ಸುದ್ದಿಗಳು

ಆತ್ಮದ ಹೃದಯಕ್ಕೆ ಲಾಕ್ ಹಾಕಲು ‘ಬೀಗ’ ರೆಡಿ

ಬೀಗ- ಒಂದು ಆತ್ಮದ ಹೃದಯಕ್ಕೆ ಲಾಕ್.. ಹೀಗಂತ ಹೊಸಬರ ತಂಡವೊಂದು ಗಾಂಧಿನಗರದ ಅಂಗಳಕ್ಕೆ ಬಂದಿದೆ. ಎಚ್ ಎಂ ಶ್ರೀ ನಂದನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ.

ಈ ಹಿಂದೆ ಅಗ್ರಜ ಮತ್ತುಲೀ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಶ್ರೀ ನಂದನ್ ಅವರಿಗಿದು ಮೂರನೇ ಚಿತ್ರ. ಮೊದಲೆರೆಡು ಕಮರ್ಶಿಯಲ್ ಚಿತ್ರ ಮಾಡಿದ್ದ ಇವರು ಮೂರನೇ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳುಳ್ಳ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ನಟ ರವಿಶಂಕರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ‍್ಳುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಸಹೇರಾ ಅಫ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಇವರು ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ರೂಪದರ್ಶಿಯಾಗಿ ಕೆಲಸ ಮಾಡುತ್ತಿರುವ ಅವರು ‘ಬೀಗ’ ಶೀರ್ಷಿಕೆಯ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ಮಾತ್ರವಲ್ಲದೆ, ಹಿಂದಿ- ತೆಲುಗಿನಲ್ಲಿಯೂ ಬಣ್ಣದ ಬದುಕು ಆರಂಭಿಸುವ ತವಕದಲ್ಲಿದ್ದಾರೆ. ಮತ್ತು ಹಿಂದಿ- ತೆಲುಗಿನಲ್ಲಿಯೂ ಬಣ್ಣದ ಬದುಕು ಆರಂಭಿಸುವ ತವಕದಲ್ಲಿರುವ ನಾಯಕಿ ಸಹೇರಾ ಅವರಿಗೆ ಟಾಲಿವುಡ್ ನಲ್ಲಿ ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ.

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಬೆಂಗಳೂರಿನಲ್ಲಿಯೇ ಎರಡನೇ ಹಂತದ ಚಿತ್ರೀಕರಣ ನಡೆಸುತ್ತಿದೆ. ಚಿತ್ರವನ್ನು ವಿ.ಎಮ್ .ಆರ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ಮುನಿಹನುಮಪ್ಪ ಮತ್ತು ಕೆ ರಾಜೇಶ್ ಶರ್ಮ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

 

@sunil javali

Tags