ಸುದ್ದಿಗಳು

ಇಂದಿನಿಂದ ‘ಬಯಸದೆ ಬಳಿ ಬಂದೆ’ ನಿಮ್ಮ ಸುವರ್ಣ ವಾಹಿನಿಯಲ್ಲಿ

ಬೆಂಗಳೂರು, ಏ.15:

ಬಯಸದೆ ಬಳಿ ಬಂದೆ ಹಾಡು ಕೇಳದವರಾರು ಹೇಳಿ? ಹಿರಿಯ ನಟಿ ಜ್ಯೂಲಿ ಲಕ್ಷ್ಮಿ ಅಭಿನಯಿಸಿದ್ದ ‘ಗಾಳಿಮಾತು’ ಚಿತ್ರದ ಈ ಹಾಡು ಈಗಲೂ ಸಿನಿ ಪ್ರಿಯರ ಬಾಯಲ್ಲಿ ಕೇಳಿ ಬರುತ್ತಿದೆ. ಈ ಜನಪ್ರಿಯ ಹಾಡಿನ ಮೊದಲ ಸಾಲು ಮತ್ತೆ ನೀವು ಗುಂಯಿಗಡಲೇ ಬೇಕು. ಅದಕ್ಕೆ ಕಾರಣ ಇಷ್ಟೇ..

ಬಯಸದೆ ಬಳಿ ಬಂದೆ ಹೆಸರಿನ ಹೊಸ ಧಾರಾವಾಹಿ ಆರಂಭವಾಗಲಿದೆ. ಹೌದು, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಹೊಸ ಧಾರಾವಾಹಿಗೆ ಇದೇ ಹಾಡಿನ ಮೊದಲ ಸಾಲನ್ನು ಶೀರ್ಷಿಕೆಯಾಗಿ ಬಳಕೆ ಮಾಡಿಕೊಳ್ಳಲಾಗಿದೆ.

ಅಲ್ಲೊಂದು ಚೆಂದದ ಕಲಾಕ್ಷೇತ್ರ, ಅದರ ಒಡತಿ ನಾಟ್ಯ ಶಾರದೆ ಮೀನಾಕ್ಷಿ. ಅವರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೇ ಮಗಳು ಕಾವ್ಯಾ. ಆಕೆ ತನ್ನ ಸಮಾಜ ಮತ್ತು ಕುಟುಂಬದ ನ್ಯಾಯಕ್ಕಾಗಿ ಹೋರಾಡುವ ವಕೀಲೆ. ಕನ್ನಡ ಚಲನಚಿತ್ರಗಳ ಯಶಸ್ವಿ ನಿರ್ಮಾಪಕ ಜೀವ. ತನ್ನ ನಿರ್ಮಾಣ ಸಂಸ್ಥೆ ಮುಖಾಂತರ ಸದಭಿರುಚಿಯ ಕನ್ನಡ ಚಿತ್ರಗಳನ್ನು ನೀಡಬೇಕು ಎನ್ನುವುದೊಂದೇ ಆತನ ಆದೆ. ಇವರಿಬ್ಬರು ಸಂದರ್ಭಗಳ ಕೈಸೆರೆಯಾಗಿ ಬಯಸದೆ ಬಳಿ ಬಂದಾಗ, ಜೀವನದಲ್ಲಿ ಉಂಟಾಗುವ ತಿರುವುಗಳೇ ಧಾರಾವಾಹಿಯ ಕಥೆ.

ಶ್ರೀಮಹತಿ ಕಂಬೈನ್ಸ್ ನಿರ್ವಿುಸುತ್ತಿರುವ ಈ ಧಾರಾವಾಹಿಯ ನಿರ್ದೇಶನ ದೇವಾನಂದ್ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಇದರ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ‘ಹರ ಹರ ಮಹಾದೇವ’ ಧಾರಾವಾಹಿ ಖ್ಯಾತಿಯ ವಿನಯ್ ಗೌಡ, ನಿರ್ಮಾಪಕ ಜೀವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರಿಗೆ ಜೋಡಿಯಾಗಿ ಮಿಲನ ಖ್ಯಾತಿಯ ರಕ್ಷಾ ಹೊಳ್ಳ ಅಭಿನಯಿಸುತ್ತಿದ್ದಾರೆ.

ಇವರಿಗೆ ಜೊತೆಯಾಗಿ ಶ್ವೇತಾ ರಾವ್, ಮೈಸೂರು ಮಾಲತಿ, ಭಾಗ್ಯ, ಅನಿರುದ್ಧ್, ಸುನೀಲ್ ಸಾಗರ್, ವಿಕಾಸ್ ಮತ್ತು ಶೋಭಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

‘ಸಾಹೋ’ ಚಿತ್ರದ ರೊಮ್ಯಾನ್ಸ್ ಸೀನ್ ಲೀಕ್!!!

#balkaninews #starsuvarna #starsuvarnaserials #kannadaserials #bayasadhebalibandhekannadaserial

Tags