ಸುದ್ದಿಗಳು

ಬಾಲ್ಕನಿ ವಾರ ಭವಿಷ್ಯ-3

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…!

 

                                                                  ಬಾಲ್ಕನಿ ವಾರ ಭವಿಷ್ಯ-3

                                  26-08-2018ರ ಭಾನುವಾರ ದಿಂದ 01-09-2018 ಶನಿವಾರದ ತನಕ

ಮೇಷಪೂರ್ವಾರ್ಧದಲ್ಲಿ ಧನಲಾಭ, ಆಚಾರ-ವಿಚಾರಗಳನ್ನು ಪಾಲಿಸುವುದು, ಉತ್ತಮವಾದ ಆಹಾರ ಸೇವನೆ. ವಾರದ ಮಧ್ಯದಲ್ಲಿ ಸ್ಥಾನ ಭ್ರಷ್ಟತ್ವ, ಬಂಧುಗಳಿಗೆ ಅನಾರೋಗ್ಯ, ಧನವ್ಯಯವು. ಉತ್ತರಾರ್ಧದಲ್ಲಿ ಶರೀರ ಸೌಖ್ಯ, ಆರೋಗ್ಯ, ಧನಾಭಿವೃದ್ಧಿ, ಸ್ತ್ರೀ ಸೌಖ್ಯ, ಗೌರವ ಹಾಗು ಸನ್ಮಾನ. ಅತಿಯಾಗಿ ಯಾರನ್ನೂ ನಂಬುವುದು ಒಳ್ಳೆಯದಲ್ಲ.
ವೃಷಭಪೂರ್ವಾರ್ಧದಲ್ಲಿ ಆಲೋಚಿಸಿದ ಕಾರ್ಯಸಿದ್ಧಿ, ಆರೋಗ್ಯವಂತ ದೇಹ. ಬಂಧು-ಇಷ್ಟರ ಜೊತೆಗೆ ಸಂತೋಷದಿಂದ ಇರುವುದು. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವುದು. ವಾರದ ಮಧ್ಯದಲ್ಲಿ ಮನಸ್ಸಿಗೆ ನೆಮ್ಮದಿ ಸುಖ, ಧನ-ಧಾನ್ಯ ಲಾಭವಾಗುವುದು. ಉತ್ತರಾರ್ಧದಲ್ಲಿ ಮನಸ್ಸಿಗೆ ವ್ಯಾಕುಲತೆ, ಮಾನ ಹಾನಿ,  ಬಂಧು-ಇಷ್ಟರ ಜೊತೆಗೆ ವೈರತ್ವ, ಧನ ಕ್ಷಯ, ಶರೀರಾಲಾಸ್ಯವು, ಅರಿಷ್ಟವು, ಪ್ರಯಾಣದಲ್ಲಿ ತೊಂದರೆಗಳು.
ಮಿಥುನಪೂರ್ವಾರ್ಧದಲ್ಲಿ ವಸ್ತ್ರಗಳು ಹಾನಿಯಾಗುವುದು, ಮಕ್ಕಳ ಜೊತೆಗೆ ವೈರತ್ವ, ಅನ್ಯಸ್ಥಳಗಳಿಗೆ ಪ್ರಯಾಣ, ಉದ್ಯೋಗದಲ್ಲಿ ತೊಂದರೆ, ವೃತಾ ಕಲಹಗಳು. ವಾರದ ಮಧ್ಯದಲ್ಲಿ ಬಂಧು-ಇಷ್ಟರ ಜೊತೆಗೆ ಸಂತೋಷದಿಂದ ಇರುವುದು. ಪ್ರಯತ್ನಿಸಿದ ಕಾರ್ಯಗಳು ಕೈ ಗೂಡುವುದು. ಶಿಸ್ತಿನಿಂದ ಇರುವ ವಾರ. ಗಣಪತಿ ಪ್ರಾರ್ಥನೆ ಒಳಿತು ತರುವುದು.
ಕಟಕಪೂರ್ವಾರ್ಧದಲ್ಲಿ ಅಜೀರ್ಣವ್ಯಾಧಿಯಿಂದ ಭಾಧೆ, ಸಂತಾಪವು, ಕಾಲುಗಳಲ್ಲಿ ನೋವಿನ ಭಾಧೆ, ಸತ್ವವಿರದ ಭೋಜನ. ಮಧ್ಯದಲ್ಲಿ  ಮಕ್ಕಳ ಜೊತೆ ವೈಮನಸ್ಸು, ಅನ್ಯ ಸ್ಥಳಗಳಿಗೆ ಪ್ರಯಾಣ. ವಾರಾಂತ್ಯದಲ್ಲಿ ಬಂಧುಗಳ ಜೊತೆಗೆ ಸಂತೋಷದಿಂದ ಕಾಲಕಳೆಯಬಹುದು. ಉದ್ಯೋಗದಲ್ಲಿ ಸಂತಸದ ವಾರ್ತೆ. ಅಮ್ಮನವರ ಪ್ರಾರ್ಥನೆಯಿಂದ ಒಳಿತು ಕಾಣಬಹುದು.
ಸಿಂಹಶಾರೀರಿಕ ತೊಂದರೆ ಮನಸ್ಸಿನ ಚಂಚಲತೆ. ಪಿತೃವಿಗೆ ಅನಾರೋಗ್ಯ ಅಥವಾ ಮನಸ್ತಾಪ. ಸರಿಯಾದ ವೇಳೆಗೆ ಊಟಮಾಡದಿರುವುದು. ಗ್ಯಾಸ್ ಟ್ರಬಲ್ ಆಗಬಹುದು. ಕಾಲು ಅಥವಾ ಪಾದಗಳಲ್ಲಿ ನೋವಿನ ಭಾಧೆ. ನೇತ್ರ ತಙ್ಞರು ಅಥವಾ ದಂತವೈದ್ಯರನ್ನು ಭೇಟಿಮಾಡಬಹುದು. ವಿಮೆಯ ಮೂಲಕ ಖರ್ಚು ಹೆಚ್ಚು. ಈಶ್ವರನ ಆರಾಧನೆ ಮತ್ತು ಹನುಮನ ಪ್ರಾರ್ಥನೆ ಮೂಲಕ ಒಳಿತು.
ಕನ್ಯಾಪೂರ್ವಾರ್ಧದಲ್ಲಿ ಸ್ಥಾನ ಭದ್ರತೆಯ ನೆಮ್ಮದಿ, ಧನಲಾಭ, ಯಶಸ್ಸು ವೃದ್ಧಿಯಾಗುವುದು. ಸ್ತ್ರೀಯರ ಜೊತೆಗೆ ಮಾತುಕತೆ, ಧರ್ಮಕಾರ್ಯ ನೆರವೇರುವುದು. ಉತ್ತರಾರ್ಧದಲ್ಲಿ ಸ್ಥಾನದ ಅಭದ್ರತೆ, ಬಂಧುಗಳಿಗೆ ಅನಾರೋಗ್ಯ, ಧನವ್ಯಯವು, ತೆರಿಗೆ ಅಥವಾ ದಂಡದ ಮೂಲಕ ಸಣ್ಣ ಪ್ರಮಾಣದ ಧನವ್ಯಯದ ವಾರ. ಅಥವಾ ವಾಹನ ಅಥವಾ ಸ್ತ್ರೀಯಿಂದ ವೃತಾ ಖರ್ಚು. ವಾರಂತ್ಯದಲ್ಲಿ ಗಂಡ ಅಥವಾ ಹೆಂಡತಿಯ ಕುಂಟುಂಬದೊಂದಿಗೆ ಕಾಲ ಕಳೆಯುವಿರಿ.
ತುಲಾಅತಿಯಾದ ಶಿಸ್ತಿನಿಂದ ಇತರರಿಗೆ ಕಿರಿಕಿರಿ. ಆಹಾರ ಸೇವನೆಯಲ್ಲಿ ವೈವಿಧ್ಯತೆ, ಬಯಸದೆ ಬರುವ ಅವಕಾಶ ಅಥವಾ ಭಾಗ್ಯದಿಂದ ಮನಸ್ಸಿಗೆ ಉಲ್ಲಾಸ. ಆದರೆ, ವಾಸ್ತವ ಬದುಕಿನಿಂದ ದೂರವಿರುವಿರಿ. ದೇಹಾರೋಗ್ಯವು, ಯಶಸ್ಸು ವೃದ್ಧಿಯಾಗುವ ವಾರ. ಸ್ತ್ರೀಯರ ಜೊತೆಗೆ ಮಾತುಕತೆ, ಧರ್ಮಕಾರ್ಯ ನೆರವೇರುವುದಾದರೂ ಹೊಟ್ಟೆ ಅಥವಾ ಕೆಳಗಿನ ಭಾದೆಯಿಂದ ನರಳುವಿರಿ.
ವೃಶ್ಚಿಕಉದ್ಯೋಗ ಅಥವಾ ವ್ಯಾಪಾರದ ಸ್ಥಳದಲ್ಲಿ ಅತೀವ ಒತ್ತಡ ಎದುರಿಸಿದರೂ ಅಂತ್ಯದಲ್ಲಿ ಜಯಶಾಲಿಗಳಾಗುವಿರಿ. ಪ್ರಯಾಣ ಅಥವಾ ಪ್ರವಾಸದ ವಿಷಯಗಳು ಚರ್ಚೆಗೆ ಬಂದರೂ ಅದು ಕೈಗೂಡುವುದಿಲ್ಲ. ಉತ್ತರಾರ್ಧದಲ್ಲಿ ಕೊಂಚ ಮಟ್ಟಿಗೆ ದ್ವಂದ್ವ ನಿಲುವು, ಬಂಧು – ಇಷ್ಟರ ಜೊತೆಗೆ ವೈರತ್ವ ಹಾಗು ಚಂಚಲ ಬುದ್ಧಿಯು. ಸಾಮಾಜಿಕ ಜಾಲತಾಣದಿಂದ ದೂರವಿರುವುದು ಒಳಿತು.
ಧನಸ್ಸುಉದ್ಯೋಗ ಅಥವಾ ವ್ಯಾಪಾರದಲ್ಲಿ ಸ್ತ್ರೀಯಿಂದ ಕಿರಿಕಿರಿ ಅಥವಾ ಮಾತಿನ ಚಕಮಕಿಯಾದರೂ ಧನಾರ್ಜನೆಯಾಗುವುದು. ಜೀವನವು ಆಮೆಗತಿಯಲ್ಲಿ ಸಾಗುತ್ತಿರುವ ಅನುಭವು ಇಲ್ಲೂ ಮುಂದುವರೆಯುವುದು. ಹೂಡಿಕೆ ಮಾಡುವ ಆಲೋಚನೆಯಲ್ಲಿ ಇದ್ದರೆ ಅಥವಾ ಅವಕಾಶಗಳು ಬರುವವಾರವಾದರೂ ಯಾವುದೇ ಆತುರದ ನಿರ್ಧಾರ ಬೇಡ. ಸೋದರ ಮಾವನ ಜೊತೆ ವೈಮನಸ್ಸು ಅಥವಾ ಅನಾರೋಗ್ಯ.
ಮಕರ –   ದೇಹದಲ್ಲಿ ಆಯಾಸ ಕಂಡು ಬಂದರು ಉತ್ಸಾಹದಿಂದ ಕಳೆಯಲು ಇಚ್ಛಿಸುವಿರಿ. ಮನಸ್ಸಿಗೆ ಕ್ಲೇಶವು, ಧನವ್ಯಯವು, ವಸ್ತುಗಳ ಹಾನಿ, ವಾಹನಗಳಿಂದ ಖರ್ಚು. ಶತ್ರುಗಳ ಜೊತೆ ವೃತಾ ವಾದಗಳು, ಸಹೋದರ/ಸಹೋದರಿಯರಿಂದ ದುಃಖದ ವಾರ್ತೆ. ಔಷಧಗಳಿಗಾಲಿ ಖರ್ಚು. ಸಮಯ ಪರಿಪಾಲನೆಗೆ ಸೂಕ್ತವಾರವಲ್ಲ. ಸೂರ್ಯ ನಮಸ್ಕಾರದಿಂದ ಒಳಿತು.
ಕುಂಭ ವ್ಯಾಪಾರ, ವ್ಯವಹಾರಗಳಲ್ಲಿ/ಉದ್ಯೋಗದಲ್ಲಿ, ನೆರೆಹೊರೆಯವರೊಡನೆ ಜಗಳ ಅಥವಾ ವಾದ. ಆಭರಣಗಳ/ ಪಿಠೋಪಕರಣಗಳ ರೀಪೇರಿ ಅಥವಾ ಹೊಸ ಖರೀದಿಯಿಂದ ಖರ್ಚು. ನಿದ್ದೆಯಲ್ಲಿ ಸಮಸ್ಯೆ. ನಿಮ್ಮ ಪ್ರಯತ್ನ, ಆಲೋಚನೆ ದೀರ್ಘಾವದಿಯಲ್ಲಿ ಫಲಕೊಡುವುದು. ವಾರಾಂತ್ಯದಲ್ಲಿ ಧನಾರ್ಜನೆಯಾಗುವುದು. ವಸ್ತ್ರಲಾಭ, ಮನಸ್ಸಿಗೆ ಸೌಖ್ಯವು, ಧೈರ್ಯವು, ಇಷ್ಟವಾದ ಆಸಕ್ತಿದಾಯಕ, ಸಲ್ಲಾಪದ ಮಾತುಕತೆ ಇರುವುದು. ವಿಷ್ಣು ಹಾಗು ಸ್ಕಂದನ ಆರಾಧನೆಯಿಂದ ಒಳಿತು.
 ಮೀನಪುರ್ವಾರ್ಧದಲ್ಲಿ ಸುಖ ಸುದ್ದಿ, ಖರ್ಚು ಹೆಚ್ಚು ಮನಸ್ಸಿಗೆ ವ್ಯಾಕುಲತೆ, ಮಾನಹಾನಿ, ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ನಷ್ಟ. ಅಧಿಕ ಕೆಲಸದ ಒತ್ತಡವಿದ್ದು, ಹೆಚ್ಚಿನ ಕಾಲ ಕೆಲಸದಲ್ಲೇ ಕಳೆಯುವಿರಿ ಮನೆಯಲ್ಲಿ ಉಸಿರು ಗಟ್ಟಿದ ವಾತವರಣ. ಶ್ವಾಸ ಸಂಭಂದಿ ಕಾಯಿಲೆ ಇದ್ದವರಿಗೆ ಉಲ್ಬಣವಾಗಬಹುದು. ಕಾರ್ಮಿಕರಿಗೆ ಯಂತ್ರಗಳಿಂದ ಕಿರಿಕಿರಿ.
  • ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಆಗಸ್ಟ್ 26,27 ಅಥವಾ ಸೆಪ್ಟೆಂಬರ್ 8,9,10 ಅಥವಾ ಸೆಪ್ಟೆಂಬರ್ 23,24,25 ರಂದು ಸೈಕ್ಲೋನ್ ಮಳೆಯಾಗಬಹುದು.(ಬೆಂಗಳೂರು ಮತ್ತು ಸುತ್ತಮುತ್ತಲು)
  • ಎರಡು – ಮೂರು ತಿಂಗಳೊಳಗೆ ಅಮೇರಿಕದ ಯಾವುದಾದರೂ ಒಂದು ಅಥವಾ ಎರಡು ನಗರಗಳು ಜಲಕಂಟಕಕ್ಕೆ ತುತ್ತಾಗಬಹುದು.                                                                                                                                                                                                       – ಜ್ಯೋತಿಷ  – ರವೀ. ಕೃ., ಬೆಂ.
Tags