ಸುದ್ದಿಗಳು

ಚಿರನಿದ್ರೆಗೆ ಜಾರಿದ ಕಾಲಿವುಡ್ ದಿಗ್ಗಜ!

ತಮಿಳಿನ ಖ್ಯಾತ ವಿಮರ್ಶಕ,ಬರಹಗಾರ ಬಾಲಕುಮಾರನ್(71), ಅವರು ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಇಬ್ಬರು ಪತ್ನಿಯರಾದ ಕಮಲಾ ಹಾಗು ಶಾಂತಾ ಸೇರಿದಂತೆ ಮಕ್ಕಳಾದ ಗೌರಿ ಹಾಗು ಸೂರ್ಯಾ ಅವರನ್ನು ಅಗಲಿದ್ದಾರೆ ಎನ್ನಲಾಗಿದೆ.

ತಮ್ಮ ವೃತ್ತಿ ಬದುಕಿನಲ್ಲಿ ಬರವಣಿಗೆಯನ್ನೇ ಜೀವನವಾಗಿಸಿಕೊಂಡಿದ್ದ ಬಾಲಕುಮಾರನ್ ತಮ್ಮ ಯೋಚನೆಗಳನ್ನು ಅಕ್ಷರವಾಗಿಸಿ ಇಡೀ ತಮಿಳು ಲೋಕವನ್ನು ನೈತಿಕತೆಯಿಂದ ಸಾಕಷ್ಟು ಸುಧಾರಣೆಗೆ ತಂದಿದ್ದಾರೆ ಎನ್ನಲಾಗಿದೆ. ಇವರ ಸೂಕ್ಷ್ಮ ಬರವಣಿಗೆಯಿಂದ ತಮಿಳಿನ ಖ್ಯಾತ ನಿರ್ದೇಶಕ ಭಾರತೀರಾಜನ್ ಅವರ ‘ಇದು ನಮ್ಮ ಆಳು’ ಸೇರಿದಂತೆ ನಾಯಗನ್,ಗುಣ,ಜೆಂಟಲ್ ಮ್ಯಾನ್,ಜೀನ್ಸ್,ಮನ್ಮದನ್, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಇವರ ಮೂಖ ಭಾವನೆಗಳನ್ನು ಬಳಸಿಕೊಳ್ಳುವುದರ ಮೂಲಕ ಸಿನಿಮಾಗಳಿಗೆ ಒಂದು ರೀತಿಯ ಶೋಭೆಯನ್ನು ತರಲಾಗಿದೆ ಎನ್ನಲಾಗಿದೆ.

ಇವರ ಅಗಲಿಕೆಯಿಂದ ತಮಿಳಿನ ಅಕ್ಷರಲೋಕ ಸೇರಿದಂತೆ ಇಡೀ ಚಿತ್ರರಂಗ ಮೌನಕ್ಕೆ ಶರಣಾಗುವುದರ ಮೂಲಕ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಗಿದೆ.

Tags

Related Articles

Leave a Reply

Your email address will not be published. Required fields are marked *