ಸುದ್ದಿಗಳು

ಬಾಲ್ಕನಿ ಹೀರೋ.. ಕಾರ್ಯಕ್ರಮಕ್ಕೆ ಶುಭಾಶಯ ಕೋರುತ್ತಾ, ಕನ್ನಡದ ಹಾಡು ಹಾಡಿದ ಪಾಕಿಸ್ತಾನಿ ಯುವಕ

ಈ ಹಿಂದೆ ‘ರಾಜಕುಮಾರ’ ಚಿತ್ರದ ಹಾಡನ್ನು ಹಾಡಿ ಗಮನ ಸೆಳೆದಿದ್ದ ಯುವಕ

ಬೆಂಗಳೂರು.ಜ.12: ಕನ್ನಡ ಭಾಷೆ ಮನಸ್ಸಿನಿಂದ ಬರಬೇಕೇ ಹೊರತೂ ಹೋರಾಟ ಮಾಡುವುದರಿಂದ ಬರುವುದಿಲ್ಲ. ನಾವು ನಮ್ಮ ಭಾಷೆಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅದು ಅನ್ಯರನ್ನು ತಮ್ಮತ್ತ ಸೆಳೆಯಲು ಕಾರಣವಾಗುತ್ತದೆ. ಇದಕ್ಕೆ ಈ ಯುವಕನೇ ಶಾಕ್ಷಿಯಾಗಿದ್ದಾರೆ.

ಪಾಕಿಸ್ತಾನಿ ಯುವಕ

ಕೆಲವು ತಿಂಗಳುಗಳ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಹಾಡನ್ನು ಹಾಡುವ ಮೂಲಕ ಪಾಕಿಸ್ತಾನದಲ್ಲೂ ಕನ್ನಡಕ್ಕೆ ಅಭಿಮಾನಿಗಳು ಇದ್ದಾರೆ ಎಂದು ತೋರಿಸಿಕೊಟ್ಟಿವರು ಅಜ್ಮಲ್ ಮೂಘಲ್. ಇವರೀಗ ಕನ್ನಡದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಹಾಗೂ ‘ಗೀತಾ’ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಮ ಮೆರೆದಿದ್ದಾರೆ.

‘ಬಾಲ್ಕನಿ ಹೀರೋ’ಗೆ ಶುಭವಾಗಲಿ

ಎಲೆಮರೆಯ ಕಾಯಿಯಂತೆ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಸಾಧಕರಿಗೆ ಹಾಗೂ ಎಲ್ಲಿಯೂ ಪ್ರಚಾರಕ್ಕೆ ಬಾರದೇ ದೇಶದ ಕೀರ್ತಿ ಪತಾಕೆಯನ್ನು ಜಗದಗಲ ಹರಡಿದ ಸಾಧಕರನ್ನು ತೆರೆಯ ಮೇಲೆ ಪರಿಚಯಿಸುವ ಕಾರ್ಯಕ್ರಮವೇ ‘ಬಾಲ್ಕನಿ ಹೀರೋ’. ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರೂಪಣೆಯನ್ನು ಡಾ.ಕಿರಣ್ ಹೆಬ್ಬಾಲೆಯವರು ವಹಿಸಿಕೊಂಡಿದ್ದು, ತೆರೆ ಮರೆಯ ಸಾಧಕರ ಯಶೋಗಾಥೆಯನ್ನು ಪ್ರಸ್ತುತ ಪಡಿಸಿಕೊಡುತ್ತಿದ್ದಾರೆ.

ನಾನೊಬ್ಬ ಪಾಕಿಸ್ತಾನಿ: ಅಜ್ಮಲ್

ಈ ಬಾಲ್ಕನಿ ಹೀರೋ ಕಾರ್ಯಕ್ರಮಕ್ಕೆ ಪಾಕಿಸ್ತಾನಿಯ ಯುವಕ ಅಜ್ಮಲ್ ಮೂಘಲ್ ಶುಭ ಹಾರೈಸಿದ್ದಾರೆ, “ನಾನು ಅಜ್ಮಲ್ ಮೂಘಲ್, ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ. ನನ್ನ ಗೆಳೆಯ ಕಿರಣ್ ಅವರು ‘ಬಾಲ್ಕನಿ ಹೀರೋ’ ಎಂಬ ಹೊಸ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ” ಎಂದು ಹಾರೈಸುತ್ತಾ, ಕನ್ನಡದ ಹಾಡುಗಳಾದ ‘ನನ್ನ ಮೇಲೆ ನನ್ನ ಮೇಲೇ’ ಹಾಗೂ ‘ಜೊತೆಯಲಿ ಜೊತೆ ಜೊತೆಯಲಿ’ ಹಾಡುಗಳನ್ನು ಹಾಡಿದ್ದಾರೆ.

ಅಜ್ಮಲ್ ಮೂಘಲ್ ಮೂಲತಃ ಪಾಕಿಸ್ತಾನದ ಲಾಹೋರ್ ನವರು. ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೊಂದಿರುವ ಇವರು ನಮ್ಮ ಭಾಷೆಯ ಹಾಡುಗಳನ್ನು ಹಾಡಿದ್ದಾರೆ.

ಕೊನೆಯಲ್ಲಿ ಒಂದು ಮಾತು, ನಮ್ಮ ಶತ್ರು ದೇಶವೆಂದೇ ಬಿಂಬಿತವಾಗಿರುವ ಪಾಕ್ ಅಭಿಮಾನಿ ನಮ್ಮ ಕನ್ನಡದ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ ಅಂದರೆ ನಿಜಕ್ಕೂ ಖುಷಿಯ ವಿಚಾರವೇ ಸರಿ ಅಲ್ಲವೇ..??

#balkanihero #balkaninews #kannadasuddigalu, #ajmalmoghal

Tags