ಸುದ್ದಿಗಳು

ಮ್ಯಾನ್ V/S ವೈಲ್ಡ್ ನಲ್ಲಿ ರಜನಿ ಜೊತೆ ಇರಿಲಿದ್ದಾರ ಅಕ್ಷಯ್ ಹಾಗೂ ದರ್ಶನ್.. !!

ವಿಶ್ವಮಟ್ಟಕ್ಕೆ ಖ್ಯಾತಿ ಪಡೆಯಲಿರುವ ಕರ್ನಾಟಕ ಪ್ರವಾಸೋದ್ಯಮ ..!

ಜನಪ್ರಿಯ ಚಲನಚಿತ್ರ ತಾರೆ ರಜನಿಕಾಂತ್ ಈಗ ಬಂಡೀಪುರ ಕಾಡಿನಲ್ಲಿ ಚರಣ ಮಾಡಲಿದ್ದಾರೆ ಹೌದು ಇದಕ್ಕಾಗಿ ಬಂಡೀಪುರ ಫಾರೆಸ್ಟ್ 28 ರಿಂದ 30ರ ವರೆಗೂ ಪ್ರತಿ ದಿನ 6 ಗಂಟೆಗಳಂತೆ ರಿಸರ್ವ್ ಕೂಡ ಮಾಡಲಾಗಿದೆ. ಜನಪ್ರಿಯ ಅಂತರರಾಷ್ಟ್ರೀಯ ಡೋಕಿಮೆಂಟರಿ ಹಾಗೂ ಚಾರಣ ಮಾಡುವ ನಟ ಮತ್ತು ಸಾಕ್ಷ್ಯಚಿತ್ರ ತಯಾರಕ ಬೇರ್ ಗ್ರಿಲ್ಸ್ ತಂಡವು ಸೋಮವಾರ ಸಂಜೆಯಿಂದ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲು ನಮ್ಮ ಕರ್ನಾಟಕದ ಟೈಗರ್ ರಿಸರ್ವ್ ಫಾರೆಸ್ಟ್ ಗೆ ಬರಲಿದ್ದಾರೆ. ಮಂಗಳವಾರ ಆರು ಗಂಟೆಗಳ ಕಾಲ ಮತ್ತು ಮತ್ತೆ ಗುರುವಾರ ಚಿತ್ರೀಕರಣ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟಿಷ್ ಸಾಹಸಿ ಬೇರ್ ಗ್ರಿಲ್ಸ್ ಅವರೊಂದಿಗೆ ಉತ್ತರ ಭಾರತದ ಕಾಡುಗಳಲ್ಲಿ ಸರಣಿಗಾಗಿ ಚಿತ್ರೀಕರಿಸಿದ ನಂತರ ಈ ಸರಣಿಯು ಭಾರತದ ಗಮನ ಸೆಳೆಯಿತು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಜನವರಿ 28 ಮತ್ತು 30 ರಂದು ದಿನಕ್ಕೆ ಆರು ಗಂಟೆಗಳ ಕಾಲ ವಿಶೇಷ ಅತಿಥಿಯೊಂದಿಗೆ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಮಂಗಳವಾರ ಇದು ರಜನಿಕಾಂತ್ ಅವರೊಂದಿಗೆ ಇದ್ದು, 30 ರಂದು ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ನಿರೀಕ್ಷೆಯಿದೆ. ಈ ನಡುವಿನಲ್ಲಿ ದರ್ಶನ್ ಕೂಡ ಬರುವ ಸಾದ್ಯತೆ ಇದೆ ಎಂಬ ಗಾಸಿಪ್ ಗಳು ಹರಿದಾಡುತ್ತಿವೆ.

“ಸುಲ್ತಾನ್ ಬಟೇರಿ ಹೆದ್ದಾರಿ ಮತ್ತು ಮುಲ್ಲೆಹೋಲೆ, ಮದ್ದೂರ್ ಮತ್ತು ಕಲ್ಕೆರೆ ಶ್ರೇಣಿಗಳ ವ್ಯಾಪ್ತಿಯಲ್ಲಿ ಶೂಟಿಂಗ್‌ಗೆ ಅನುಮತಿ ನೀಡಲಾಗಿದೆ. ಪ್ರವಾಸೋದ್ಯಮೇತರ ವಲಯಗಳಲ್ಲಿ ಚಿತ್ರೀಕರಣ ನಡೆಯಲಿದೆ. ವೈಲ್ಡ್ ಕರ್ನಾಟಕ ಶೂಟಿಂಗ್‌ಗೆ ಅನುಮತಿ ನೀಡಿದ್ದಾರೆ. ಹಾಗೆ ಎಲ್ಲಾ ರೀತಿಯ ಶಿಸ್ತುಬದ್ಧಿನ ಕ್ರಮಕೈಗೊಂಡಿರುವುದಾಗಿ ಅಧಿಕಾರಿ ಹೇಳಿದರು.

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ಹೆಚ್ಚುತ್ತಿದೆ, ಇಲಾಖೆ ಎಚ್ಚರಿಕೆ ವಹಿಸಬೇಕು, ಇದು ಹೆಚ್ಚು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಸಂರಕ್ಷಣಾ ತಜ್ಞರು ಹೇಳಿದ್ದಾರೆ.

#ManVSWild #Karnataka #DiscoverKarnataka #ExploreKarnataka #Bandipura #Forest #RajaniKanta #BearGrylls

Tags