣ-ರಮೇಶ್ ಜೋಡಿ

'’ಭೈರತಿ ರಣಗಲ್’’ ನಲ್ಲಿ ಒಂದಾದ ಸ್ಟಾರ್ ಗಳು

ಬೆಂಗಳೂರು.ಜ.11: ‘ಮಫ್ತಿ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ನರ್ತನ್ ಶಿವಣ‍್ಣನಿಗಾಗಿ ‘ಭೈರತಿ ರಣಗಲ್’ ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀ- ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಈಗ ಚಿತ್ರದಲ್ಲಿ ರಮೇಶ್ ಅವರಿಂದ್ ಒಂದು ಸ್ಪೇಷಲ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಶಿವಣ್ಣ-ರಮೇಶ್ ಜೋಡಿ

ಈಗಾಗಲೇ ಶಿವರಾಜ್ ಕುಮಾರ್ ಹಾಗೂ ರಮೇಶ್ ಜೋಡಿಯಲ್ಲಿ ‘ನಮ್ಮೂರ ಮಂದಾರ ಹೂವೇ’, ‘ಪ್ರೇಮರಾಗ ಹಾಡು ಗೆಳತಿ’, ‘ಭೂಮಿ ತಾಯಿಯ ಚೊಚ್ಚಲ ಮಗ’, ‘ಚೆಲುವೆಯೇ ನಿನ್ನೆ ನೋಡಲು’ ಸೇರಿದಂತೆ ಕೆಲವು ಸಿನಿಮಾಗಳು ಬಂದಿದ್ದವು. ಈಗ ‘ಮಫ್ತಿ’ಯ ಸಿಕ್ವೇಲ್ ನಲ್ಲಿ ರಮೇಶ್ ರಿಗೊಂದು ವಿಶೇಷವಾದ ಪಾತ್ರವಿದೆ.

ಚಿತ್ರದ ಬಗ್ಗೆ

‘ಮಫ್ತಿ’ ಚಿತ್ರದಲ್ಲಿ ಶ್ರೀ ಮುರುಳಿ ಚಿತ್ರದುದ್ದಕ್ಕೂ ನಾಯಕರಾಗಿದ್ದರೂ ಸಹ ಅವರ ಪಾತ್ರ ಭೈರತಿ ರಣಗಲ್ ಸುತ್ತಲೇ ಸುತ್ತುತ್ತಿತ್ತು. ಅದರಂತೆ ಈಗ ಶುರುವಾಗುವ ಚಿತ್ರದಲ್ಲೂ ಸಹ ರಮೇಶ್ ಅವರು ‘ಭೈರತಿ ರಣಗಲ್’ ಜೊತೆಗೆ ಸಾಗುವ ಪಾತ್ರ ಎನ್ನುವುದು ಮತ್ತೊಂದು ವಿಶೇಷ.

ಚಿತ್ರಕ್ಕಿರಲಿದ್ದಾರೆ ನಾಯಕಿ

‘ಮಫ್ತಿ’ ಯಲ್ಲಿ ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ನಟಿಸಿದ್ದರು. ಆದರೆ ಚಿತ್ರದಲ್ಲಿ ನಾಯಕಿಯಿರಲಿಲ್ಲ. ಆದರೆ ‘ಭೈರತಿ ರಣಗಲ್’ ನಲ್ಲಿ ನಾಯಕಿ ಪಾತ್ರ ಇರಲಿದೆ. ಆ ಪಾತ್ರಕ್ಕೆ ಒಂದಷ್ಟು ನಟಿಯರ ಹೆಸರು ಕೇಳಿ ಬರುತ್ತಿದ್ದು, ಬಹುಭಾಷಾ ನಟಿ ಕಮಲಿನಿ ಮುಖರ್ಜಿ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ ಈ ಚಿತ್ರವನ್ನು ಸ್ವತಃ ಶಿವಣ‍್ಣನೇ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿದ್ದು, ಇದು ಇವರ ನಟನೆಯ 125 ನೇ ಸಿನಿಮಾವೆಂಬುದು ಮತ್ತೊಂದು ವಿಶೇಷ.

 

#bairathi #balkaninews #shivarajkumar, #filmnews, #kannadasuddigalu, #ramesharaviinda

 

Tags